ಬೆಂಗಳೂರು: ಹುಲಿ, ಸಿಂಹ ಅಂದ್ರೆ ಸಾಕು ಮಾರುದ್ದ ಓಡೋಣ ಅನ್ನಿಸೋದು ಸಹಜ. ಆದ್ರೆ ಇಲ್ಲಿ ಮಾತ್ರ ಅವುಗಳನ್ನ ಮತ್ತೆ ಮತ್ತೆ ನೋಡಬೇಕು, ಮುದ್ದು ಮಾಡಬೇಕು… ಅನ್ನಿಸುವ ಜತೆಗೆ ಪ್ರೀತಿ ಉಕ್ಕಿಸುತ್ತೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 'ಅನುಷ್ಕಾ' ಎಂಬ ಹುಲಿ ಎರಡು ಮರಿಗಳಿಗೆ ಜನ್ಮ ನೀಡಿದ್ದು, 'ಸನಾ' ಎಂಬ ಸಿಂಹಿಣಿಯೂ ಎರಡು ಮರಿಗಳಿಗೆ ಜನ್ಮನೀಡಿದೆ. ಬನ್ನೇರುಘಟ್ಟ ಝೂ ಆಸ್ಪತ್ರೆಯಲ್ಲಿ ಆರೈಕೆ ಪಡೆಯುತ್ತಿರುವ ಈ ನಾಲ್ಕೂ ಮರಿಗಳು ಆಸ್ಪತ್ರೆಯಲ್ಲಿ ಅಡ್ಡಾಡುತ್ತಾ ಚಿನ್ನಾಟ ಆಡುವ ದೃಷ್ಯ ನೋಡುಗರಿಗೆ ಖುಷಿಯ ಹೂರಣ.
ಹುಟ್ಟಿದ ಬಳಿಕ ತಾಯಿಯಿಂದ ಮರಿಗಳಿಗೆ ಸೂಕ್ತ ಆರೈಕೆ ಸಿಗದ ಕಾರಣ, ಮೃಗಾಲಯ ಸಿಬ್ಬಂದಿ ಸಿಂಹ ಮತ್ತು ಹುಲಿಯ ಮರಿಗಳಿಗೆ ಮೇಕೆ ಹಾಲು ಹಾಗೂ ಪೌಷ್ಟಿಕಾಂಶದ ಟಾನಿಕ್ ನೀಡಿ ಆರೈಕೆ ಮಾಡುತ್ತಿದ್ದಾರೆ.
ಬನ್ನೇರುಘಟ್ಟ ಉದ್ಯಾನದಲ್ಲಿ ಹುಲಿ ಹಾಗೂ ಸಿಂಹದ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದ್ದು, ಸದ್ಯ 19 ಹುಲಿಗಳು ಹಾಗೂ 24 ಸಿಂಹಗಳು ಇವೆ.
(ಮಾಹಿತಿ ಕೃಪೆ ವಿಜಯವಾಣಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ