ಬೆಂಗಳೂರು, ಏ.18- ರಾಜ್ಯದಲ್ಲಿ ಇಂದೂ ಕೊರೊನಾ ಸೋಂಕಿನ ಆರ್ಭಟ ಮುಂದುವರಿದಿದೆ ಹೊಸ ಪ್ರಕರಣಗಳು 19 ಸಾವಿರ ಗಡಿದಾಟಿದೆ ಕೋರೊನಾ ಸೋಂಕಿತರ ಸಂಖ್ಯೆ ದಿನದಿನವೂ ದೊಡ್ಡ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ ರಾಜಧಾನಿ ಬೆಂಗಳೂರು ನಗರದಲ್ಲೂ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು ಬೆಂಗಳೂರಿನಲ್ಲಿ ಹೊಸ ಸೋಂಕು ಪ್ರಕರಣಗಳ ಸಂಖ್ಯೆ 12 ಸಾವಿರದ ಗಡಿ ದಾಟಿದೆ. ಇಂದು ಸಾವಿಗೀಡಾಗಿರುವ ಸಂಖ್ಯೆಯಲ್ಗು ಭಾರಿ ಏರಿಕೆಯಾಗಿದ್ದು ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 81 ಮಂದಿ ಸೋಂಕಿತರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಬೆಂಗಳೂರು ನಗರ ಒಂದರಲ್ಲೇ 60 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.ಹಾಗೆಯೇ ಮೈಸೂರು ಧಾರವಾಡದಲ್ಲಿ ತಲಾ ಮೂವರು, ಬಳ್ಳಾರಿ ಕೊಪ್ಪಳ ಉತ್ತರ ಕನ್ನಡ ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿತಲಾ ಇಬ್ಬರು, ಬೆಳಗಾವಿ ಬೀದರ್ ಚಾಮರಾಜನಗರ ಮಂಡ್ಯ ತುಮಕೂರು ಜಿಲ್ಲೆಗಳಲ್ಲಿ ತಲಾ ಒಬ್ಬರು ಕೊರನಾದಿಂದ ಮೃತಪಟ್ಟಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದ್ದು ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ ಇಂದು ಒಂದು ಲಕ್ಷ 33 ಸಾವಿರ ಸನಿಹದಲ್ಲಿದೆ.
ಇಂದು ರಾಜ್ಯದಲ್ಲಿ19067 ಜನರಿಗೆಸೊಂಕು ದೃಢ ಪಟ್ಟಿದೆ. ಇಂದು 4603ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ 81 ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ1161065ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು1014152 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 133543 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 13351 ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 620ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ12793 ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 546635ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಕಳೆದ24ಗಂಟೆಗಳಲ್ಲಿ ಸೊಂಕಿಗೆ 60 ಸೋಂಕಿತರು ಬಲಿಯಾಗಿದ್ದು , ಬೆಂಗಳೂರಿನಲ್ಲಿ ಒಟ್ಟಾರೆ ಸಾವಿನ ಸಂಖ್ಯೆ5123ಕ್ಕೆ ಏರಿಕೆಯಾಗಿದೆ.
ಇಂದು2560ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರಿನಲ್ಲಿ ಇದುವರೆಗೂ443614 ಸೋಂಕಿತರು ಗುಣಮುಖರಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು97897 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾ ವಾರು ಸೊಂಕಿತರ ವಿವರ
ಬಾಗಲಕೋಟೆ 104, ಬಳ್ಳಾರಿ 238, ಬೆಳಗಾವಿ 129, ಬೆಂಗಳೂರು ಗ್ರಾಮಾಂತರ 245, ಬೀದರ್ 469, ಚಾಮರಾಜನಗರ 102, ಚಿಕ್ಕಬಳ್ಳಾಪುರ 190, ಚಿಕ್ಕಮಗಳೂರು 81, ಚಿತ್ರದುರ್ಗ 102, ದಕ್ಷಿಣ ಕನ್ನಡ 272, ದಾವಣಗೆರೆ 133, ಧಾರವಾಡ 265, ಗದಗ 48, ಹಾಸನ 348, ಹಾವೇರಿ 43, ಕಲಬುರಗಿ 671, ಕೊಡಗು 44, ಕೋಲಾರ 175, ಕೊಪ್ಪಳ 65, ಮಂಡ್ಯ 338, ಮೈಸೂರ 777, ರಾಯಚೂರು 133, ರಾಮನಗರ 122, ಶಿವಮೊಗ್ಗ 156, ತುಮಕೂರು 494, ಉಡುಪಿ 152, ಉತ್ತರ ಕನ್ನಡ 104, ವಿಜಯಪುರ 200, ಯಾದಗಿರಿ 74.
(ಮಾಹಿತಿ ಕೃಪೆ ಈ ಸಂಜೆ ವಾಣಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ