ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಕುಸಿತದ ಬಳಿಕ ಶುಕ್ರವಾರ ಮತ್ತಷ್ಟು ಏರಿಕೆಗೊಂಡಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಶೇಕಡಾ 0.32ರಷ್ಟು ಏರಿಕೆಗೊಂಡು 47,927 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ಶೇಕಡಾ 0.25ರಷ್ಟು ಹೆಚ್ಚಳವಾಗಿ ಪ್ರತಿ ಕೆಜಿಗೆ 69,389 ರೂಪಾಯಿಗೆ ತಲುಪಿದೆ.
ಕಳೆದ ವಹಿವಾಟಿನಲ್ಲಿ ಚಿನ್ನ ಶೇಕಡಾ 0.83ರಷ್ಟು ಮತ್ತು ಬೆಳ್ಳಿ ಶೇಕಡಾ 1.6ರಷ್ಟು ಕುಸಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ದುರ್ಬಲದ ಜೊತೆಗೆ ಚಿನ್ನದ ಬೆಲೆ ಹೆಚ್ಚಾಗಿದೆ.
ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.2ರಷ್ಟು ಏರಿಕೆಯಾಗಿ 1,787.11 ಡಾಲರ್‌ಗೆ ತಲುಪಿದೆ. ಈ ವಾರ ಇಲ್ಲಿಯವರೆಗೆ ಚಿನ್ನವು ಸುಮಾರು ಶೇಕಡಾ 0.6ರಷ್ಟು ಹೆಚ್ಚಾಗಿದೆ.
ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಔನ್ಸ್‌ಗೆ ಶೇಕಡಾ 0.3ರಷ್ಟು ಇಳಿದು 26.10 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ ಸ್ಥಿರವಾಗಿ 1,203.10 ಡಾಲರ್‌ಗೆ ತಲುಪಿದೆ.
(ಮಾಹಿತಿ ಕೃಪೆ Good Returns)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ