ಮರಿಯಮ್ಮನಹಳ್ಳಿ: ಕಾಡುಪ್ರಾಣಿ ದಾಳಿಗೆ 24 ಕುರಿಗಳು ಮೃತಪಟ್ಟಿದ್ದು ಸುಮಾರು 1.50 ಲಕ್ಷ ರೂಪಾಯಿಗಳಷ್ಟು ನಷ್ಟ ಸಂಭವಿಸಿದ ಘಟನೆ ಸಮೀಪದ ವೆಂಕಟಾಪುರ ಗ್ರಾಮದ ಹೊರವಲಯದಲ್ಲಿ ಜರುಗಿದೆ. ವೆಂಕಟಾಪುರ ಗ್ರಾಮದ ಅಂಬಣ್ಣ ತಂದೆ ತಳವಾರ್ ಭೀಮಪ್ಪ ಇವರಿಗೆ ಸೇರಿದ 10 ಕುರಿಗಳು, ಟಿ. ಪಂಪಾಪತಿ ತಂದೆ ದೊಡ್ಡ ಜಂಬಪ್ಪ ಇವರಿಗೆ ಸೇರಿದ 11 ಕುರಿಗಳು, ನಾಗಪ್ಪ ತಾಯಿ ಹನುಮವ್ವ ಇವರಿಗೆ ಸೇರಿದ 3 ಕುರಿಗಳು ಸಾವನ್ನಪ್ಪಿವೆ.
ಕುರಿಗಾಹಿಗಳು ದೊಡ್ಡ ಕುರಿಗಳನ್ನು ಮೇಯಿಸಲು ಹೋದ ವೇಳೆ ಹಟ್ಟಿಯಲ್ಲೇ ಬಿಟ್ಟಿದ್ದ 24 ಮರಿಕುರಿಗಳಿಗೆ ಸೋಮವಾರ ಹಟ್ಟಿಯ ಬಳಿ ಯಾರೂ ಕಾವಲು ಇಲ್ಲದ ವೇಳೆ ನಾಯಿ ಜಾತಿಗೆ ಸೇರಿದ ಕಾಡು ಪ್ರಾಣಿ ದಾಳಿಮಾಡಿ ಕುರಿಗಳ ಕತ್ತಿಗೆ ಕಚ್ಚಿ ರಕ್ತಹೀರಿದೆ. ಕೆಲಕುರಿಗಳ ಕತ್ತುತುಂಡರಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಕುರಿಗಳ ಸಾವಿನಿಂದ ಕುರಿಗಾಹಿಗಳಿಗೆ ಸುಮಾರು ಒಂದೂವರೆ ಲಕ್ಷರೂಪಾಯಿಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನಾಸ್ಥಳಕ್ಕೆ ಕಂದಾಯ ಇಲಾಖೆ ಉಪತಹಸೀಲ್ದಾರ್‌ರಾದ ಎಂ.ಲಾವಣ್ಯ, ಕಂದಾಯ ನಿರೀಕ್ಷಕ ಅಂದಾನಗೌಡ, ಗ್ರಾಮಲೆಕ್ಕಿಗರಾದ ಶಾರದಾ, ಡಣಾಪುರ ಪಶುವೈದ್ಯಾಧಿ ಕಾರಿ ಡಾ| ಗುರುಬಸವರಾಜ, ಹೊಸಪೇಟೆಯ ಉಪವಲಯ ಅರಣ್ಯಾಧಿಕಾರಿ ಶಿವಕುಮಾರ್, ಜಿ. ಪೊಲೀಸ್ ಇಲಾಖೆ ಮುಖ್ಯಪೇದೆ ಮಂಜುನಾಥ ಪೇದೆ ಸಿದ್ದೇಶ್ ಭೇಟಿ ನೀಡಿ ಪರಿಶೀಲಿಸಿದರು. ಕಳೆದ ಎರಡು ತಿಂಗಳ ಹಿಂದೆ ಡಣಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಇದೇ ತರಹದ ಘಟನೆ ಜರುಗಿದ್ದು ಆಗ 47 ಕುರಿಗಳು ಮೃತಪಟ್ಟಿದ್ದವು. ಆ ಘಟನೆ ಮಾಸುವ ಮುನ್ನವೇ ಮತ್ತೂಂದು ದುರ್ಘಟನೆ ಜರುಗಿರುವುದು ಈ ಭಾಗದ ಕುರಿಗಾಹಿಗಳು ಆತಂಕಕ್ಕೊಳಗಾಗಿದ್ದಾರೆ.
(ಮಾಹಿತಿ ಕೃಪೆ ಉದಯವಾಣಿ....)
(ಮಾಹಿತಿ ಕೃಪೆ ಉದಯವಾಣಿ....)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ