WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Thursday, April 8, 2021

ಕೊರೊನಾ ಎರಡನೇ ಅಲೆ: ಜ್ವರ ಬಾರದೇ ಇದ್ದರೂ ಸಹ ದೇಹದಲ್ಲಾಗುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

 

ಶೀತ, ಕಫ, ಜ್ವರ, ವಾಸನೆ ಗ್ರಹಿಕೆ ಕಳೆದುಕೊಳ್ಳುವುದು, ರುಚಿ ಗ್ರಹಿಸಲು ಆಗದೇ ಇರೋದು ಇವೆಲ್ಲ ಕೊರೊನಾ ಸೋಂಕಿನ ಸಾಮಾನ್ಯ ಲಕ್ಷಣಗಳು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ಎಲ್ಲೆಡೆ ಕೊರೊನಾದ ಎರಡನೆ ಅಲೆಯ ಆರ್ಭಟ ನಡೆಯುತ್ತಿದ್ದು ಇದೀಗ ಕೊರೊನಾ ಸೋಂಕಿನ ಲಕ್ಷಣಗಳೂ ಹೆಚ್ಚಾಗುತ್ತಿವೆ. ಆಹಾರ ತಜ್ಞರು 8 ಹೆಚ್ಚುವರಿ ಲಕ್ಷಣಗಳನ್ನ ಗುರುತಿಸಿದ್ದು ಈ ಲಕ್ಷಣಗಳು ಕಂಡಲ್ಲಿ ಕೂಡಲೇ ಐಸೋಲೇಟ್​ ಆಗುವಂತೆ ಸೂಚನೆ ನೀಡಿದ್ದಾರೆ.

ಅಸಾಮಾನ್ಯ ಕೆಮ್ಮು : ಕೆಮ್ಮು ಕೊರೊನಾದ ಮುಖ್ಯ ಲಕ್ಷಣಗಳಲ್ಲಿ ಒಂದು. ಆದರೆ ಈ ಕೆಮ್ಮಿನ ಶಬ್ದ ಸಾಮಾನ್ಯ ಕೆಮ್ಮಿಗಿಂತ ವಿಭಿನ್ನವಾಗಿರುತ್ತೆ. ಧೂಮಪಾನಿಯ ಕೆಮ್ಮಿಗೆ ಈ ಕೆಮ್ಮಿನ ಶಬ್ದ ಹೋಲಿಕೆ ಹೊಂದಿದೆ.

ಗುಲಾಬಿ ಬಣ್ಣದ ಕಣ್ಣು : ಚೀನಾದಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ ಕಣ್ಣು ಗುಲಾಬಿ ಬಣ್ಣಕ್ಕೆ ತಿರುಗಿದ್ರೆ ಅದು ಕೂಡ ಕೊರೊನಾದ ಲಕ್ಷಣವಂತೆ. ಕಣ್ಣು ಕೆಂಪಗಾಗೋದು, ಊದಿಕೊಳ್ಳೋದು ಹಾಗೂ ಕಣ್ಣಿನಲ್ಲಿ ನೀರು ತುಂಬಿಕೊಳ್ಳೋದು ಇದು ಕೂಡ ಕೊರೊನಾದ ಹೊಸ ಲಕ್ಷಣವಾಗಿದೆ.

ಉಸಿರಾಟದ ತೊಂದರೆ : ಎದೆಯಲ್ಲಿ ನೋವು ಉಂಟಾಗೋದ್ರ ಜೊತೆಯಲ್ಲಿ ಉಸಿರಾಡಲು ತೊಂದರೆಯಾಗುತ್ತೆ. ಅಲ್ಲದೇ ಹೃದಯ ಬಡಿತದಲ್ಲೂ ಏರಿಳಿತ ಉಂಟಾಗುತ್ತದೆ.

ಹೊಟ್ಟೆ ಆರೋಗ್ಯದಲ್ಲಿ ಏರುಪೇರು : ಸಂಶೋಧಕರು ನೀಡಿರುವ ಮಾಹಿತಿಯ ಪ್ರಕಾರ ಹೊಟ್ಟೆ ನೋವು, ಅತಿಸಾರ, ವಾಕರಿಕೆ ಇವೆಲ್ಲವೂ ಕೊರೊನಾದ ಲಕ್ಷಣಗಳಾಗಿದೆ. ಈ ಯಾವುದೇ ಸಮಸ್ಯೆಗಳು ನಿಮಗೆ ಕಂಡುಬಂದಲ್ಲಿ ಕೂಡಲೇ ಕೊರೊನಾ ಪರೀಕ್ಷೆಗೆ ಒಳಗಾಗೋದು ಒಳಿತು.

(ಮಾಹಿತಿ ಕೃಪೆ ಕನ್ನಡದುನಿಯಾ)

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ