WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Wednesday, March 31, 2021

ಅಣ್ಣಾವ್ರಂತೇ ನೇತ್ರದಾನದ ಪ್ರತಿಜ್ಞೆ ಮಾಡಿದ ಶಿವರಾಜ್‍ಕುಮಾರ್: 'ಅಕ್ಷಿ' ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ ಸೆಂಚುರಿ ಸ್ಟಾರ್

 

ಏಷ್ಯಾದ ಮುಂಚೂಣಿಯ ನೇತ್ರ ಚಿಕಿತ್ಸಾ ಸಂಸ್ಥೆ ನಾರಾಯಣ ನೇತ್ರಾಲಯವು 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಶ್ರೇಷ್ಠ ಕನ್ನಡ ಚಲನಚಿತ್ರ ಪುರಸ್ಕಾರ ಪಡೆದ ಅಕ್ಷಿ ಚಿತ್ರದ ಪ್ರೇರಶಕ್ತಿಯಾಗಿದೆ. ಆಸ್ಪತ್ರೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಕೆ. ಭುಜಂಗ ಶೆಟ್ಟಿ ಇಡೀ ಚಿತ್ರತಂಡಕ್ಕೆ ಮಾರ್ಗದರ್ಶನ ನೀಡಿದ್ದಾರೆ.

ಈ ಕುರಿತು ಚಿತ್ರತಂಡದ ಜತೆ ಇಂದು ಡಾ.ಕೆ. ಭುಜಂಗ ಶೆಟ್ಟಿ ಚೆರ್ಚೆ ನಡೆಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಅಕ್ಷಿ ನೇತ್ರದಾನಕ್ಕೆ ಉತ್ತೇಜನಕ್ಕೆ ಬೂಸ್ಟರ್ ಡೋಸ್ ಆಗಿದೆ ಮತ್ತು ಹೆಮ್ಮೆ, ವಿನಯಪೂರ್ವಕವಾಗಿ ಇಂದು ನಾನು ಈ ಶ್ರೇಷ್ಠ ಚಲನಚಿತ್ರ `ಅಕ್ಷಿ' ನೀಡಿದ ತಂಡದೊಂದಿಗೆ ಇಲ್ಲಿ ಭಾಗವಹಿಸಿದ್ದೇನೆ. ಈ ಚಲನಚಿತ್ರದ ವಿಷಯವು ನನ್ನ ಹೃದಯಕ್ಕೆ ಬಹಳ ಹತ್ತಿರವಾಗಿದೆ ಮತ್ತು ನಾರಾಯಣ ನೇತ್ರಾಲಯದ ಧ್ಯೇಯೋದ್ದೇಶವನ್ನು ಪ್ರತಿಪಾದಿಸುತ್ತಿದೆ. ನೇತ್ರದಾನ ಕುರಿತು ಬೆಳ್ಳಿತೆರೆಯ ಮಾಧ್ಯಮದ ಮೂಲಕದ ಜನರಿಗೆ ಶಿಕ್ಷಣ ನೀಡಲು ಪ್ರಯತ್ನಿಸುತ್ತಿರುವ ಈ ಪ್ರಯತ್ನದ ಭಾಗವಾಗಲು ನಾನು ಬಹಳ ಸಂತೋಷಗೊಂಡಿದ್ದೇನೆ' ಎಂದು ಹೇಳಿದರು.

ಅಕ್ಷಿ ಚಲನಚಿತ್ರವು ಖ್ಯಾತ ನಟ ದಿವಂಗತ ಡಾ. ರಾಜ್‍ಕುಮಾರ್ ಅವರ ಹಾಗೂ ಅವರ ಹೆಸರಿನಲ್ಲಿರುವ ನಾರಾಯಣ ನೇತ್ರಾಲಯದ ಡಾ. ರಾಜ್‍ಕುಮಾರ್ ನೇತ್ರ ಬ್ಯಾಂಕ್‍ನ ಧ್ಯೇಯೋದ್ದೇಶವಾದ ನೇತ್ರದಾನವನ್ನು ಪ್ರತಿಪಾದಿಸುತ್ತದೆ. 1994ರಲ್ಲಿ ಡಾ. ರಾಜ್‍ಕುಮಾರ್ ನೇತ್ರ ಬ್ಯಾಂಕ್ ಅನ್ನು ಸ್ವತಃ ಡಾ. ರಾಜ್‍ಕುಮಾರ್ ಉದ್ಘಾಟಿಸಿದ್ದರು. 2006ರಲ್ಲಿ ಅವರು ಮರಣ ಹೊಂದಿದಾಗ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ನೀಡಲಾಯಿತು. ಅವರ ಆದರ್ಶನೀಯ ಮಹೋನ್ನತ ನೇತ್ರದಾನವು ಅಕ್ಷಿಯಲ್ಲಿ ಕಾಣಿಸಿಕೊಂಡಿದೆ. ದಿವಂಗತ ಪಾರ್ವತಮ್ಮ ರಾಜ್‍ಕುಮಾರ್ ಕೂಡಾ ತಮ್ಮ ನೇತ್ರಗಳನ್ನು ದಾನ ಮಾಡಿದರು. ರಾಜ್ಯದ ಶೇ.50ರಷ್ಟು ನೇತ್ರದಾನವನ್ನು ನಾರಾಯಣ ನೇತ್ರಾಲಯದ ಮೂಲಕ ನಡೆಸಲಾಗುತ್ತಿದೆ ಎಂದರು.

ಡಾ. ರಾಜ್‍ ಅವರ ಹಿರಿಯ ಪುತ್ರ ಡಾ. ಶಿವರಾಜ್‍ಕುಮಾರ್ ಅಕ್ಷಿ ಚಲನಚಿತ್ರ ತಂಡವನ್ನು ಸನ್ಮಾನಿಸಿದರು. 'ನನ್ನ ತಂದೆಗೆ ಬಹಳ ಪ್ರೀತಿಪಾತ್ರವಾದ ವಿಷಯ ನೇತ್ರದಾನವು ಒಂದು ಚಲನಚಿತ್ರದಲ್ಲಿ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನವಾಗಿರುವುದು ಬಹಳ ಸಂತಸ ತಂದಿದೆ. ಈ ತಂಡವು ಈ ಪ್ರತಿಷ್ಠಿತ ಪ್ರಶಸ್ತಿ ಗೆಲ್ಲುವ ಮೂಲಕ ರಾಜ್ಯಕ್ಕೆ ಹೆಮ್ಮೆ ತಂದಿದೆ. ಇದು ಭಾವನಾತ್ಮಕ ಹಾಗೂ ಸ್ಫೂರ್ತಿದಾಯಕ ಕ್ಷಣವಾಗಿದೆ' ಎಂದರು. ಅವರು ಕೂಡಾ ತಮ್ಮ ನೇತ್ರದಾನ ಮಾಡುವ ಪ್ರತಿಜ್ಞೆಯ ಮೂಲಕ ತಮ್ಮ ತಂದೆಯ ಆಸೆಯನ್ನು ಈಡೇರಿಸಿದರು.

ಅಕ್ಷಿ ಚಲನಚಿತ್ರದ ನಿರ್ದೇಶಕ ಮನೋಜ್ ಕುಮಾರ್ ಮಾತನಾಡಿ,'ಅಕ್ಷಿ ಚಲನಚಿತ್ರವು ನೇತ್ರದಾನ ಕುರಿತು ಹೆಚ್ಚು ಗಮನ ನೀಡುವಲ್ಲಿ ಹಾಗೂ ಸಮಾಜ ಈ ವಿಷಯವನ್ನು ಹೇಗೆ ನೋಡುತ್ತದೆ ಎನ್ನುವ ಕುರಿತು ತಿಳಿಸಲು ನಮ್ಮ ಪ್ರಯತ್ನವಾಗಿದೆ. ನೇತ್ರದಾನವು ಹೆಚ್ಚು ಚರ್ಚೆಗೆ ಒಳಪಡಬೇಕಾದ ವಿಷಯವಾಗಿದೆ. ಡಾ. ಭುಜಂಗ ಶೆಟ್ಟಿ ಹಾಗೂ ಅವರ ತಂಡದೊಂದಿಗೆ ನಾವು ಮಾತನಾಡಲು ಪ್ರಾರಂಭಿಸಿದ ನಂತರ ಈ ಕುರಿತು ಅಪಾರವಾಗಿ ತಿಳಿದೆವು' ಎಂದು ಹೇಳಿದರು.

ನಿರ್ಮಾಪಕ ಎನ್. ರಮೇಶ್, 'ನಾವು ಯಾವುದೇ ರೀತಿಯಲ್ಲೂ ರಾಷ್ಟ್ರಪ್ರಶಸ್ತಿ ಲಭಿಸುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಈ ಕಥೆಯ ಮಹೋನ್ನತ ಅಂಶ ಹಾಗೂ ತಂಡದ ಪ್ರಾಮಾಣಿಕ ಪ್ರಯತ್ನ ಮತ್ತು ಜನರ ಆಶೀರ್ವಾದ ಈ ಪ್ರಶಸ್ತಿಯನ್ನು ತಂದುಕೊಟ್ಟಿದೆ' ಎಂದರು.

ಮತ್ತೊಬ್ಬ ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್, ಈ ಚಲನಚಿತ್ರವು ದಿವಂಗತ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಗೌರವವೂ ಸಲ್ಲಿಸಿದೆ. ಅವರಿಗೆ ನೇತ್ರದಾನ ಕುರಿತು ಸಮಾಜದ ದೃಷ್ಟಿಕೋನ ಬದಲಾಯಿಸುವ ಭಾಗವಾಗುವ ಬಯಕೆ ಇತ್ತು. ಅವರು ಹಾಡಿದ ಕೊನೆಯ ಕೆಲವೇ ಗೀತೆಗಳಲ್ಲಿ ಇದೂ ಒಂದು' ಎಂದು ಹೇಳಿದರು

ಕಾರ್ಯಕ್ರಮದಲ್ಲಿ ನಿರ್ಮಾಪಕ ರವಿ.ಎಚ್.ಎಸ್.(ಹೊಳಲು), ಛಾಯಾಗ್ರಾಹಕ ಮುಕುಲ್ ಗೌಡ, ಚಿತ್ರಕಥೆ ಬರಹಗಾರ ದೇವೇಂದ್ರ ನಾಯ್ಡು, ಸಹ ನಿರ್ದೇಶಕರಾದ ಮೀನಾ ರಘು ಮತ್ತು ಸುನೀಲ್ ರಾಜ್ ಇದ್ದರು. ಈ ಚಿತ್ರದಲ್ಲಿ ಪಾತ್ರ ವಹಿಸಿರುವ ಮಾಸ್ಟರ್ ಮಿಥುನ್ ಎಂ.ಬೈ.., ಬೇಬಿ ಸೌಮ್ಯ ಪ್ರಭು ಮತ್ತು ನಾಗರಾಜ್‍ರಾವ್ ಕೂಡಾ ಉಪಸ್ಥಿತರಿದ್ದರು.

(ಮಾಹಿತಿ ಕೃಪೆ ಕನ್ನಡ ಪ್ರಭ)

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ