ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡ ಬಳಿ ನಾಯಿ ಹೊತ್ತೊಯ್ಯುತ್ತಿದ್ದ ಚಿರತೆ ಸಾವನ್ನಪ್ಪಿದೆ. ಶುಕ್ರವಾರ
ನಸುಕಿನ ವೇಳೆ ನಾಯಿ ಬೇಟೆಯಾಡಿರುವ ಚಿರತೆ ಅದನ್ನು ಹೊತ್ತು ರಸ್ತೆ ದಾಟುವಾಗ
ಲಾರಿಯೊಂದು ವೇಗವಾಗಿ ಬಂದು ಚಿರತೆಗೆ ಗುದ್ದಿದ ಪರಿಣಾಮ ಚಿರತೆ ಸ್ಥಳದಲ್ಲೇ ಸತ್ತು
ಬಿದ್ದರೆ, ನಾಯಿ ಸುಮಾರು 100 ಮೀಟರ್ ದೂರದಲ್ಲಿ ಸತ್ತು ಬಿದ್ದಿದೆ. ಬೆಳಗಿನ
ಜಾವ ರಸ್ತೆ ಪಕ್ಕದಲ್ಲಿ ಸತ್ತು ಬಿದ್ದ ಚಿರತೆಯನ್ನು ಕಂಡು ಬೆಚ್ಚಿ ಬಿದ್ದ ಸ್ಥಳೀಯರು
ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಹಾಗೂ ಅರಣ್ಯ ಇಲಾಖೆ
ಸಿಬ್ಬಂದಿ ಸ್ಥಳಕ್ಕೆ ಬಂದು ಭೇಟಿ ನೀಡಿದಾಗ ಅಪಘಾತದಿಂದ ನಡೆದ ಘಟನೆ ಎಂದು
ತಿಳಿಸಿದ್ದಾರೆ. ಹೇಮಗುಡ್ಡದ ಗುಡ್ಡ ಗಾಡು ಪ್ರದೇಶದಲ್ಲಿ ಚಿರತೆಗಳು ಹೆಚ್ಚು
ವಾಸವಾಗಿದ್ದು ಗ್ರಾಮದಲ್ಲಿ ಈಗ ಭಯದ ವಾತಾವರಣ ನಿರ್ಮಾಣವಾಗಿದೆ. Friday, June 5, 2020
ನಾಯಿ ಬೇಟೆಯಾಡಿ ಹೊತ್ತೊಯ್ಯುತ್ತಿದ್ದ ಚಿರತೆ ಸಾವು!
ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡ ಬಳಿ ನಾಯಿ ಹೊತ್ತೊಯ್ಯುತ್ತಿದ್ದ ಚಿರತೆ ಸಾವನ್ನಪ್ಪಿದೆ. ಶುಕ್ರವಾರ
ನಸುಕಿನ ವೇಳೆ ನಾಯಿ ಬೇಟೆಯಾಡಿರುವ ಚಿರತೆ ಅದನ್ನು ಹೊತ್ತು ರಸ್ತೆ ದಾಟುವಾಗ
ಲಾರಿಯೊಂದು ವೇಗವಾಗಿ ಬಂದು ಚಿರತೆಗೆ ಗುದ್ದಿದ ಪರಿಣಾಮ ಚಿರತೆ ಸ್ಥಳದಲ್ಲೇ ಸತ್ತು
ಬಿದ್ದರೆ, ನಾಯಿ ಸುಮಾರು 100 ಮೀಟರ್ ದೂರದಲ್ಲಿ ಸತ್ತು ಬಿದ್ದಿದೆ. ಬೆಳಗಿನ
ಜಾವ ರಸ್ತೆ ಪಕ್ಕದಲ್ಲಿ ಸತ್ತು ಬಿದ್ದ ಚಿರತೆಯನ್ನು ಕಂಡು ಬೆಚ್ಚಿ ಬಿದ್ದ ಸ್ಥಳೀಯರು
ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಹಾಗೂ ಅರಣ್ಯ ಇಲಾಖೆ
ಸಿಬ್ಬಂದಿ ಸ್ಥಳಕ್ಕೆ ಬಂದು ಭೇಟಿ ನೀಡಿದಾಗ ಅಪಘಾತದಿಂದ ನಡೆದ ಘಟನೆ ಎಂದು
ತಿಳಿಸಿದ್ದಾರೆ. ಹೇಮಗುಡ್ಡದ ಗುಡ್ಡ ಗಾಡು ಪ್ರದೇಶದಲ್ಲಿ ಚಿರತೆಗಳು ಹೆಚ್ಚು
ವಾಸವಾಗಿದ್ದು ಗ್ರಾಮದಲ್ಲಿ ಈಗ ಭಯದ ವಾತಾವರಣ ನಿರ್ಮಾಣವಾಗಿದೆ.
Subscribe to:
Post Comments (Atom)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ