ವಾಷಿಂಗ್ಟನ್ : ಭಾರತದ ಮೇಲೆ ನಮಗೆ ವಿಶೇಷವಾದ ಅಭಿಮಾನವಿದೆ ಎಂದು ಈಗಾಗಲೇ
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳಿರುವ ವಿಚಾರ ಎಲ್ಲರಿಗೂ ತಿಳಿದೇ
ಇದೆ. ಆದರೆ ಈಗ ಮತ್ತೊಮ್ಮೆ ಭಾರತದ ಪರವಾಗಿ ಅವರು ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಅಮೇರಿಕಾ ಲವ್ಸ್ ಇಂಡಿಯಾ' ಎಂಬ ಅವರ ಟ್ವೀಟ್ ಪ್ರಪಂಚದಾದ್ಯಂತ ವೈರಲ್ ಆಗಿದೆ. ಆಮೇರಿಕಾದ 244 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆ ಅಧ್ಯಕ್ಷ ಮತ್ತು ದೇಶದ ಜನರಿಗೆ ಶನಿವಾಯ ಶುಭಾಶಯ ಸಂದೇಶವನ್ನು ಕಳುಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'ಧನ್ಯವಾದಗಳು ನನ್ನ ಪ್ರಿಯ ಸ್ನೇಹಿತ' ಎಂದು ಟ್ವೀಟ್ ಮಾಡಿದ್ದಾರೆ. ಅಮೇರಿಕಾ ಲವ್ಸ್ ಇಂಡಿಯಾ ಎಂದು ಟ್ವಿಟ್ಟರ್ ಮೂಲಕ ಮತ್ತೊಮ್ಮೆ ತಮ್ಮ ಅಭಿಮಾನ ತೋರಿಸಿದ್ದಾರೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ