WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Tuesday, March 23, 2021

ಪರೀಕ್ಷೆಯಲ್ಲಿ ಕಾಪಿ ಮಾಡಲು ವಿದ್ಯಾರ್ಥಿ ಮಾಡಿದ ಪ್ಲಾನ್‌ ಕೇಳಿದ್ರೆ ದಂಗಾಗ್ತೀರಾ..!

 

ಬಿಹಾರದ ವೈಶಾಲಿ ಜಿಲ್ಲೆಯ ಬಿದುಪುರದಲ್ಲಿರುವ ಹೈಯರ್​ ಸೆಕೆಂಡರಿ ಶಾಲೆಯಲ್ಲಿ ಸೈನಿಕ ಹುದ್ದೆಗೆ ಭರ್ತಿ ಮಾಡಿಕೊಳ್ಳುವ ಸಲುವಾಗಿ ಪರೀಕ್ಷೆಯನ್ನ ನಡೆಸಲಾಗಿತ್ತು. ಈ ಪರೀಕ್ಷೆಯ ವೇಳೆ ಅಭ್ಯರ್ಥಿಯಿಂದ ಎಲೆಕ್ಟ್ರಾನಿಕ್​ ಡಿವೈಸ್​ ಒಂದನ್ನ ವಶಪಡಿಸಿಕೊಳ್ಳಲಾಗಿದೆ.

ಈ ಡಿವೈಸ್​ನ್ನು ಆತ ಮಾಸ್ಕ್​​ನ ಒಳಗಡೆ ಅಳವಡಿಸಿಕೊಂಡಿದ್ದ ಎನ್ನಲಾಗಿದೆ. ಪರೀಕ್ಷೆಯಲ್ಲಿ ಮಾಸ್ಕ್​ ಬಳಕೆ ಕಡ್ಡಾಯವಾಗಿದ್ದರಿಂದ ಅಭ್ಯರ್ಥಿ ನಕಲು ಮಾಡಲು ಇದೇ ಮಾಸ್ಕ್​ನ ಸಹಾಯ ಪಡೆಯಲು ಹೋಗಿ ಪೇಚಿಗೆ ಸಿಲುಕಿದ್ದಾನೆ. ಪರೀಕ್ಷೆಯ ವೇಳೆ ಚೆಕಿಂಗ್​ ಮಾಡಿದ ವೇಳೆ ಅಭ್ಯರ್ಥಿಯ ಈ ಕಳ್ಳಾಟ ಬಟಾಬಯಲಾಗಿದೆ.

ಅಶುತೋಶ್​ ಕುಮಾರ್​ ಹಾಗೂ ಮಮ್ರಾಜ್​​ ಎಂಬ ಅಧಿಕಾರಿಗಳು ಅಭ್ಯರ್ಥಿಯು ಮಾಸ್ಕ್​​ನ ಒಳಗಡೆ ಅಡಗಿಸಿ ಇಟ್ಟಿದ್ದ ಈ ಡಿವೈಸ್​ನ್ನು ಪತ್ತೆ ಮಾಡಿದ್ದಾರೆ. ಇದರಲ್ಲಿ ಪ್ರಶ್ನೆ ಪತ್ರಿಕೆ ಸಂಬಂಧಿಸಿದ ಉತ್ತರಗಳಿದ್ದವು ಎನ್ನಲಾಗಿದೆ.

ಆರೋಪಿ ಅಭ್ಯರ್ಥಿ ವಿಶಾಲ್​ ಕುಮಾರ್​​ರನ್ನ ಪರೀಕ್ಷಾ ಹಾಲ್​ನಿಂದ ಹೊರಗಟ್ಟಲಾಗಿದೆ.

ಈ ಮಾಸ್ಕ್​ನ ಫೋಟೋ ನೋಡಿದ ಮೊಬೈಲ್​ ಅಂಗಡಿ ಮಾಲೀಕರೊಬ್ಬರು ಈ ಮಾಸ್ಕ್​ ಮೊಬೈಲ್​ನಂತೆ ಕೆಲಸ ಮಾಡುವ ರೀತಿಯಲ್ಲಿ ಮಾರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಮೊಬೈಲ್​​ನ ಬಿಡಿ ಭಾಗಗಳನ್ನ ಮಾಸ್ಕ್​​ನ ಒಳಕ್ಕೆ ಅಳವಡಿಸಿ ಈ ಡಿವೈಸ್​ನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ರು.

(ಮಾಹಿತಿ ಕೃಪೆ ಕನ್ನಡ ದುನಿಯಾ)

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ