
ವಿಜಯಪುರ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಅನೇಕ ನಗರ ಮತ್ತು ಗ್ರಾಮೀಣ ಪ್ರದೇಶಗಳ ಲಕ್ಷಾಂತರ ಸಂಖ್ಯೆಯ ಜನ ಮತ್ತು ಜಾನುವಾರುಗಳಿಗೆ ಹಿಪ್ಪರಗಿ ಜಲಾಶಯ ಸಂಜೀವಿನಿಯಾಗಿದ್ದು, ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಜಲಾಶಯ ನೋಡುಗರನ್ನು ಸೆಳೆಯುತ್ತಿದೆ. ಹಾಗೂ ಕೃಷ್ಣಾ ನದಿ ತುಂಬಿ ಹರಿಯುತ್ತಿರುವುದರಿಂದ ಅಕ್ಕ ಪಕ್ಕದ ಗ್ರಾಮಗಳ ಜನರು ಹಾಗೂ ರೈತರ ಮುಖದಲ್ಲಿ ಮತ್ತಷ್ಟು ಮಂದಹಾಸ ಮೂಡಿದೆ.
ಮಹಾರಾಷ್ಟ್ರದ
ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಇಂದು ಹಿಪ್ಪರಗಿ
ಜಲಾಶಯಕ್ಕೆ ಒಟ್ಟು 44,000 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.
ಅದೇ ರೀತಿಯಾಗಿ ಜಲಾಶಯದಿಂದ 44,000 ಕ್ಯೂಸೆಕ್ಸ್ ಪ್ರಮಾಣದ
ನೀರನ್ನು ಮುಂದೆ ಹರಿ ಬೀಡಲಾಗುತ್ತದೆ. ಜಲಾಶಯದ ನೀರಿನ ಮಟ್ಟ 521.60 ಮೀ ಆಗಿದೆ ಎಂದು
ರಬಕವಿ-ಬನಹಟ್ಟಿ ತಹಸೀಲ್ದಾರ ಪ್ರಶಾಂತ ಚನಗೋಂಡ ತಿಳಿಸಿದ್ದಾರೆ.
(ಮಾಹಿತಿ
ಉದಯವಾಣಿ ಕೃಪೆ )
ಉದಯವಾಣಿ ಕೃಪೆ )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ