WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Sunday, April 18, 2021

ವಿಜಯನಗರ ಜಿಲ್ಲೆಯಲ್ಲಿ ಕರೋನಾ ಸ್ಪೋಟ: ನಿರ್ಧಾಕ್ಷಿಣ್ಯ ಕ್ರಮಕ್ಕೆ ಮುಂದಾಗುತ್ತಿರುವ ಅಧಿಕಾರಿಗಳು

 

ಹೊಸಪೇಟೆ ಏ18: ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಕರೋನಾ ಮಹಾಸ್ಪೋಟವಾಗಲಾರಂಭಿಸಿದೆ. ಶನಿವಾರ 80 ಪ್ರಕರಣಗಳು ಪತ್ತೆಯ ಬೆನ್ನಲಿಯೇ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ 12 ಮತ್ತು ರೈಲ್ವೆ ಟ್ರ್ಯಾಕ್ ಲೈನ್ ಕೆಲಸಗಾರ 20 ನೌಕರರಿಗೂ ದೃಢವಾಗುವ ಮೂಲಕ ಮಹಾ ಆತಂಕಕ್ಕೆ ಕಾರಣವಾಗುತ್ತಿದೆ.
ಸರ್ಕಾರದ ಜಾಗೃತಿ, ಲಸಿಕೆ, ಮುಂತಾಂದ ಕ್ರಮಗಳ ಮಧ್ಯ ಸಾರ್ವಜನಿಕರಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಅರಿವು ಮೂಡದಿರುವುದು ದಿನೇ ದಿನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸರು ಹಾಗೂ ಸ್ಥಳೀಯ ಆಡಳಿತ ಎಷ್ಟೇ ಎಚ್ಚರಿಕೆಗಳನ್ನು ನೀಡಿದರೂ ಸಾರ್ವಜನಿಕರು ನಿರ್ಲಕ್ಷ್ಯವಹಿಸುತ್ತಿರುವುದು ಇಂದಿನ ಆತಂಕಕ್ಕೆ ಕಾರಣವಾಗಿದೆ.
ಅಖಂಡ ಬಳ್ಳಾರಿ ಸೇರಿದಂತೆ ನೂತನ ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆಗೆ ಮಾತ್ರ ಸಿಮೀತವಾಗಿದ್ದ ಪ್ರಕರಣಗಳು ಶನಿವಾರ ಹಾಗೂ ಭಾನುವಾರ ಏಕಾಏಕಿ ಸ್ಪೋಟಗೊಂಡಿದ್ದು 1600ಕ್ಕೂ ಅಧಿಕವಾದಂತಾಗಿದೆ.
ವಿಜಯನಗರ ಜಿಲ್ಲೆ ಎಲ್ಲಿಯೇ ಶನಿವಾರ ಒಂದರಲ್ಲಿಯೇ 130ಕ್ಕೂ ಪ್ರಕರಣಗಳು ಪತ್ತೆಯಾಗಿದ್ದು ಇಂದು ಭಾನುವಾರ ಬೆಳಿಗ್ಗೆ 32ಕ್ಕೂ ಹೆಚ್ಚು ಪ್ರಕರಣಗಳು ಕಂಡುಬರುವ ಮೂಲಕ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ ಈ ವರೆಗೂ ವಿಜಯನಗರ ಜಿಲ್ಲೆಯಲ್ಲಿ 642 ಸಕ್ರೀಯ ಪ್ರಕರಣಗಳು ದಾಖಲಾದಂತಾಗಿದೆ. ಈ ಪೈಕಿ ಹೊಸಪೇಟೆಯಲ್ಲಿ 341, ಕೂಡ್ಲಗಿಯಲ್ಲಿ 110, ಹರಪನಹಳ್ಳಿಯಲ್ಲಿ 80, ಹಡಗಲಿಯಲ್ಲಿ 66 ಹಾಗೂ ಹಗರಿಬೊಮ್ಮನಹಳ್ಳಿಯಲ್ಲಿ 45 ಸಕ್ರೀಯ ಪ್ರಕರಣಗಳು ವರದಿಯಾಗಿವೆ.
ಬೀದಿಗಿಳಿದ ಅಧಿಕಾರಿಗಳು ;
ಅನೇಕ ಸಂದರ್ಭಗಳಲ್ಲಿ ಮುಂಜಾಗೃತೆಗೆ ಎಚ್ಚರಿಕೆ ನೀಡುತ್ತಲೇ ಇದ್ದ ಅಧಿಕಾರಿಗಳು ಶನಿವಾರದ ವರದಿಯಾದ ಪ್ರಕರಣಗಳಿಂದಾಗಿ ಬೀದಿಗಿಳಿದು ದಂಡಂ ದಶಗುಣಂ ಎಂಬಂತೆ ತರಕಾರಿ ಮಾರುಕಟ್ಟೆ, ಮಾಂಸ ಮಾರುಕಟ್ಟೆ ಸೇರಿದಂತೆ ಜನನಿಭೀಡ ಪ್ರದೇಶಗಳಲ್ಲಿ ಹೊಸಪೇಟೆ ತಹಶೀಲ್ದಾರ ಎಚ್.ವಿಶ್ವನಾಥ, ನಗರಸಭೆಯ ಪೌರಾಯುಕ್ತ ಮನ್ಸೂರ ಅಲಿ, ಪರಿಸರ ಅಭಿಯಂತರೆ ಆರತಿ ಕಂದಾಯ ಇಲಾಖೆಯ ಮಲ್ಲಿಕಾರ್ಜುನಗೌಡ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಪೊಲೀಸರು ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಕಾಪಾಡದವರ ಮೇಲೆ ದಂಡಂ ದಶಗುಣಂ ಎಂಬಂತೆ ದಂಡ ವಿಧಿಸಲು ಮುಂದಾಗಿದ್ದಾರೆ, ಸಿಬ್ಬಂದಿಗಳ ಸಹಾಯದಿಂದ ಮುಂದೆ ನಿಂತು ನಿರ್ಧಾಕ್ಷಣ್ಯವಾಗಿ ದಂಡ ವಿಧಿಸಲು ಮುಂದಾಗುತ್ತಿದ್ದಾರೆ. ಈ ಕುರಿತು ಸಂಜೆವಾಣಿಯೊಂದಿಗೆ ಮಾತನಾಡಿದ ತಹಶೀಲ್ದಾರ್ ಎಚ್. ವಿಶ್ವನಾಥ ದಂಡ ಪಡೆಯುವುದು ಮುಖ್ಯವಲ್ಲ ಜನರಲ್ಲಿ ಜಾಗೃತಿ ಮೂಡಬೇಕು ಸಾರ್ವಜನಿಕರಿಗೆ ರಕ್ಷಣೆ ನೀಡಬೇಕು ಎಂಬುದು ನಮ್ಮ ಅಭಿಪ್ರಾಯ ಎಂದು ಕಂದಾಯ, ಸ್ಥಳೀಯ ಸಂಸ್ಥೆ ಮತ್ತು ಪೊಲೀಸರು ಎಲ್ಲೆಂದರಲ್ಲಿ ದಂಡ ಹಾಕುತ್ತಾರೆ ಸಾರ್ವಜನಿಕರು ಕಡ್ಡಾಯ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡುವ ಮೂಲಕ ಕರೋನಾಕ್ಕೆ ತುತ್ತಾಗುವುದನ್ನು ತಪ್ಪಿಸಬೇಕು ಎಂದರು.

(ಮಾಹಿತಿ ಕೃಪೆ ಈ ಸಂಜೆ ವಾಣಿ)

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ