ಅಹಮದಾಬಾದ್: ಆಹಾರ ಮತ್ತು ನೀರಿಲ್ಲದೆ 70 ವರ್ಷಗಳಿಗೂ ಹೆಚ್ಚು ಕಾಲ ಬದುಕುಳಿದಿರುವುದಾಗಿ ಹೇಳಿಕೊಂಡಿದ್ದ ಪ್ರಹ್ಲಾದ್ ಜಾನಿ ಆಲಿಯಾಸ್ ಚುನ್ರಿವಾಲಾ ಮಾತಾಜಿ ಮಂಗಳವಾರ ಗುಜರಾತ್ ಜಿಲ್ಲೆಯ ಗಾಂಧಿನಗರ ಜಿಲ್ಲೆಯಲ್ಲಿ ನಿಧನರಾಗಿದ್ದಾರೆ. ಚುನ್ರಿವಾಲ್ ಅವರಿಗೆ 90 ವರ್ಷ ವಯಸ್ಸಾಗಿತ್ತು. ಅವರ ಸ್ವಗ್ರಾಮ ಚರಾಡದಲ್ಲಿ ನಿಧನರಾಗಿದ್ದಾರೆ ಎಂದು ಅವರು ಶಿಷ್ಯರು ಹೇಳಿದ್ದಾರೆ.
ಚುನ್ರಿವಾಲ್ ಗುಜರಾತ್ ದೊಡ್ಡ ಶಿಷ್ಯ ಬಳಗವನ್ನು ಹೊಂದಿದ್ದಾರೆ. ಅನ್ನ, ನೀರು ಇಲ್ಲದೆ ಬದುಕುಳಿಯಬಹುದು ಎಂಬ ಯೋಗಿ ಹೇಳಿಕೆ ಸಾಕಷ್ಟು ಕುತುಹೂಲವನ್ನುಂಟು ಮಾಡಿತ್ತು. ವಿಜ್ಞಾನಿಗಳು ಕೂಡಾ ಈ ಬಗ್ಗೆ 2003 ಮತ್ತು 2010ರಲ್ಲಿ ಪರೀಕ್ಷೆ ಕೂಡಾ ನಡೆಸಿದ್ದರು.
ದೇವರು ನನ್ನನ್ನು ಜೀವಂತವಾಗಿಟ್ಟಿರುವ ಕಾರಣ ಅನ್ನ, ನೀರು ಸೇವಿಸುವ ಅಗತ್ಯವಿಲ್ಲ ಎಂದಿದ್ದರು. ಈ ಮಧ್ಯೆ ಜಾನಿ ಅವರ ಪಾರ್ಥಿವ ಶರೀರವನ್ನು ಬಾನಸ್ಕಾಂತಾ ಜಿಲ್ಲೆಯ ಅಂಬಾಜಿ ದೇವಾಲಯ ಬಳಿ ಇರುವ ನಿರ್ಮಿಸಲಾಗಿರುವ ಆಶ್ರಮ ಕಮ್ ಗುಹೆಗೆ ಕೊಂಡೊಯ್ಯಲಾಗಿದೆ.
ದೇವರು ನನ್ನನ್ನು ಜೀವಂತವಾಗಿಟ್ಟಿರುವ ಕಾರಣ ಅನ್ನ, ನೀರು ಸೇವಿಸುವ ಅಗತ್ಯವಿಲ್ಲ ಎಂದಿದ್ದರು. ಈ ಮಧ್ಯೆ ಜಾನಿ ಅವರ ಪಾರ್ಥಿವ ಶರೀರವನ್ನು ಬಾನಸ್ಕಾಂತಾ ಜಿಲ್ಲೆಯ ಅಂಬಾಜಿ ದೇವಾಲಯ ಬಳಿ ಇರುವ ನಿರ್ಮಿಸಲಾಗಿರುವ ಆಶ್ರಮ ಕಮ್ ಗುಹೆಗೆ ಕೊಂಡೊಯ್ಯಲಾಗಿದೆ.
ತನ್ನ ಮೂಲ ಸ್ಥಳದಲ್ಲಿ ಸ್ವಲ್ಪ ಸಮಯ ಕಳೆಯುವ ಇಚ್ಚೆ ವ್ಯಕ್ತಪಡಿಸಿದ್ದರಿಂದ ಮಾತಾಜಿ ಅವರನ್ನು ಚರಡಾ ಗ್ರಾಮಕ್ಕೆ ತರಲಾಗಿತ್ತು. ಇಂದು ಪ್ರಾತ: ಕಾಲದಲ್ಲಿ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ. ಆಶ್ರಮದಲ್ಲಿ ಸ್ವಲ್ಪ ದಿನಗಳ ಕಾಲ ಭಕ್ತಾಧಿಗಳ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಗುರುವಾರ ಆಶ್ರಮದಲ್ಲಿ ಸಮಾಧಿ ನಿರ್ಮಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ದೇವಿ ಅಂಬಾಬಾಯಿಯಾ ಮೇಲೆ ತುಂಬಾ ಭಕ್ತಿ ಹೊಂದಿದ್ದ ಜಾನಿ, ಎಲ್ಲಾ ಸಮಯದಲ್ಲಿ ಚುನರಿ(ಕೆಂಪು ಸೀರೆ) ಧರಿಸಿ ಮಹಿಳೆಯರಂತೆ ಬಧುಕುತ್ತಿದ್ದರು. ಇದಕ್ಕಾಗಿ ಅವರನ್ನು ಚುನರಿವಾಲಾ ಮಾತಾಜಿ ಎಂದೂ ಕೂಡ ಸಂಬೋಧಿಸಲಾಗುತಿತ್ತು. ಅನ್ನ ನೀರಿಲ್ಲದೆ 76 ವರ್ಷ ಕಳೆದಿರುವುದಾಗಿ ಅವರು ಹೇಳಿಕೊಂಡಿದ್ದರು. ಆಧ್ಯಾತ್ಮಿಕ ಅನುಭೂತಿಯ ಹುಡುಕಾಟದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಮನೆಯನ್ನು ತ್ಯಜಿಸಿ, 14ನೇ ವಯಸ್ಸಿನಿಂದಲೇ ಜಾನಿ ಆಹಾರ ಮತ್ತು ನೀರು ಕೂಡ ತ್ಯಜಿಸಿದ್ದರು ಎಂದು ಅವರ ಅನುಯಾಯಿಗಳು ಹೇಳುತ್ತಾರೆ.
ಅಂಬಾಜಿ ದೇವಸ್ಥಾನದ ಬಳಿ ಇದ್ದ ಒಂದು ಚಿಕ್ಕ ಗುಹೆಯನ್ನು ತನ್ನ ಮನೆಯನ್ನಾಗಿ ಮಾಡಿಕೊಂಡಿದ್ದರು. ಬಳಿಕ ಅವರು 'ಗಾಳಿಯ ಮೇಲೆ ಬದುಕುವ' ಯೋಗಿ ಎಂದೇ ಅವರು ಖ್ಯಾತಿ ಪಡೆದುಕೊಂಡಿದ್ದರು. 2010 ರಲ್ಲಿ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಗೆ ಸೇರಿದ ಇನ್ಸ್ಟಿಟ್ಯೂಟ್ ಆಫ್ ಫಿಸಿಯಾಲಾಜಿ ಅಂಡ್ ಅಲೈಡ್ ಸೈನ್ಸಸ್ ವಿಜ್ಞಾನಿಗಳು ಹಾಗೂ ವೈದ್ಯರು, ಜಾನಿ ಆಹಾರ ಮತ್ತು ನೀರಿಲ್ಲದೆ ಹೇಗೆ ಬದುಕುತ್ತಾರೆ ಎಂಬುದನ್ನು ತಿಳಿದುಕೊಳ್ಳಲು 15 ದಿನಗಳ ಕಾಲ ಅವರ ಅಬ್ಸರ್ ವೇಸನ್ ಸ್ಟಡಿ ನಡೆಸಿದ್ದರು. ಬಳಿಕೆ ಹೇಳಿಕೆ ಪ್ರಕಟಿಸಿದ್ದ DIPAS, ಹಸಿವು ಮತ್ತು ನೀರಿನ ಸೇವನೆಯಿಂದ ಪಾರಾಗಲು ಕೆಲ ಪುನರುಕ್ತಿ ಹೊಂದಾಣಿಕೆ ಅನುಸರಿಸುತ್ತಾರೆ ಎಂದು ಹೇಳಿತ್ತು.
(ಮಾಹಿತಿ ಕೃಪೆ ಕನ್ನಡಪ್ರಭ...)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ