ಬೆಂಗಳೂರು,ಏ.೧೫- ರಾಜ್ಯದಲ್ಲಿ ಉಪಚುನಾವಣೆ ಸಮರ ಮುಗಿಯುತ್ತಿದ್ದಂತೆ ಕೊರೊನಾ ಸೋಂಕು
ತಡೆಗೆ ರಾಜ್ಯಸರ್ಕಾರ ಕಠಿಣ ಕ್ರಮಕೈಗೊಳ್ಳಲು ಸಿದ್ಧತೆ ಮಾಡಿಕೊಂಡಿರುವುದರಿಂದ
ಭಯಭೀತರಾಗಿರುವ ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ಮುಖ ಮಾಡಲು ಅಣಿಯಾಗಿದ್ದಾರೆ.
ರಾಜ್ಯದಲ್ಲಿ
ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಲಾಕ್‌ಡೌನ್ ಅಥವಾ ವಾರಾಂತ್ಯದ ಲಾಕ್‌ಡೌನ್
ಜಾರಿಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಈಗಾಗಲೇ
ಸ್ಪಷ್ಟಪಡಿಸಿದ್ದಾರೆ. ಆದರೆ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ವಲಸೆ
ಕಾರ್ಮಿಕರಲ್ಲಿ ಆತಂಕ ಮನೆಮಾಡಿದೆ.
ಕಳೆದ ವರ್ಷ ಇದೇ ಸಂದರ್ಭದಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಕೂಲಿಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಸಾಕಷ್ಟು ಪ್ರಯಾಸ ಪಡಬೇಕಾಗಿತ್ತು.
ಉದ್ಯೋಗವನ್ನು
ಕಳೆದುಕೊಂಡು ಕೆಲಸವೂ ಇಲ್ಲದೆ ಅತ್ತ ತಮ್ಮ ಊರುಗಳಿಗೂ ತೆರಳಲಾಗದೆ ವಲಸೆ ಕಾರ್ಮಿಕರು
ತೀವ್ರ ಸಂಕಷ್ಟ ಅನುಭವಿಸುವಂತಾಗಿತ್ತು. ಲಾಕ್‌ಡೌನ್ ಜಾರಿಯಿಂದಾಗಿ ಒಪ್ಪತ್ತಿನ ಊಟಕ್ಕೂ
ವಲಸೆ ಕಾರ್ಮಿಕರು ಪರಿತಪಿಸುವಂತಾಗಿತ್ತು.
ತಮ್ಮ ಊರುಗಳಿಗೆ ತೆರಳಲು ರೈಲು, ಬಸ್‌ಗಳ
ವ್ಯವಸ್ಥೆ ಇಲ್ಲದ ಕಾರಣ ಕೆಲವರು ಕಿ.ಲೋ ಮೀಟರ್‌ಗಳಲ್ಲಿ ಉರಿ ಬಿಸಿಲನ್ನು ಲೆಕ್ಕಿಸದೇ
ನಡೆದುಕೊಂಡೇ ಹೋಗಿ ತಮ್ಮ ಊರುಗಳಿಗೆ ತಲುಪಿದ್ದ ಕಹಿ ನೆನಪುಗಳು ವಲಸೆ ಕಾರ್ಮಿಕರನ್ನು
ಕಾಡುತ್ತಿದೆ.
ಏ. ೧೮ ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸರ್ವ
ಪಕ್ಷಗಳ ಸಭೆ ಕರೆಯಲಾಗಿದ್ದು, ಸೋಂಕಿನ ತಡೆಗೆ ಇನ್ನಷ್ಟು ಬಿಗಿಕ್ರಮಗಳನ್ನು ಕೈಗೊಳ್ಳುವ
ನಿರೀಕ್ಷೆ ಇದೆ.
(ಮಾಹಿತಿ ಕೃಪೆ ಸಂಜೆ ವಾಣಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ