WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, June 6, 2020

ಕೊರೊನಾ ವಾರಿಯರ್​ಗಳಿಗೆ ಆವಾಜ್ ಹಾಕಿದ ಅಜ್ಜಿ; ಕಕ್ಕಾಬಿಕ್ಕಿಯಾದ ಅಧಿಕಾರಿಗಳ ತೊಳಲಾಟ ಕೇಳುವವರಾರು?

ವಿಜಯಪುರ(ಜೂ. 06): ಕರೋನಾ ಪಾಸಿಟಿವ್ ಬಂದವರನ್ನು ಕರೆಯಲು ಬಂದ ಅಧಿಕಾರಿಗಳಿಗೆ ವೃದ್ಧೆಯೊಬ್ಬರು ಬಾಯಿಗೆ ಬಂದಂತೆ ಆವಾಜ್ ಹಾಕಿದ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ತಾಂಡಾದಲ್ಲಿ ನಡೆದಿದೆ. ವೃದ್ಧೆಯ ಆರ್ಭಟ ಕಂಡು ತಹಸೀಲ್ದಾರ ಎಂ. ಎನ್. ಬಳಿಗಾರ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ.

ಮಹಾರಾಷ್ಟ್ರದಿಂದ ಬಂದವರಿಗೆ ವಿಜಯಪುರ ಜಿಲ್ಲಾಡಳಿತ ಈ ಮೊದಲು 14 ದಿನ ಸಾಂಸ್ಥಿಕ ಕ್ವಾರಂಟೈನ್ ಮಾಡಿತ್ತು. ಬಳಿಕ ಸರಕಾರದ ನಿರ್ದೇಶನದಂತೆ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಅವರನ್ನು ಹೋಂ ಕ್ವಾರಂಟೈನ್​ಗೆ ಕಳುಹಿಸಿತ್ತು. ಆದರೆ, ವರದಿ ಬರುವ ಮುನ್ನವೇ ಇವರು ಹೋಂ ಕ್ವಾರಂಟೈನ್​ಗೆ ತೆರಳಿದ್ದರು. ಈಗ ಅವರ ವರದಿ ಬಂದಿದ್ದು, ಅವರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿಯನ್ನು ಕರೆದೊಯ್ಯಲು ಅಧಿಕಾರಿಗಳು ತಾಂಡಾಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ತಾಂಡಾದಲ್ಲಿನ ಆ ವ್ಯಕ್ತಿಯ ಮನೆಗೆ ಹೋಗುತ್ತಿದ್ದಂತೆ ಮನೆಯಲ್ಲಿದ್ದ ಅಜ್ಜಿ ಆವಾಜ್ ಹಾಕುತ್ತಲೇ ಹೊರಗೆ ಬಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.

ಅವರನ್ನು ಒಯ್ಯಿರಿ, ಎರಡು ತಿಂಗಳು ಬಿಡಬೇಡಿ, ಅವರಿಗೇನು ಊಟ ಹಾಕ್ತಿರೋ ಹಾಕಿ. ನಿಮಗ ಯಾವ ಸೂ... ಮಗಾ ಹೇಳ್ಯಾನೋ ಅವನನ್ನು ಕೊಲೆ ಮಾಡ್ತಿನಿ ನಾನು. ಅವನನ್ನ ಕೊಲೆ ಮಾಡಲಿಲ್ಲ ಅಂದ್ರ ನಮ್ಮ ಅಪ್ಪನಿಗೆ ನಾನು ಹುಟ್ಟಿಲ್ಲ ಎಂದು ತಿಳಕೋರಿ ಎಂದು ಅಜ್ಜಿ ಕೂಗಾಟ, ರಂಪಾಟ ನಡೆಸಿದ್ದಾಳೆ. ಬೆಂಗಳೂರು, ಮಂಗಳೂರಲ್ಲಿ 2 ಸಾವು; ರಾಜ್ಯದಲ್ಲಿ ಒಂದೇ ದಿನ 378 ಕೇಸ್; 5 ಸಾವಿರ ಗಡಿದಾಟಿದ ಒಟ್ಟು ಪ್ರಕರಣ

ನಮ್ಮ ತಲೆ ಮೇಲೆ ರೇವಸಿದ್ದೇಶ್ವರ ದೇವರಿದ್ದಾನೆ. ನಮಗೆ ಏನೂ ಆಗೋದಿಲ್ಲ. ನಮಗೆ ಸಾವು ಬರೋದಿಲ್ಲ. ಏನೂ ಆಗೋದಿಲ್ಲ. ಮಂದಿ ಮಾತು ಕೇಳಿ ನಮಗ ಒಯ್ಯಲು ಬಂದೀರಿ. ಬರಲಿ ಕೊರೋನಾ ನಮಗ ಬರಲಿ. ಅವರಿಗೇನಾದ್ರೂ ಆದ್ರೆ ನಿಮ್ಮನ್ನ ಕೊಲೆ ಮಾಡದೆ ಬಿಡೋದಿಲ್ಲ ಎಂದು ಅಧಿಕಾರಿಗಳಿಗೆ ಈ ವೃದ್ಧೆ ಎಚ್ಚರಿಕೆ ನೀಡಿದ್ದಾರೆ.

ಕೊನೆಗೂ ಹರಸಾಹಸ ಪಟ್ಟ ಅಧಿಕಾರಿಗಳು ಮನೆಯವರನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಕೊರೊನಾ ಪಾಸಿಟಿವ್ ರೋಗಿಗಳನ್ನು ತರಲು ಹೋಗುವ ಮತ್ತು ಆರೋಗ್ಯ ತಪಾಸಣೆಗೆ ಹೋಗುವ ಕೊರೊನಾ ವಾರಿಯರ್ಸ್​ಗೆ ಜನರ ಅಸಹಕಾರ ಮತ್ತು ಬೈಗುಳಗಳು ನೈತಿಕ ಸ್ಥೈರ್ಯವನ್ನು ಕುಂದಿಸುವಂತೆ ಮಾಡುತ್ತಿವೆ. ಆದರೂ, ಇವರು ಸ್ವಾಭಿಮಾನವನ್ನು ಬದಿಗೊತ್ತಿ ಕಾಯಕ ಮಾಡುತ್ತಿದ್ದಾರೆ. ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಪ್ರಾಣದ ಹಂಗು ತೊರೆದು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಗಲಿರುಳು ಶ್ರಮಿಸುತ್ತಿರುವ ಈ ಕೊರೊನಾ ವಾರಿಯರ್ಸ್​ಗೆ ಒಂದು ಸಲಾಂ ಹೇಳಲೇಬೇಕು.
(ಮಾಹಿತಿNews18 ಕನ್ನಡಕೃಪೆ )  

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ