WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, April 2, 2021

PM Kisan: ರೈತರ ಖಾತೆಗೆ 8ನೇ ಕಂತು, ನಿಮ್ಮ ಖಾತೆಗೆ ಹಣ ಬಂದಿದೆಯೇ ಈ ರೀತಿ ಪರಿಶೀಲಿಸಿ

PM Kisan Samman Nidhi: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ವರ್ಷ ರೈತರ ಖಾತೆಗೆ ಮೂರು ಕಂತುಗಳಲ್ಲಿ ಆರು ಸಾವಿರ ರೂ. ವರ್ಗಾಯಿಸಲಾಗುತ್ತದೆ. ಪ್ರತಿ ವರ್ಷ ಸರ್ಕಾರ ಮೊದಲ ಕಂತನ್ನು ಏಪ್ರಿಲ್ 1 ರಿಂದ ಜುಲೈ 31 ರವರೆಗೆ ನೀಡುತ್ತದೆ, ಎರಡನೇ ಕಂತು ಆಗಸ್ಟ್ 1 ರಿಂದ ನವೆಂಬರ್ 30 ರವರೆಗೆ ಮತ್ತು ಮೂರನೇ ಕಂತನ್ನು ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ನೀಡಲಾಗುತ್ತದೆ.


    ನವದೆಹಲಿ : PM Kisan: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 8 ನೇ ಕಂತು ರೈತರ ಖಾತೆಗೆ ಬರಲು ಪ್ರಾರಂಭಿಸಿದೆ. ಈ ಯೋಜನೆಯಡಿ ಪ್ರತಿ ವರ್ಷ ಮೂರು ಕಂತುಗಳಲ್ಲಿ ಆರು ಸಾವಿರ ರೂ.ಗಳನ್ನು ರೈತರ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಇದೀಗ ಸರ್ಕಾರದಿಂದ ಈ ವರ್ಷದ ಮೊದಲ ಕಂತು/ ಪಿಎಂ ಕಿಸಾನ್ ಯೋಜನೆಯ 8 ನೇ ಕಂತು ಬಿಡುಗಡೆಯಾಗಿದ್ದು ಈ ಬಾರಿ ಒಟ್ಟು 11.66 ಕೋಟಿ ರೈತರ ಖಾತೆಗೆ ಹಣ ವರ್ಗಾಯಿಸಲಾಗುತ್ತಿದೆ.

    ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯ 8 ನೇ ಕಂತು ಪ್ರಾರಂಭವಾಗಿದೆ:
    ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯಡಿ ಪ್ರತಿ ವರ್ಷ ರೈತರ ಖಾತೆಗೆ ಮೂರು ಕಂತುಗಳಲ್ಲಿ ಆರು ಸಾವಿರ ರೂ. ವರ್ಗಾಯಿಸಲಾಗುತ್ತದೆ. ಪ್ರತಿ ವರ್ಷ ಸರ್ಕಾರ ಮೊದಲ ಕಂತನ್ನು ಏಪ್ರಿಲ್ 1 ರಿಂದ ಜುಲೈ 31 ರವರೆಗೆ ನೀಡುತ್ತದೆ, ಎರಡನೇ ಕಂತನ್ನು ಆಗಸ್ಟ್ 1 ರಿಂದ ನವೆಂಬರ್ 30 ರವರೆಗೆ ಮತ್ತು ಮೂರನೇ ಕಂತನ್ನು ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ನೀಡಲಾಗುತ್ತದೆ. ನೀವು ಸಹ ಕೃಷಿಕರಾಗಿದ್ದರೆ ಮತ್ತು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದರೆ, ನೀವು ಈ ವರ್ಷದ ಮೊದಲ ಕಂತು 2000 ರೂಪಾಯಿಗಳು ನಿಮ್ಮ ಖಾತೆಯನ್ನು ತಲುಪಿದೆಯೇ ಎಂದು ಈಗಲೇ ಪರಿಶೀಲಿಸಬಹುದು. ವಾಸ್ತವವಾಗಿ ಸರ್ಕಾರ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನಿಮ್ಮ ಹಣ ಶೀಘ್ರವೇ ನಿಮ್ಮ ಖಾತೆ ಸೇರಲಿದೆ ಎಂದರ್ಥ. ಆದ್ದರಿಂದ, ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಮೊದಲು ಪರಿಶೀಲಿಸಬೇಕು.

    ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ/ಇಲ್ಲವೇ ಎಂದು ಪರಿಶೀಲಿಸಲು ಇದು ಸುಲಭ ವಿಧಾನ:
    1. ಮೊದಲನೆಯದಾಗಿ, ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in ಗೆ ಭೇಟಿ ನೀಡಬೇಕು.
    2. ಇಲ್ಲಿ ನೀವು ಫಾರ್ಮರ್ಸ್ ಕಾರ್ನರ್ ಆಯ್ಕೆಯನ್ನು ನೋಡುತ್ತೀರಿ.
    3. ಫಾರ್ಮರ್ಸ್ ಕಾರ್ನರ್ ವಿಭಾಗದೊಳಗೆ, ಫಲಾನುಭವಿಗಳ ಪಟ್ಟಿಯ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
    4. ನಂತರ ನೀವು ಪಟ್ಟಿಯಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಮಾಹಿತಿಯನ್ನು ಆರಿಸಬೇಕಾಗುತ್ತದೆ.
    5. ಗೆಟ್ ರಿಪೋರ್ಟ್ ಕ್ಲಿಕ್ ಮಾಡಿ. ಇದರ ನಂತರ, ಫಲಾನುಭವಿಗಳ ಸಂಪೂರ್ಣ ಪಟ್ಟಿಯನ್ನು ಬಹಿರಂಗಪಡಿಸಲಾಗುತ್ತದೆ.

    ಇದನ್ನೂ ಓದಿ - PM Kisan nidhi status: ನಿಮ್ಮ ಖಾತೆಗೆ ಹಣ ಇನ್ನೂ ಬಂದಿಲ್ಲವೇ, ತಕ್ಷಣ ಹೀಗೆ ಮಾಡಿ

    ನಿಮ್ಮ ಕಂತಿನ ಸ್ಟೇಟಸ್ ಅನ್ನು ಹುಡುಕಿ :
    ನಿಮ್ಮ ಹೆಸರು ಪಟ್ಟಿಯಲ್ಲಿದ್ದರೆ, ನೀವು ಕಂತಿನ ಸ್ಟೇಟಸ್ ಅನ್ನು ಸಹ ತಿಳಿಯಬಹುದು.
    > ಇದಕ್ಕಾಗಿ ವೆಬ್‌ಸೈಟ್‌ನಲ್ಲಿ ಫಾರ್ಮರ್ಸ್ ಕಾರ್ನರ್ ಕ್ಲಿಕ್ ಮಾಡಿ.
    > ಫಲಾನುಭವಿ ಸ್ಟೇಟಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
    > ಇಲ್ಲಿ ಹೊಸ ಪುಟ ತೆರೆಯುತ್ತದೆ. ಇದರಲ್ಲಿ ಆಧಾರ್ (Aadhaar), ಮೊಬೈಲ್ ಸಂಖ್ಯೆಯನ್ನು ಸೇರಿಸಿ
    > ಇದನ್ನು ಮಾಡುವುದರಿಂದ, ನಿಮ್ಮ ಕಂತಿನ ಸ್ಥಿತಿಯ ಬಗ್ಗೆ ನೀವು ಮಾಹಿತಿಯನ್ನು ಪಡೆಯುತ್ತೀರಿ.

    ಪಿಎಂ ಕಿಸಾನ್‌ಗೆ ನೋಂದಾಯಿಸುವುದು ಹೇಗೆ?
    ಈ ಯೋಜನೆಗೆ ನೀವು ಇನ್ನೂ ನೋಂದಾಯಿಸದಿದ್ದರೆ, ಅದನ್ನು ತಕ್ಷಣವೇ ಮಾಡಿ. ಏಕೆಂದರೆ ನೋಂದಣಿ ಇಲ್ಲದೆ ನಿಮಗೆ 6000 ರೂಪಾಯಿಗಳ ಸಹಾಯ ಮೊತ್ತ ಸಿಗುವುದಿಲ್ಲ. ನೋಂದಣಿ ಪ್ರಕ್ರಿಯೆಯು ತುಂಬಾ ಸುಲಭ. ನೀವು ಮನೆಯಲ್ಲಿಯೇ ಕುಳಿತು ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಗಾಗಿ ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ ನಿಮ್ಮ ಜಮೀನಿನ ಖಾತೆ, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಿರಬೇಕು. ಈ ಎಲ್ಲಾ ದಾಖಲೆಗಳು ಇದ್ದರೆ ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.

    ಇದನ್ನೂ ಓದಿ - PM Kisan: ಮುಂದಿನ ಕಂತು ಯಾವಾಗ ಬರಲಿದೆ! ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಹೀಗೆ ಪರಿಶೀಲಿಸಿ

    ಈ ಯೋಜನೆಯಲ್ಲಿ ನೋಂದಾಯಿಸಿಕೊಳ್ಳುವುದು ಹೀಗೆ?
    1. ಅಧಿಕೃತ ವೆಬ್‌ಸೈಟ್ https://pmkisan.gov.in ಗೆ ಭೇಟಿ ನೀಡಿ
    2. ಈಗ ಫಾರ್ಮರ್ಸ್ ಕಾರ್ನರ್ ಗೆ ಹೋಗಿ.
    3. ಇಲ್ಲಿ ನೀವು 'ಹೊಸ ರೈತ ನೋಂದಣಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
    4. ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.
    5. ಕ್ಯಾಪ್ಚಾ ಕೋಡ್ ನಮೂದಿಸುವ ಮೂಲಕ ರಾಜ್ಯವನ್ನು ಆಯ್ಕೆ ಮಾಡಬೇಕಾಗುತ್ತದೆ
    6. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಬೇಕು.
    7. ಅಲ್ಲದೆ, ಬ್ಯಾಂಕ್ ಖಾತೆಯ ವಿವರಗಳು ಮತ್ತು ಜಮೀನಿಗೆ ಸಂಬಂಧಿಸಿದ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.
    8. ಇದರ ನಂತರ, ನೀವು ನೀಡಿರುವ ಮಾಹಿತಿಯನ್ನು ಒಮ್ಮೆ ಪರಿಶೀಲಿಸಿ ಬಳಿಕ ನಿಮ್ಮ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
  • (ಮಾಹಿತಿ ಕೃಪೆ zee news India)

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ