ಭೋಪಾಲ್, ಏಪ್ರಿಲ್ 17: ಹೆಂಡತಿಯ ಜಿರಲೆ ಭಯ, ಮೂರು ವರ್ಷದಲ್ಲಿ ಹದಿನೆಂಟು ಬಾರಿ ಮನೆ ಬದಲಿಸುವಂತೆ ಮಾಡಿದೆ. ಅಷ್ಟೇ ಅಲ್ಲ, ಈ ವಿಚಾರ ಈಗ ವಿಚ್ಛೇದನದವರೆಗೂ ಬಂದು ನಿಂತಿದೆ.
ಹೆಂಡತಿಯ ಜಿರಲೆ ಫೋಬಿಯಾದಿಂದ ಬೇಸತ್ತಿರುವ ಗಂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಸಂಗತಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬೆಳಕಿಗೆ ಬಂದಿದೆ. ಭೋಪಾಲ್‌ನಲ್ಲಿ 2017ರಲ್ಲಿ ಇವರ ಮದುವೆಯಾಗಿದೆ. ಆತ ಸಾಫ್ಟ್‌ವೇರ್ ಇಂಜಿನಿಯರ್. ತನಗೆ ಜಿರಲೆ ಫೋಬಿಯಾ ಇದ್ದು, ಜಿರಲೆ ಕಂಡರೆ ಸಾಕು ಜೋರಾಗಿ ಕೂಗಿಕೊಳ್ಳುತ್ತೇನೆ. ಆ ಜಿರಲೆ ಕಂಡ ಜಾಗಕ್ಕೆ ಮತ್ತೆ ಕಾಲಿಡುವುದೇ ಇಲ್ಲ ಎಂದು ಹೆಂಡತಿ ಮದುವೆ ನಂತರ ತಿಳಿಸಿದ್ದಾಳೆ. ಇದು ಸಹಜ ಎಂದು ಆತನೂ ಮೊದಮೊದಲು ಸುಮ್ಮನಿದ್ದ. ಮದುವೆ ನಂತರ 2018ರಲ್ಲಿ ಮೊದಲ ಬಾರಿ ಜಿರಲೆ ಕಾರಣಕ್ಕೆ ದಂಪತಿ ಮನೆ ಬದಲಾಯಿಸಿದ್ದರು.
(ಮಾಹಿತಿ ಕೃಪೆ Oneindia)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ