ಭಾರತದ ಜನರು ಕೊರೋನಾ ನಂತರ ಹೆಚ್ಚು ಭಯ ಬೀಳುತ್ತಿರುವುದು ಮಿಡತೆಯ ಹೆಸರು ಕೇಳಿ. ರಾತ್ರೋ ರಾತ್ರಿ ದಾಳಿ ಮಾಡಿ ಬೆಳಗಾಗುವ ವೇಳೆಗೆ ಸಂಪೂರ್ಣ ಬೆಳೆಯನ್ನ ಮುಕ್ಕಿ ಸಂಪೂರ್ಣವಾಗಿ ನಾಶ ಮಾಡುತ್ತವೆ. ಈ ಮಾರಿ ಮಿಡತೆ ಈಗ ತುಮಕೂರಿಗೂ ಕಾಲಿಟ್ಟು ಬೆಳೆನಾಶ ಮಾಡುವ ಭೀತಿ ಶುರುವಾಗಿದೆ. ಜಿಲ್ಲೆಯ ಮಧುಗಿರಿ ಭಾಗ ಹಾಗೂ ತುಮಕೂರು ಗ್ರಾಮಾಂತರ ಭಾಗದಲ್ಲಿಯೂ ಮಿಡತೆಗಳು ಬಿಡಿ ಬಿಡಿಯಾಗಿ ಸಂಚರಿಸಿ ಬೆಳೆ ನಾಶಮಾಡುತ್ತಿವೆ. ಗ್ರಾಮಾಂತರದ ಬ್ಯಾಲ್ಯ ಗ್ರಾಮದಲ್ಲಿ ಮಿಡತೆಗಳಿಂದ ಜೋಳದ ಬೆಳೆ ನಾಶವಾಗಿದೆ. ಇದಕ್ಕಾಗಿ ಅಲ್ಲಿಯ ಯುವಕರು ಶೂನ್ಯ ಬಂಡವಾಳದಲ್ಲಿ ಔಷಧಿ ಕಂಡು ಹಿಡಿದಿದ್ದಾರೆ. ಇದ್ದಿಲು ಮರಳು ಹಾಗೂ ಸೀಮೆಸುಣ್ಣ ಬಳಸಿ ಕಂಡು ಹಿಡಿದಿರುವ ಔಷಧಿಯು ಬೆಳೆಯನ್ನು ಸಂರಕ್ಷಿಸುತ್ತಿದೆ. ಕೊರೋನಾ ಮುಕ್ತ ಚಾಮರಾಜನಗರ: ಕೇಂದ್ರ ಆರೋಗ್ಯ ಸಚಿವರಿಂದ ಜಿಲ್ಲಾಡಳಿತಕ್ಕೆ ಶಹಬ್ಬಾಸ್ ಗಿರಿ
ಎಕರೆಗೆ 40 ಲೀ ನೀರಿನಲ್ಲಿ ತಲಾ ಅರ್ಧ ಕೆಜಿ ಮರಳು ಮಿಶ್ರಿತ ಮಣ್ಣು ಹಾಗೂ ಇದ್ದಿಲಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಅದಕ್ಕೆ 15-20 ಮಿಲಿಯಷ್ಟು ಸುಣ್ಣದ ದ್ರಾವಣ ಮಿಶ್ರಣ ಮಾಡಬೇಕು. ಬಳಿಕ ಎರಡು ಬಾರಿ ಬೆಳೆಗೆ 15 ದಿನಗಳಿಗೆ ಒಮ್ಮೆ ಸಿಂಪಡನೆ ಮಾಡಬೇಕು. ಇದರಿಂದ ಮಿಡತೆ ಹಾವಳಿಯನ್ನು ತಪ್ಪಿಸಲು ಸಾಧ್ಯವಾಗಿದ್ದು, ಇಲ್ಲಿಯ ರೈತರು ಯಶಸ್ವಿಯಾಗಿದ್ದಾರೆ.
ಬೆಳೆಗಳ ಮೇಲೆ ಬೀಳುವ ಈ ಮಿಶ್ರಣವನ್ನ ಸೇವಿಸಿದ ಮಿಡತೆ ಸಂಪೂರ್ಣವಾಗಿ ನಾಶವಾಗುತ್ತವೆ. ಮರಳು ಮಿಶ್ರಿತ ಮಣ್ಣು ಮಿಡಿತೆಯ ಜೀರ್ಣಕ್ರಿಯೆಯ ಮೇಲೆ ಪ್ರಭಾವ ಬೀರಿದರೆ, ಇದ್ದಿಲು ಹಾಗೂ ಸುಣ್ಣ ಅವು ಹಾರದಂತೆ ಮಾಡುತ್ತವೆ.
ಒಟ್ಟಾರೆ ಈ ಮಿಶ್ರಣವನ್ನು ಮನೆಯಲ್ಲಿಯೇ ತಯಾರಿಸಬಹುದಾಗಿದ್ದು, ರೈತರು ಮಿಡತೆ ಹಾವಳಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ. ತುಮಕೂರಿನ ರೈತರಾದ ಪ್ರತಾಪ್ ಹಾಗೂ ಸ್ನೇಹತರಾದ ಸುರೇಶ್ ಅಭಿಲಾಷ್ ತಂಡ ಈ ದ್ರಾವಣದಲ್ಲಿ ಯಶಸ್ವಿಯಾಗಿದ್ದು ಇತರೆ ರೈತರು ಇದನ್ನ ಬಳಸಬಹುದಾಗಿದೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ