ನವದೆಹಲಿ, ಏ.15- ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ಶನಿವಾರ ಮಧ್ಯರಾತ್ರಿಯಿಂದ ಭಾನುವಾರ 2ಗಂಟೆವರೆಗೂ ಹಣವನ್ನು ಆನ್‍ಲೈನ್‍ನಲ್ಲಿ ವರ್ಗಾಹಿಸುವ ಆರ್‌ಟಿಜಿಎಸ್ ಸೌಲಭ್ಯ ಲಭ್ಯವಿರುವುದಿಲ್ಲ ಎಂದು ಆರ್ಬಿಐ ತಿಳಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಆರ್‌ಬಿಐನ ಮುಖ್ಯ ವ್ಯವಸ್ಥಾಪಕರಾದ ಯೋಗೇಶ್ ದಯಾಲ್ ಅವರು, ಏ.17ರ ಮಧ್ಯರಾತ್ರಿಯಿಂದ ಏ.18ರ 14 ಗಂಟೆಯವರೆಗೂ ಆರ್‍ಟಿಜಿಎಸ್ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುತ್ತಿದೆ.
ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸಿದ ಬಳಿಕ ಎಂದಿನಂತೆ ಎನ್‍ಇಎಫ್‍ಟಿ ವ್ಯವಸ್ಥೆ ಮುಂದುವರೆಯಲಿದೆ ಎಂದು ಆರ್ಬಿಐ ತಿಳಿಸಿದೆ. ಎಲ್ಲಾ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಈ ಕುರಿತು ಮಾಹಿತಿ ನೀಡಿ ನಿಗದಿತ ದಿನದಂದು ಆನ್‍ಲೈನ್ ಹಣ ವರ್ಗಾವಣೆಗೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಲು ಸಲಹೆ ನೀಡುವಂತೆ ಆರ್‍ಬಿಐ ಮನವಿ ಮಾಡಿದೆ.
( ಮಾಹಿತಿ ಕೃಪೆ ಈ ಸಂಜೆ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ