WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, June 19, 2020

ರಾಜ್ಯದ ಜನರೇ ಎಚ್ಚರ : ಕರ್ನಾಟಕದ ಮೂಲೆಮೂಲೆಗೂ ಎಂಟ್ರಿ ಕೊಟ್ಟಿದೆ ಕೊರೋನಾ..!

ಬೆಂಗಳೂರು, ಜೂ.19- ರಾಜ್ಯದ ಜನರು ಎಚ್ಚರ ವಹಿಸದಿದ್ದರೆ ಮಹಾಮಾರಿ ಕೊರೊನಾಗೆ ಬಲಿಯಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಬೀದಿಬದಿಯ ವ್ಯಾಪಾರಿಯಿಂದ ಹಿಡಿದು ಕೊರೊನಾ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸುತ್ತಿರುವ ವೈದ್ಯರು, ಪೊಲೀಸರು, ಜನಪ್ರತಿನಿಧಿಗಳನ್ನೂ ಕೊರೊನಾ ತನ್ನ ಕರಾಳ ಕಬಂಧ ಬಾಹುವಿನಲ್ಲಿ ಹಿಡಿದಿಟ್ಟುಕೊಳ್ಳುತ್ತಿದೆ.
ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ರಾಜ್ಯದ ಜನ ಎಚ್ಚರ ವಹಿಸಬೇಕಿದೆ. ಕಿಲ್ಲರ್ ಕೊರೊನಾದ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಲಾಕ್‍ಡೌನ್ ತೆರವಾಗಿದೆ.

ನಮಗೇನೂ ಆಗುವುದಿಲ್ಲ ಎಂದು ಉಡಾಫೆ ಧೋರಣೆ ತಾಳಿದರೆ ಕೊರೊನಾ ತಗುಲಿ ಯಾತನೆ ಅನುಭವಿಸುವ ದಿನಗಳು ದೂರವಿಲ್ಲ. ಅಂತಹ ಸನ್ನಿವೇಶಗಳು ರಾಜ್ಯದಲ್ಲಿ ಸೃಷ್ಟಿಯಾಗುತ್ತಿವೆ.
ಪ್ರತಿದಿನ 5, 10, 20, 30 ಸೋಂಕಿತರು ಕಾಣಿಸಿಕೊಳ್ಳುತ್ತಿದ್ದ ಪ್ರಮಾಣ ಈಗ 300 ರಿಂದ 500ಕ್ಕೆ ಏರಿಕೆಯಾಗುತ್ತಿದೆ. ಮಾಸ್ಕ್, ಸ್ಯಾನಿಟೈಜರ್ ಎಲ್ಲೆಂದರಲ್ಲಿ ದೊರೆಯುತ್ತಿತ್ತು. ಈಗ ಅದರ ಪ್ರಮಾಣವೂ ಕೂಡ ಕ್ಷೀಣಿಸಿದಂತೆ ಕಂಡುಬರುತ್ತಿದೆ.
ಆಸ್ಪತ್ರೆಗಳಲ್ಲಿ ಐಸೊಲೇಷನ್ ಸಂಖ್ಯೆ ಕಡಿಮೆ ಇತ್ತು. ಜನರಲ್ಲಿ ಸೋಂಕಿನ ಬಗ್ಗೆ ಭಯ ಇತ್ತು. ಈಗ ಜನರಲ್ಲಿ ಸೋಂಕಿನ ಬಗ್ಗೆ ಭಯ ಇಲ್ಲ. ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ, ಮಾಸ್ಕ್ ಧರಿಸುತ್ತಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ.
ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಹಾಗಾಗಿ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಜತೆಜತೆಗೆ ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ. ವಿಶೇಷವಾಗಿ ಮಕ್ಕಳು, ವೃದ್ಧರು, ರೋಗಿಗಳು ಸೋಂಕಿನಿಂದ ಬಲಿಯಾಗುತ್ತಿದ್ದಾರೆ. ಹಾಗಾಗಿ ಈ ರೋಗವನ್ನು ನಿಯಂತ್ರಿಸುವುದೊಂದೇ ಮಾರ್ಗವಾಗಿದ್ದು, ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಬೇಕು.
ಮೊದಮೊದಲು ಸರ್ಕಾರ ಉಚಿತವಾಗಿ ಕ್ವಾರಂಟೈನ್ ಮಾಡುತ್ತಿತ್ತು. ಪ್ರಾಥಮಿಕ, ದ್ವಿತೀಯ ಸಂಪರ್ಕವನ್ನು ಕೂಡ ಪತ್ತೆಹಚ್ಚಿ ಶಂಕಿತರನ್ನು ಕ್ವಾರಂಟೈನ್ ಮಾಡಿ ಸೋಂಕಿತರನ್ನು ಆಸ್ಪತ್ರೆಗೆ ಕಳುಹಿಸುವ ಕೆಲಸ ಮಾಡುತ್ತಿತ್ತು. ಈಗ ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚುವ ಗೋಜಿಗೆ ಹೋಗುತ್ತಿಲ್ಲ. ಸೋಂಕಿತರನ್ನು ಮಾತ್ರ ಚಿಕಿತ್ಸೆಗೆ ದಾಖಲು ಮಾಡಲಾಗುತ್ತಿದೆ.
ಇತ್ತ ಆಸ್ಪತ್ರೆಗಳಲ್ಲಿ ಸೋಂಕಿತರ ಪ್ರಮಾಣ ಏರಿಕೆಯಾಗಿ ಐಸೊಲೇಷನ್ ಘಟಕಗಳು, ಕ್ವಾರಂಟೈನ್ ಕೇಂದ್ರಗಳು ಕೂಡ ಭರ್ತಿಯಾಗಿವೆ. ಉಚಿತವಾಗಿ ಕ್ವಾರಂಟೈನ್ ಕೇಂದ್ರಗಳನ್ನು ಸರ್ಕಾರ ನಿರ್ವಹಿಸುತ್ತಿತ್ತು. ಮತ್ತೆ ಕೆಲವೆಡೆ ಕ್ವಾರಂಟೈನ್ ಕೇಂದ್ರದ ವೆಚ್ಚವನ್ನು ಶಂಕಿತರೇ ಭರಿಸಬೇಕಾಗಿದೆ.
ಮಹಾನಗರಗಳಲ್ಲಿ ಬೀದಿಬದಿಯ ವ್ಯಾಪಾರಿಯಿಂದ ಹಿಡಿದು ವೈದ್ಯರವರೆಗೆ ಕೊರೊನಾ ಆವರಿಸಿದೆ. ಪೊಲೀಸರು, ನರ್ಸ್, ಟ್ಯಾಕ್ಸಿ ಚಾಲಕರು, ಪತ್ರಕರ್ತರು, ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡಿದ ಆಶಾ ಕಾರ್ಯಕರ್ತೆಯರು ಹೀಗೆ ಬಹುತೇಕರಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ.
ಮಹಾನಗರಗಳಲ್ಲಿ ಕಂಟೈನ್ಮೆಂಟ್ ಝೋನ್‍ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪೊಲೀಸ್ ಠಾಣೆ, ಸರ್ಕಾರಿ ಕಚೇರಿಗಳು, ತೆರಿಗೆ ಮತ್ತು ವಾಣಿಜ್ಯ ಇಲಾಖೆ ಕಚೇರಿ, ಇವಿಷ್ಟೇ ಅಲ್ಲ, ಶಕ್ತಿಕೇಂದ್ರಕ್ಕೆ ಕೊರೊನಾ ವಕ್ಕರಿಸಿ ಸೀಲ್‍ಡೌನ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಹೀಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಕೊರೊನಾ ಶಂಕಿತರು ಪತ್ತೆಯಾಗುತ್ತಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸರ್ಕಾರಿ ಆಸ್ಪತ್ರೆಗಳ ಜತೆಗೆ ಖಾಸಗಿ ಆಸ್ಪತ್ರೆಗಳಲ್ಲೂ ಕೂಡ ಕೊರೊನಾ ಚಿಕಿತ್ಸೆ ಪ್ರಾರಂಭವಾಗಬೇಕಿದೆ.
ಇನ್ನು ಮುಂದೆ ಚಿಕಿತ್ಸಾ ವೆಚ್ಚವನ್ನು ಜನರೇ ಭರಿಸಬೇಕಾಗಬಹುದು. ನಮ್ಮ ಮನೆಗಳೇ ನಮಗೆ ಕ್ವಾರಂಟೈನ್ ಕೇಂದ್ರಗಳಾಗಬಹುದು. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು.
ಆರೋಗ್ಯ ಇಲಾಖೆ ಸೂಚಿಸಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಅಗತ್ಯವಾಗಿ ಪಾಲಿಸಬೇಕು. ಮಾಸ್ಕ್, ಸ್ಯಾನಿಟೈಜರ್‍ಗಳನ್ನು ತಪ್ಪದೆ ಬಳಸಬೇಕು. ಇಲ್ಲವಾದರೆ ಮಹಾಮಾರಿ ಕೊರೊನಾಕ್ಕೆ ಬಲಿಯಾಗಬೇಕಾಗುತ್ತದೆ ಎಚ್ಚರ..!
(ಮಾಹಿತಿ


ಈ ಸಂಜೆ
ಕೃಪೆ )

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ