
ಶಿವಕುಮಾರ್ಗೆ ವಿನಯ್ ಗುರೂಜಿ ಸಲಹೆ
ಡಿ.ಕೆ
ಶಿವಕುಮಾರ್ ಅವರ ಮಗಳಿಗೆ ಕಂಕಣ ಭಾಗ್ಯ ಕಲ್ಪಿಸಿದ್ದು ವಿನಯ್ ಗುರೂಜಿ ಎಂಬ ಮಾಹಿತಿ
ತಿಳಿದುಬಂದಿದೆ. ಮಾರ್ಚ್ 19ರಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡರ ಮಗಳ ಮದುವೆ
ನಡೆದಿತ್ತು. ಅಂದು ಚಿಕ್ಕಮಗಳೂರಿಗೆ ಡಿ.ಕೆ.ಶಿವಕುಮಾರ್ ಆಗಮಿಸಿದ್ರು. ಈ ವೇಳೆ ವಿನಯ್
ಗುರೂಜಿ ಕೂಡಾ ಮದುವೆಗೆ ಆಗಮಿಸಿದ್ರು. ಈ ವೇಳೆ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದ
ಶಿವಕುಮಾರ್, ತಮ್ಮ ಮಗಳ ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಆಗ ವಿನಯ್ ಗುರೂಜಿ ಮದುವೆಗೆ ಒಪ್ಪಿಗೆ ಸೂಚಿದ್ದಾರೆ. ಹೀಗಾಗಿ ಇಂದು
ಡಿ.ಕೆ.ಶಿವಕುಮಾರ್ ಮಗಳ ಮದುವೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ನಿಮ್ಮ ಸಲಹೆ
ಆಶೀರ್ವಾದದಂತೆ ನಮ್ಮ ಮಗಳ ಮದುವೆ ನಿಶ್ಚಿತವಾಗಿದೆ ಅಂತಾ ದೂರವಾಣಿ ಕರೆ ಮೂಲಕ
ಡಿ.ಕೆ.ಶಿವಕುಮಾರ್, ವಿನಯ್ ಗುರೂಜಿಗೆ ಧನ್ಯವಾದ ತಿಳಿಸಿದ್ದಾರೆ ಎನ್ನಲಾಗಿದೆ.

No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ