ಹೋಮ್ ಕ್ವಾರಂಟೈನ್ ನಲ್ಲಿ ಸಿದ್ದರಾಮಯ್ಯ ?: ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಮಾಜಿ ಸಿಎಂ ವಾಸ್ತವ್ಯ!
ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಮಧುಮೇಹದಿಂದ
ಬಳಲುತ್ತಿದ್ದು, ಇತ್ತೀಚೆಗೆ ಅವರು ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ರಾಜ್ಯದಲ್ಲಿ
ಕೊರೋನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರ ಸಂಪರ್ಕದಿಂದ ದೂರವಿರಲು
ಸಿದ್ದರಾಮಯ್ಯ ಮೈಸೂರು ಸಮೀಪವಿರುವ ಫಾರ್ಮ್ ಹೌಸ್ ಗೆ ತೆರಳಿದ್ದಾರೆ,
ತಮ್ಮ
ಪುತ್ರ ಡಾ,ಯತೀಂದ್ರ ಅವರ ಸಲಹೆಯ ಮೇರೆಗೆ ಸಾರ್ವಜನಿಕ ಸಂಪರ್ಕದಿಂದ ದೂರ ಉಳಿದಿದ್ದಾರೆ,
ಆದರೆ ಸಾಮಾಜಿಕ ಮಾಧ್ಯಮದಲ್ಲಿ ಸಿದ್ದರಾಮಯ್ಯ ಸಕ್ರಿಯವಾಗಿದ್ದಾರೆ, ಕೊರೋನಾ ವಿರುದ್ಧ
ಹೋರಾಡಲು ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಕೈಗೊಂಡ ಕ್ರಮಗಳನ್ನು ತಿಳಿಯಲು
ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮಾಹಿತಿ ಪಡೆಯುತ್ತಿದ್ದಾರೆ.
ಸಿದ್ದರಾಮಯ್ಯ
ಅವರ ಆಪ್ತರಾದ ಎಚ್,ಸಿ ಮಹಾದೇವಪ್ಪ, ಕೆ.ವೆಂಕಟೇಶ್, ಎಚ್ ಪಿ ಮಂಜುನಾಥ್ ಮತ್ತು ಶಾಸಕ
ಬದರಹಳ್ಳಿ ಹಂಪನಗೌಡ ಸಿದ್ದರಾಮಯ್ಯ ಅವರ ಜೊತೆ ನಂದಿನ ರಾಜಕೀಯದ ಬಗ್ಗೆ
ಚರ್ಚಿಸುತ್ತಾರೆ.ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಇತ್ತೀಚೆಗೆ ಟಿ.ಕತೂರ್ ನಲ್ಲಿರುವ
ಫಾರ್ಮ್ ಹೌಸ್ ಗೆ ತೆರಳಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು.
ಬೆಳಗ್ಗಿನ ಜಾವ ವಾಕಿಂಗ್ ನಿಂದ ದಿನ ಆರಂಭಿಸುವ
ಸಿದ್ದರಾಮಯ್ಯ ತಮ್ಮ 10 ಎಕರೆ ವಿಸ್ತೀರ್ಣವಿರುವ ಫಾರ್ಮ್ ಹೌಸ್ ನಲ್ಲಿ ಯೋಗ ಮತ್ತು
ಉಸಿರಾಟದ ವ್ಯಾಯಾಮ ಮಾಡುತ್ತಾರೆ.
ಸಿದ್ದರಾಮಯ್ಯ ಹೋಮ್ ಕ್ವಾರಂಟೈನ್ ನಲ್ಲಿಲ್ಲ
ಅವರು ಆರೋಗ್ಯವಾಗಿದ್ದಾರೆ ಎಂದು ಸಿದ್ದರಾಮಯ್ಯ ಸೆಕ್ರೆಟರಿ ರಾಮಯ್ಯ ತಿಳಿಸಿದ್ದಾರೆ,
ಬೆಂಗಳೂರಿನಲ್ಲಿ ಹಲವು ಕಾರ್ಯಕ್ರಮಗಳಿದ್ದು ಮುಂದಿನ ಕೆಲ ದಿನಗಳಲ್ಲಿ ನಗರಕ್ಕೆ
ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಶಾಸಕ ಯತೀಂದ್ರ ಅವರು ಸ್ವಯಂ
ಕ್ವಾರಂಟೈನ್ ನಲ್ಲಿದ್ದು ಅವರು ಟೆಸ್ಟ್ ನೆಗೆಟಿವ್ ಬಂದಿದೆ ಎಂದು ಹೇಳಿದ್ದಾರೆ.
(ಮಾಹಿತಿ ಕನ್ನಡ ಪ್ರಭ ಕೃಪೆ )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ