'25 ಸಾವಿರಕ್ಕಿಂತ ಕಡಿಮೆ ಸಂಬಳ ಇರುವವರಿಗೆ ಕೇಂದ್ರದಿಂದ ಹಣ ನೀಡಲಿ'
ಯಾರೆಲ್ಲ 25 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುತ್ತಿದ್ದಾರೋ ಹಾಗೂ ಈಗಿನ ಕೊರೊನಾ
ಸಂಕಷ್ಟದ ಕಾಲದಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೋ ಅಂಥವರಿಗೆ ಸರ್ಕಾರ
ನಗದು ವರ್ಗಾವಣೆ ಅನುಕೂಲ ನೀಡಬೇಕು ಎಂದು ಉದ್ಯಮಿ ಹಾಗೂ ಸಿಐಐ (ಕಾನ್ಫಡರೇಷನ್ ಆಫ್
ಇಂಡಿಯನ್ ಇಂಡಸ್ಟ್ರಿ) ಅಧ್ಯಕ್ಷ ಉದಯ್ ಕೊಟಕ್ ಅಭಿಪ್ರಾಯ ಪಟ್ಟಿದ್ದಾರೆ.
ಕೊರೊನಾ ಸಂಕಷ್ಟದಲ್ಲಿ ಕೆಲಸ ಕಳೆದುಕೊಂಡಂಥವರಿಗೆ ನಗದು ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ಆರಂಭಿಸಬೇಕು.
ಯಾರಿಗೆ 25 ಸಾವಿರಕ್ಕಿಂತ ಕಡಿಮೆ ಸಂಬಳ ಇರುತ್ತದೋ ಹಾಗೂ ಯಾರ
ಉದ್ಯೋಗ ಅಪಾಯದಲ್ಲಿ ಇರುತ್ತದೋ ಅಂಥವರಿಗೆ ಸಂಬಳದ 50ರಿಂದ 75 ಪರ್ಸೆಂಟ್ ಹಣವನ್ನು
ಸರ್ಕಾರ ನೀಡಬೇಕು ಎಂದು ಸಲಹೆ ಮಾಡಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಆರು ತಿಂಗಳ
ಸಾಲ ಮರುಪಾವತಿಗೆ ಬಡ್ಡಿ ಮನ್ನಾ ಮಾಡಿದರೆ ಆರ್ಥಿಕ ವ್ಯವಸ್ಥೆಯೇ ಛಿದ್ರವಾಗುತ್ತದೆ
ಎಂದಿರುವ ಅವರು, ಸರ್ಕಾರವು ಭೂ ಹಾಗೂ ಕಾರ್ಮಿಕ ಸುಧಾರಣೆ ಕಡೆಗೆ ಗಮನ ನೀಡಬೇಕು ಎಂದು
ಒತ್ತಾಯಿಸಿದ್ದಾರೆ. ಅಮೆರಿಕ- ಚೀನಾ ವಾಣಿಜ್ಯ ಸಮರದಲ್ಲಿ ಚೀನಾ ಬಿಟ್ಟು ಹೊರಬರುತ್ತಿರುವ
ಕಂಪೆನಿಗಳನ್ನು ಆಕರ್ಷಿಸಲು ಭಾರತದಲ್ಲಿ ವ್ಯಾಪಾರ- ಉದ್ಯಮ ಮಾಡುವುದು ಸಲೀಸಾಗಬೇಕು
ಎಂದಿದ್ದಾರೆ.
(ಮಾಹಿತಿ Oneindia ಕೃಪೆ )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ