WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, October 24, 2026

ದರ್ಶನ್​ ಪತ್ನಿ ವಿಜಯಲಕ್ಷ್ಮಿ ಮತ್ತು ನಟ ಧನ್ವಿರ್​ ಗೌಡ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಇದೀಗ ಬೀದಿಗೆ ಬಂದಿದೆ.

ರೇಣುಕಾಸ್ವಾಮಿ ಕೇಸ್​ನಲ್ಲಿ ನಟ ದರ್ಶನ್​ ಅಂದರ್​ ಆಗಿದ್ದಾರೆ. ಜಾಮೀನಿನ ಬಗ್ಗೆ ತಲೆ ಕೆಡಿಸಿಕೊಂಡು ಪರಪ್ಪನ ಅಗ್ರಹಾರದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಆದ್ರೆ, ಇತ್ತ, ದರ್ಶನ್​ ಪತ್ನಿ ವಿಜಯಲಕ್ಷ್ಮಿ ಮತ್ತು ನಟ ಧನ್ವಿರ್​ ಗೌಡ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಇದೀಗ ಬೀದಿಗೆ ಬಂದಿದೆ. 


ಒಂದು ಕಾಲದಲ್ಲಿ ದರ್ಶನ್ ಬಲಗೈ ಬಂಟನಾಗಿ ಧನವೀರ್ ಅವರನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ಶಕ್ತಿ ಮೀರಿ ಹೋರಾಡುತ್ತಿದ್ದರು. ಬಳ್ಳಾರಿ ಜೈಲಿನಲ್ಲಿ ಇದ್ದ ದರ್ಶನ್ ರನ್ನು ನೋಡಲು ವಿಜಯಲಕ್ಷ್ಮಿ ಬಂದಾಗೆಲ್ಲ ಅವರ ಜೊತೆಗೆ ಧನವೀರ್ ಇರುತ್ತಿದ್ದರು. ಅಷ್ಟೊಂದು ಬೆನ್ನೆಲುಬಾಗಿ ನಿಂತಿದ್ದ ಧನವೀರ್ ವಿರುದ್ಧವೇ ವಿಜಯಲಕ್ಷ್ಮಿ ಕೆರಳಿದ್ದಾರೆ ಎನ್ನಲಾಗುತ್ತಿದೆ. ಇಷ್ಟಕ್ಕೆಲ್ಲ ಅಸಲಿ ಕಾರಣ ಏನು? ಅಸಲಿಗೆ ಇವರ ಮಧ್ಯೆ ನಡೆದಿದ್ದೇನು ಅನ್ನೋದನ್ನು ಹೇಳ್ತಿವಿ. ಅದಕ್ಕೂ ಮೊದಲು ನಮ್ಮ ಚಾನೆಲ್ ನ ಸಬ್ಸ್ಕ್ರೈಬ್ ಮಾಡಿ.

ವರದಿಗಳ ಪ್ರಕಾರ, ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ಆಪ್ತ ಸಹಾಯಕ ನಾಗರಾಜ್, ನಟ ಧನ್ವೀರ್ ಅವರೊಂದಿಗೆ ಮಾತುಕತೆ ನಡೆಸುವ ಉದ್ದೇಶದಿಂದ ಅವರ ಮನೆಗೆ ತೆರಳಿದ್ದರು ಎನ್ನಲಾಗಿದೆ. ಆದರೆ, ಅವರು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಧನ್ವೀರ್ ಅಲ್ಲಿ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ವಿಜಯಲಕ್ಷ್ಮಿ ಮತ್ತು ನಾಗರಾಜ್ ಅಲ್ಲಿಂದ ವಾಪಸ್ ಬಂದಿದ್ದರು ಎಂಬ ಮಾಹಿತಿ ಇದೆ. 

ಧನ್ವೀರ್ ಮನೆಗೆ ವಿಜಯಲಕ್ಷ್ಮಿ ಮತ್ತು ನಾಗರಾಜ್ ತೆರಳಿದ್ದ ವಿಚಾರ ತಿಳಿದ ಬಳಿಕ ನಟ ಧನ್ವೀರ್, ನಾಗರಾಜ್‌ಗೆ ದೂರವಾಣಿ ಕರೆ ಮಾಡಿದ್ದರು ಎನ್ನಲಾಗಿದೆ. ಈ ಕರೆಯ ಸಂದರ್ಭದಲ್ಲಿ ಧನ್ವೀರ್ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂಬುದು ನಾಗರಾಜ್ ಆರೋಪವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ನಾಗರಾಜ್ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

ನಟ ಧನ್ವೀರ್ ಹಾಗೂ ವಿಜಯಲಕ್ಷ್ಮಿ ಅವರ ಪಿಎ ನಾಗರಾಜ್ ನಡುವಿನ ಚಾಟಿಂಗ್ ಸ್ಕ್ರೀನ್ ಶಾಟ್ ಗಳು ಹರಿದಾಡಿವೆ. ಚಾಟಿಂಗ್​ನಲ್ಲಿ ನಟ ಧನ್ವೀರ್,​ ದರ್ಶನ್ ಪತ್ನಿಯ ಬಗ್ಗೆಯೂ ಅವಾಚ್ಯವಾಗಿ ಮೆಸೇಜ್ ಮಾಡಿದ್ದಾರೆ ಎಂದು ಹೇಳಲಾಗಿದೆ. ನಾನು ಇಲ್ಲದ ಟೈಮಲ್ಲಿ ಬರ್ತೀರೇನೋ ಎಂದು ಮೆಸೇಜ್ ಮಾಡಿರುವ ಧನ್ವೀರ್ ಹೆಚ್ಚಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸದ್ಯ ಧನ್ವೀರ್ ಮಾಡಿದ್ದಾರೆ ಎನ್ನಲಾದ ಮೆಸೇಜ್​ಗಳ ಸ್ಕ್ರೀನ್ ಶಾಟ್ ವೈರಲ್ ಆಗಿದೆ. ಮತ್ತೊಂದೆಡೆ ಧನ್ವೀರ್​ ವಿರುದ್ಧ ದೂರು ದಾಖಲಿಸಿಕೊಂಡಿರುವ ಆರ್​.ಆರ್​ ನಗರ ಪೊಲೀಸರು, ಆಡಿಯೋ ಹಾಗೂ ವಾಟ್ಸಪ್ ಚಾಟಿಂಗ್ ಪರಿಶೀಲನೆ ಮಾಡ್ತಿದ್ದು, ತನಿಖೆ ಮುಂದುವರೆಸಿದ್ದಾರೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್​ ಗೌಡ ನಡುವೆ ಎಲ್ಲವೂ ಸರಿಯಲ್ಲ ಎಂಬುದು ಬಟಬಯಲಾಗಿದೆ. ಇಷ್ಟು ದಿನ ಇನ್​ಸ್ಟಾಗ್ರಾಂ ಸ್ಟೋರಿಗೆ ಸೀಮಿತವಾಗಿದ್ದ ಮುಸುಕಿನ ಗುದ್ದಾಟ ಇದೀಗ ಠಾಣೆ ಮೆಟ್ಟಿಲೇರುವ ಹಂತಕ್ಕೆ ತಲುಪಿದೆ. ವಿಜಯ್​ಲಕ್ಷ್ಮಿ ಮ್ಯಾನೇಜರ್​ ನಟ ಧನ್ವೀರ್​ ವಿರುದ್ಧ ದೂರು ನೀಡಿದ್ರೆ, ಇತ್ತ ಧನ್ವೀರ್​ ಗೌಡ ವಿಜಯಲಕ್ಷ್ಮೀ ಅವರ ವಿರುದ್ಧ ಪ್ರತಿದೂರು ನೀಡಿದ್ದಾರೆ.

ಮತ್ತೊಂದೆಡೆ, ವಿಜಯಲಕ್ಷ್ಮಿ ದರ್ಶನ್ ಹಾಗೂ ನಾಗರಾಜ್ ವಿರುದ್ಧ ಧನ್ವೀರ್ ತಂದೆ ದೂರು ನೀಡಿದ್ದಾರೆ. ಮನೆಗೆ ಬಂದು ರೌಡಿಗಳನ್ನ ಕರೆಸಿ ಬೆದರಿಕೆ ಹಾಕಿರೋದಾಗಿ ಆರೋಪಿಸಿ ಒಟ್ಟು ನಾಲ್ವರ ವಿರುದ್ಧ ಧನ್ವೀರ್ ತಂದೆ ತಿಮ್ಮೇಗೌಡ ಅವರು ರಾಜಾಜಿನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಧನ್ವೀರ್ ಜೊತೆ ಮಾತನಾಡಲು ಎಂದು ಬಂದು ಬೆದರಿಕೆ ಹಾಕಿದ್ದಾರೆ ಎಂದು ವಿಜಯಲಕ್ಷ್ಮಿ, ನಾಗರಾಜ್, ಭೋಜ, ಬಟಾಲಿ ಪ್ರಮೋದ್ ವಿರುದ್ದ ದೂರು ನೀಡಿದ್ದಾರೆ. ಗೌರವ್ ಶೆಟ್ಟಿ ಎಂಬಾತನ ಮೂಲಕ ರೌಡಿಗಳನ್ನ ಕರೆಸಿ ಬೆದರಿಕೆ ಹಾಕಿದ್ದಾರೆ ಎಂದು ಧನ್ವೀರ್  ತಂದೆ ತಿಮ್ಮೇಗೌಡ ದೂರು ನೀಡಿದ್ದಾರೆ. ಈ ಹಿಂದೆ ಸಾಕ್ಷಿಗೆ ಬೆದರಿಕೆ ಕೇಸ್​ನಲ್ಲೂ ಗೌರವ್ ಶೆಟ್ಟಿ ಹೆಸರು ಕೇಳಿಬಂದಿತ್ತು. ಈ ಸಂಬಂಧ ಕಾಮಾಕ್ಷಿ ಪಾಳ್ಯದಲ್ಲಿ ಗೌರವ್ ಶೆಟ್ಟಿ ವಿರುದ್ಧ ಕೇಸ್ ಆಗಿತ್ತು. ಇದೀಗ ಧನ್ವೀರ್ ಮನೆಗೆ ಗೌರವ್ ಶೆಟ್ಟಿ ಮೂಲಕ ಇಬ್ಬರನ್ನ ಕರೆಸಿ ಅವಾಜ್ ಹಾಕಿಸಿರುವ ಬಗ್ಗೆ ದೂರು ದಾಖಲಾಗಿದೆ. 

ಒಟ್ಟಿನಲ್ಲಿ, ನಟ ದರ್ಶನ್​ ಕೊಲೆ ಕೇಸ್​ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ. ಇತ್ತ ಹೊರಗೆ, ಧನ್ವೀರ್​​ ಮತ್ತು ವಿಜಯಲಕ್ಷ್ಮಿ ನಡುವೆ ಫೈಟ್​ ಶುರುವಾಗಿದ್ದು, ಈ ಗುದ್ದಾಟ ಎಲ್ಲಿಗೆ ತಲುಪಲಿದೆ ಎಂದು ಕಾದುನೋಡಬೇಕಿದೆ.




No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ