WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Sunday, July 5, 2020

ಫೇಸ್​ಬುಕ್​ ಪಾಸ್​ವರ್ಡ್​ ಹ್ಯಾಕ್​; ಪ್ಲೇ ಸ್ಟೋರ್​ನಿಂದ 25 ಆಯಪ್​ಗಳನ್ನು ಕಿತ್ತೆಸೆದ ಗೂಗಲ್!

ಗೂಗಲ್​​ ಪ್ಲೇ ಸ್ಟೋರ್​ನಲ್ಲಿರುವ 25 ಆಯಪ್​ಗಳನ್ನು ಕಿತ್ತೆಸೆದಿದೆ. ಫೇಸ್​ಬುಕ್​ ಬಳಕೆದಾರರ ಪಾಸ್​​ವರ್ಡ್​​​​​ ಮತ್ತು ಒಳಕೆದಾರರ ಮಾಹಿತಿಯನ್ನು ಎಗರಿಸುತ್ತಿದೆ ಎಂಬ ಆಧಾರದ ಮೇಲೆ ಗೂಗಲ್​ ಈ ನಿರ್ಣಯ ಕೈಗೊಂಡು 25 ಆಯಪ್​​ಗಳನ್ನು ತೆಗೆದು ಹಾಕಿದೆ.

ಫ್ರೆಂಚ್​​ ಸೈಬರ್​ ಸೆಕ್ಯುರಿಟಿ ಸಂಸ್ಥೆ ಪ್ಲೇ ಸ್ಟೋರ್​ನಲ್ಲಿರುವ ಕೆಲವು ಆಯಪ್​​ಗಳನ್ನು ಪಟ್ಟಿ ಮಾಡಿದ್ದು, ಆ ಆಯಪ್​ಗಳು ಫೇಸ್​ಬುಕ್​ ಬಳಕೆದಾರರ ಪಾಸ್​​​ವರ್ಡ್​ ಮತ್ತು ಇನ್ನಿತರ ಮಾಹಿತಿ ಎಗರಿಸುತ್ತಿದೆ ಎಂಬ ಸಂಗತಿಯನ್ನು ಗೂಗಲ್​​ಗೆ ತಿಳಿಸಿದೆ. ಇದರ ಬೆನ್ನಲ್ಲೇ ಗೂಗಲ್​ ತನ್ನ ಪ್ಲೇ ಸ್ಟೋರ್​ನಿಂದ 25 ಆಯಪ್​​ಗಳನ್ನು ಪರೀಕ್ಷಿಸಿ ತೆಗೆದು ಹಾಕಿದೆ.

ಪ್ಲೇ ಸ್ಟೋರ್​ 25 ಆಯಪ್​ಗಳನ್ನು ತೆಗೆದು ಹಾಕುವ ಮೊದಲು ಈ ಅಪ್ಲಿಕೇಶನ್​ಗಳು ಒಟ್ಟು 2.34 ಮಿಲಿಯನ್​ ಬಾರಿ ಡೌನ್​ಲೋಡ್​ ಕಂಡಿದೆ. ಅನೇಕರು ಈ ಆಯಪ್​ ಅನ್ನು ಬಳಸುತ್ತಿದ್ದಾರೆ ಎಂದು ತಿಳಿಸಿದೆ. ಅಷ್ಟು ಮಾತ್ರವಲ್ಲದೆ, ಈ ಆಯಪ್​ಗಳನ್ನು ಒಂದೇ ಗುಂಪು ಸೇರಿ ರಚಿಸಿದೆ ಎಂಬ ಶಾಕಿಂಗ್​​ ಸುದ್ದಿಯನ್ನು ಹೊರಹಾಕಿದೆ. ಗೂಗಲ್​ ಪ್ಲೇ ಸ್ಟೋರ್​ನಿಂದ ತೆಗೆದು ಹಾಕಿರುವ ಆಯಪ್​ಗಳ ಪಟ್ಟಿಯಲ್ಲಿ ಫೋಟೋ ಎಡಿಟರ್​, ವಿಡಿಯೋ ಎಡಿಟರ್​​, ವಾಲ್​​ ಪೇಪರ್​​, ಫ್ಲಾಷ್​ಲೈಟ್​​ ಅಪ್ಲಿಕೇಶನ್​, ಫೈಲ್​ ಮ್ಯಾನೇಜರ್​​ ಮತ್ತು ಮೊಬೈಲ್​ ಗೇಮ್​ಗಳಿದ್ದವು. ಈ ಎಲ್ಲಾ ಆಯಪ್​ಗಳ ವೈಶಿಷ್ಟ್ಯತೆ ಮತ್ತು ಫೀಚರ್​ಗಳು ಒಂದೇ ಸಮನಾಗಿದ್ದವು ಎಂದು ತಿಳಿಸಿದೆ.

ಸೂಪರ್ ಫ್ಲ್ಯಾಶ್ ಲೈಟ್, ಸೋಲಿಟೈರ್, ಅಕ್ಯುರೇಟ್ ಸ್ಕ್ಯಾನಿಂಗ್ ಆಫ್ ಕ್ಯೂ ಆರ್ ಕೋಡ್, ಕ್ಲಾಸಿಕ್ ಕಾರ್ಡ್ ಗೇಮ್. ಜಂಕ್ ಫೈಲ್ ಕ್ಲೀನಿಂಗ್, ಸಿಂಥೇಟಿಕ್ ಝಡ್, ಫೈಲ್ ಮೆನೇಜರ್, ಸೂಪರ್ ವಾಲ್ ಪೇಪರ್ ಫ್ಲ್ಯಾಶ್ ಲೈಟ್, ವಾಲ್ ಪೇಪರ್ ಲೆವೆಲ್, ಕಾನ್ ಟೂರ್ ಲೆವೆಲ್ ವಾಲ್ ಪೇಪರ್, ಐ ಪ್ಲೇಯರ್ ಮತ್ತು ಐ ವಾಲ್ ಪೇಪರ್, ವಿಡಿಯೋ ಮೇಕರ್, ಕಲರ್ ವಾಲ್ ಪೇಪರ್ಸ್, ಪೆಡೋಮೀಟರ್. ಪವರ್ ಫುಲ್ ಫ್ಲ್ಯಾಶ್ ಲೈಟ್, ಸೂಪರ್ ಬ್ರೈಟ್ ಫ್ಲ್ಯಾಶ್ ಲೈಟ್, ಕಾಂಪೋಸೈಟ್ ಝಡ್, ಸ್ಕ್ರೀನ್ ಶಾಟ್ ಕ್ಯಾಪ್ಚರ್, ಡೈಲಿ ಹೋರೋಸ್ಕೋಪ್ ವಾಲ್ ಪೇಪರ್ಸ್, ವುಕ್ಸಿಯಾ ರೀಡರ್, ಪ್ಲಸ್ ವೆದರ್, ಎನಿಮ್ ಲೈವ್ ವಾಲ್ ಪೇಪರ್, ಐ ಹೆಲ್ತ್ ಸ್ಟೆಪ್ ಕೌಂಟರ್, ಕಾಮ್ ಟೈಪ್ ಫಿಕ್ಷನ್, ಪಾಡೆನಾಟೆಫ್

ಇನ್ನು ಪ್ಲೇ ಸ್ಟೋರ್​ನಿಂದ ರಿಮೂವ್​ ಆದ ಆಯಪ್​ಗಳು ದುರುದ್ದೇಶಪೂರಿತ ಕೋಡ್​ ಹೊಂದಿದ್ದು, ಬಳಕೆದಾರರ ಫೇಸ್​ಬುಕ್​ ಆಯಪ್​​ಗಳ ಬ್ರೌಸರ್​ ವಿಂಡೋವನ್ನು ನಕಲಿ ಮಾಡಿ ಲೋಡ್​ ಮಾಡುತ್ತದೆ. ಬಳಕೆದಾರರು ಇದು ಅಸಲಿ ಎಂದು ತಿಳಿದು ಕಾರ್ಯ ನಿರ್ವಹಿಸುತ್ತಾರೆ. ಆ ಮೂಲಕ ಆಯಪ್​ಗಳು ಬಳಕೆದಾರರ ಪಾಸ್​​​ವರ್ಡ್​​ ಮತ್ತು ಇತರೆ ಮಾಹಿತಿಯನ್ನು ಹ್ಯಾಕ್​​ ಮಾಡುತ್ತಿದ್ದರು ಎನ್ನಲಾಗಿದೆ. ಇದೀಗ ಈ ಆಯಪ್​ ಅನ್ನು ಗೂಗಲ್​ ತನ್ನ ಪ್ಲೇ ಸ್ಟೋರ್​ನಿಂದ ರಿಮೂವ್​ ಮಾಡಿದೆ.
(ಮಾಹಿತಿNews18 ಕನ್ನಡ ಕೃಪೆ )  

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ