ಚಿತ್ರದುರ್ಗ, ಜೂನ್ 22; "ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್‌ನಿಂದ 52 ಮಕ್ಕಳು ಇಬ್ಬರು ಪೋಷಕರನ್ನು ಕಳೆದುಕೊಂಡಿದ್ದಾರೆ" ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಮಂಗಳವಾರ ಚಿತ್ರದುರ್ಗದಲ್ಲಿ ಮಾತನಾಡಿದ ಸಚಿವರು, "ಚಿತ್ರದುರ್ಗ ಜಿಲ್ಲೆಯಲ್ಲಿ ಮೊದಲು ಹಾಗೂ ಎರಡನೇ ಕೋವಿಡ್ ಸಮಯದಲ್ಲಿ 3,308 ಮಕ್ಕಳು ಸೋಂಕಿತರಾಗಿದ್ದರು. ಯಾವುದೇ ಮಕ್ಕಳಿಗೆ ಅಪಾಯ ಸಂಭವಿಸಿಲ್ಲ" ಎಂದರು.
"ಮಕ್ಕಳು ಎ ಸಿಂಪ್ಟಾಮ್ಯಾಟಿಕ್ ಇದ್ದು ಎಲ್ಲರೂ ಆರಾಮಾಗಿ ಮನೆಗೆ ಬಂದಿದ್ದಾರೆ. ಇಬ್ಬರೂ ಪೋಷಕರನ್ನು ಕಳೆದುಕೊಂಡ 52 ಮಕ್ಕಳಿಗಾಗಿ ಮುಖ್ಯ ಮಂತ್ರಿ ಬಾಲಸೇವಾ ಯೋಜನೆಯಡಿ ಸಹಾಯ ಹಸ್ತ ನೀಡಲಾಗುತ್ತದೆ. ಅವರ ಬ್ಯಾಂಕ್ ಖಾತೆಗೆ ಸರ್ಕಾರ 3,500 ರೂಪಾಯಿಗಳನ್ನು ಹಾಕಲಿದೆ" ಎಂದು ಸಚಿವರು ಹೇಳಿದರು.
"ಯಾರೂ ಅವರನ್ನು ನೋಡಿಕೊಳ್ಳುವವರು ಇಲ್ಲದೆ ಹೋದರೆ ಅಂತರವನ್ನು ನಮ್ಮ ಇಲಾಖೆಯಡಿ ಎಲ್ಲಾ ಜವಾಬ್ದಾರಿ ತೆಗೆದುಕೊಂಡು ನೋಡಿಕೊಳ್ಳಲಾಗುತ್ತದೆ" ಎಂದು ಸಚಿವರು ವಿವರಿಸಿದರು.
"ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಸಜ್ಜಾಗಿದೆ. ಇದಕ್ಕಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಈಗಾಗಲೇ 600 ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಆಕ್ಸಿಜನೇಟ್ ಮತ್ತು ವೆಂಟಿಲೇಟರ್ ಸಹಿತ ಬೆಡ್ ಗಳನ್ನು ಈಗಾಗಲೇ ಸಿದ್ದಪಡಿಸಲಾಗಿದೆ" ಎಂದರು.
"ಮಗುವಿಗೆ ಎ ಸಿಂಪ್ಟಮಾಟಿಕ್ ಇದ್ದರೆ ಆಗ ತಾಯಿ ಮಗುವನ್ನು ಕೋವಿಡ್ ಕೇರ್ ಸೆಂಟರ್ ನಲ್ಲಿರಿಸಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಪ್ರತಿ ತಾಲೂಕಿನಲ್ಲೂ ಕೋವಿಡ್ ಕೇರ್ ಸೆಂಟರ್ ಗಳನ್ನು ಗುರುತಿಸಲಾಗಿದೆ" ಎಂದು ಸಚಿವರು ತಿಳಿಸಿದರು.
"ಖಾಸಗಿಯವರಿಂದ ತಯಾರಾದ ಆಸ್ಪತ್ರೆಗಳಲ್ಲಿ ಕೂಡ ಆಕ್ಸಿಜನೇಟ್ ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಚಿಕಿತ್ಸೆಗೆ ಅಗತ್ಯವಾಗಿ ಬೇಕಾಗುವ ಎಲ್ಲಾ ರೀತಿಯ ವಸ್ತುಗಳು ಮೆಡಿಸಿನ್ ಹಾಗೂ ಇನ್ನಿತರ ವಸ್ತುಗಳ ಪಟ್ಟಿ ಮಾಡಿಕಳುಹಿಸಿದರೆ ನಾನು ಆರೋಗ್ಯ ಮಂತ್ರಿಗಳ ಜೊತೆ ಚರ್ಚಿಸಿ ಸಹಕಾರ ನೀಡುತ್ತೇನೆ" ಎಂದರು.
(ಮಾಹಿತಿ ಕೃಪೆ Oneindia)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ