ಗೊಬ್ಬರದ ಮೇಲೆ ಶೇ.80ರಷ್ಟು ಹೆಚ್ಚು
ಗೊಬ್ಬರದ ಬೆಲೆ ಒಮ್ಮೆಲೆ ಶೇ. 80 ರಷ್ಟು ಏರಿಕೆಯಾಗಿದೆ, ಈ ಬಗ್ಗೆ ಯಾರೂ ಮಾತಾಡಲ್ಲ, ಒಂದು ಯೋಗ್ಯ ಸರಕಾರ ನರ ಗಟ್ಟಿಯಾಗಿದ್ರೆ ಕಂಪನಿಗಳನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು, ಮೋದಿ ನಿಮಗೆ ಶೇವಿಂಗ್ ಮಾಡೋಕೆ ಟೈಮಿಲ್ಲ, ಈ ದೇಶದ ಪ್ರದಾನ ಮಂತ್ರಿ ನೀವು ಕೇವಲ ಭಾಷಣ ಮಾಡಿದರೆ ಸಾಲದು ಕಾರ್ಯಸಾದನೆ ತೋರಿಸಬೇಕು, ಮುಂದಿನ ದಿನಗಳಲ್ಲಿ ನಮಗೆ ಒಳ್ಳೆಯದಾದರೆ ಅದನ್ನ ಮಾಡಿ ನಾವು ತೋರಿಸುತ್ತೇವೆ, ಒಮ್ಮೆಲೆ ರಸಗೊಬ್ಬರ ಇಷ್ಟು ಬೆಲೆ ಹೆಚ್ಚಾದರೆ ಕಾರಣವೇ ಹೇಳ್ತಿಲ್ಲ ಯಾಕೆ ಯಾವ ಊರಲ್ಲಿ ನಿನಗೆ ವ್ಯವಸಾಯ ಇದೆಯಪ್ಪ ಮೋದಿ, ನಿಮ್ಮ ಅಣ್ಣ ತಮ್ಮ ವ್ಯೆವಸಾಯ ಮಾಡ್ತಿದ್ದಾರಾ? ಅಷ್ಟು ದೊಡ್ಡ ಪ್ರಮಾಣದಲ್ಲಿ ರಸಗೊಬ್ಬರ ಬೆಲೆ ಏರಿಸಬೇಕಾದರೆ ಅಂತಹ ಅಗತ್ಯ ಏನು ಬಂದಿದೆ ನಿನಗೆ ಯಾರು ಬಂದು ನಿನಗೆ ಹೇಳ್ತಾರೆ, ರೈತರು ಬೆಳೆಯುವ ಯಾವ ತರಕಾರಿ, ಬೆಳೆಗೆ ರೇಟ್ ಹೆಚ್ಚಿಗೆ ಮಾಡಿದ್ದೀಯ? ನೀನು ರೈತಬೆಳೆಯುವ ಉತ್ಪನ್ನಗಳಿಗೆ ಬೆಲೆ ಜಾಸ್ತಿಮಾಡಿ ಆಮೇಲೆ 800 ರೂ ಅಲ್ಲ 2000 ರೂಪಾಯಿ ಜಾಸ್ತಿ ಮಾಡು ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು,
ದೇಶಭಕ್ತಿ ಜಹಗೀರ್ ತೆಗೆದುಕೊಂಡಿದ್ದಾರೆ
ಬಿಜೆಪಿಯವರು ದೇವರ ಭಕ್ತಿಯನ್ನು ಕೂಡಾ ಜಹಗೀರ್ ತಗೊಂಡು ಬಿಟ್ಟಿದ್ದಾರೆ ಶ್ರೀರಾಮ ಅವರಕಡೆ, ಹನುಮಂತ ಅವರಕಡೆಯಂತೆ ನಮಗೆ ಯಾವ ದೇವರನ್ನು ಸಹ ಬಿಟ್ಟಿಲ್ಲ, ಅವಾಗ ಅವಾಗ ಅವರ ಅಮಿತ್ ಶಾ ದುರ್ಯೋಧನನ್ನು ನಮ್ಮ ಮೇಲೆ ಬಿಡ್ತಿದ್ದಾರೆ ಅಷ್ಟೇ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ರಮೇಶ್ ಕುಮಾರ್ ನಡೆಸಿದ್ದಾರೆ.
(ಮಾಹಿತಿ ಕೃಪೆ ವಿಜಯಕರ್ನಾಟಕ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ