
ಮಹಾರಾಷ್ಟ್ರ ಸರ್ಕಾರ ತಿಳಿಸಿರುವ ಪ್ರಕಾರ ಸಾರ್ವಜನಿಕವಾಗಿ ಕೂರಿಸುವ ಗಣೇಶನ ಎತ್ತರ ಗರಿಷ್ಠ 4 ಅಡಿಗೆ ನಿಗದಿ ಮಾಡಲಾಗಿದೆ. ನಾಲ್ಕು ಅಡಿಗಿಂತ ಎತ್ತರದ ಗಣೇಶ ಕೂರಿಸುವಂತಿಲ್ಲ. ಮನೆಗಳಲ್ಲಿ 2 ಅಡಿ ಗಣೇಶ ಕೂರಿಸಲು ಮಾತ್ರ ಅವಕಾಶ ಮಾಡಿಕೊಡಲಾಗಿದೆ.
ಮಹಾರಾಷ್ಟ್ರದಲ್ಲಿ ಕೊರೊನಾ ಭೀಕರ ಪರಿಸ್ಥಿತಿ: ಸೋಂಕಿನಿಂದ ಗುಣಮುಖರಾದವರಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುವಂತೆ ಒತ್ತಾಯ
ಮಹಾರಾಷ್ಟ್ರದಲ್ಲಿ ವಿನಾಯಕ ಮಹೋತ್ಸವ ಸುಮಾರು 11 ದಿನಗಳವರೆಗೂ ನಡೆಯಲಿದೆ.
ಹೀಗಾಗಿ, ತಿಂಗಳ ಮುಂಚೆಯೇ ಮಹಾ ಸರ್ಕಾರ ನಿಯಮಗಳನ್ನು ರೂಪಿಸಿದೆ.
*
ಸಾರ್ವಜನಿಕವಾಗಿ ಕೂರಿಸುವ ಗಣಪತಿ ವಿಗ್ರಹವನ್ನು 4 ಅಡಿಗಳಿಗೆ ಸೀಮಿತಗೊಳಿಸಲಾಗಿದೆ.
ಮನೆಯಲ್ಲಿ ಕೂರಿಸುವ ಗಣಪತಿ ವಿಗ್ರಹಗಳನ್ನು 2 ಅಡಿಗಳಿಗೆ ಸೀಮಿತಗೊಳಿಸಬೇಕು.* ಪೆಂಡಲ್ ಒಳಗೆ ಹತ್ತು ಜನರು ಮಾತ್ರ ಇರಲು ಅವಕಾಶ ನೀಡಲಾಗಿದೆ. ಅದಕ್ಕಿಂ ಹೆಚ್ಚು ಮಂದಿ ಪ್ರವೇಶಿಸುವಂತಿಲ್ಲ.
* ಗಣೇಶ ವಿಸರ್ಜನೆ ಮಾಡುವ ವೇಳೆ ಹತ್ತಿರ ಕೆರೆ ಅಥವಾ ಸರ್ಕಾರ ಸೂಚಿಸುವ ಸ್ಥಳದಲ್ಲಿ ಮಾತ್ರ ವಿರ್ಸಜನೆ ಮಾಡಬೇಕು. ಅಥವಾ ಮುಂದಿನ ವರ್ಷಕ್ಕೆ ಗಣೇಶ ಉತ್ಸವವನ್ನು ಮುಂದೂಡಬಹುದು.
* ಪೆಂಡಲ್ ಹಾಕುವ ಸ್ಥಳದಲ್ಲಿ ಡೆಂಗ್ಯೂ, ಮಲೇರಿಯಾ, ಕೊವಿಡ್ ಗೆ ಸಂಬಂಧಪಟ್ಟಂತೆ ಜಾಗೃತಿ ಮೂಡಿಸಬೇಕು.
* ಗಣೇಶ ಕಾರ್ಯಕ್ರಮಗಳನ್ನು ಸಾಧ್ಯವಾದಷ್ಟು ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ವೀಕ್ಷಿಸುವಂತಹ ವ್ಯವಸ್ಥೆ ಮಾಡಬೇಕು
* ಆರತಿ, ಭಜನೆ ಹಾಗೂ ಇನ್ನಿತರ ಕಾರ್ಯಕ್ರಮಗಳ ವೇಳೆ ಜನಸಂದಣಿ ಇರದಂತೆ ನೋಡಿಕೊಳ್ಳಬೇಕು
* ಗಣೇಶ ತರುವ ವೇಳೆ, ವಿಸರ್ಜನೆ ವೇಳೆ ಮೆರವಣಿಗೆ ಮಾಡುವಂತಿಲ್ಲ. ವಿಸರ್ಜನೆ ಸ್ಥಳದಲ್ಲಿ ಜನರು ಕಡಿಮೆ ಭಾಗವಹಿಸಬೇಕು
* ಈ ವೇಳೆ ನಗರಸಭೆಗಳು, ಪೊಲೀಸ್, ಸರ್ಕಾರಿ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳಿಗೆ ಎಲ್ಲರೂ ಸಮುದಾಯಗಳ ಜೊತೆ ಸಂಪರ್ಕ ಹೊಂದಿರಬೇಕು, ನಿಯಮಗಳನ್ನು ಪಾಲಿಸುವಂತೆ ಕ್ರಮ ಜರುಗಿಸಬೇಕು
* ಇನ್ನು ಹೆಚ್ಚಿನ ಮಾರ್ಗಸೂಚಿಗಳನ್ನು ನೀಡಲಾಗುವುದು, ಅದನ್ನು ಅನುಸರಿಸಬೇಕು.
(ಮಾಹಿತಿOneindiaಕೃಪೆ )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ