WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, April 23, 2021

ಗರ್ಭಿಣಿ ಮಹಿಳೆಯರಿಗೆ ಸಿಗ್ತಿಲ್ಲ ಕೊರೊನಾ ಚಿಕಿತ್ಸೆ.. ಇದು ಎರಡು ಜೀವಗಳ ಪ್ರಶ್ನೆ ಸಾರ್ ಎಂದು ಕುಟುಂಬಸ್ಥರ ಕಣ್ಣೀರು

 

ಬೆಂಗಳೂರು: ಕೊರೊನಾದ ಎರಡನೇ ಅಲೆ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಅದರಲ್ಲೂ ಬೆಂಗಳೂರಿನ ಶಿವಾಜಿನಗರದ ಘೋಷಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿ ಮಹಿಳೆಯರ ಪರಿಸ್ಥಿತಿ ಹೇಳತೀರದ್ದು. ಚಿಕಿತ್ಸೆ ಇಲ್ಲದೆ ಗರ್ಭೀಣಿಯರು ನರಳಾಡುತ್ತಿದ್ದಾರೆ ಎಂಬ ಆರೋಪಗಳು ಹೇಳಿ ಬರುತ್ತಿವೆ. ಕೊರೊನಾ ಪಾಸಿಟಿವ್ ಬಂದ ಮಹಿಳೆಯರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ಮಹಿಳೆ ಕುಟುಂಬಸ್ಥರು ಆರೋಪ ಮಾಡುತ್ತಿದ್ದು ಆಸ್ಪತ್ರೆ ಮುಂದೆ ಆಕ್ರೋಶ ಹೊರ ಹಾಕಿದ್ದಾರೆ.

ಶಿವಾಜಿನಗರದ ಘೋಷಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿಯರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆಯಂತೆ. ಕಣ್ಣೀರು ಹಾಕುತ್ತ ಸೋಂಕಿತ ಮಹಿಳೆ ತನ್ನ ನೋವನ್ನು ತೋಡಿಕೊಂಡಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ಆಸ್ಪತ್ರೆ ಮುಂದೆ ಕುಟುಂಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಅಡ್ಮಿಟ್ ಮಾಡಿ ಮೂರು ದಿನವಾದ್ರೂ, ಗರ್ಭಿಣಿಯರಿಗೆ ಚಿಕಿತ್ಸೆ ಸಿಗ್ತಿಲ್ಲ. ಕುಟುಂಬಸ್ಥರ ಸಂಪರ್ಕಕ್ಕೂ ಬಿಡ್ತಿಲ್ಲವಂತೆ. ಹೀಗಾಗಿ ಗರ್ಭಿಣಿ ಮಹಿಳೆಯರು ವಿಡಿಯೋ ಕಾಲ್ ಮತ್ತು ಫೋನ್ ಮಾಡಿ ಗೋಳು ತೋಡಿಕೊಳ್ಳುತ್ತಿದ್ದಾರೆ.

ಮತ್ತೊಬ್ಬ ಮಹಿಳೆಗೆ ಮೂರು ದಿನದಿಂದ ಬ್ಲೀಡಿಂಗ್ ಆಗ್ತಿದ್ರೂ, ನೋಡೊರೇ ಇಲ್ಲವಂತೆ. ಕೊರೊನಾ ಇರೋ ಕಾರಣಕ್ಕೆ ಅವ್ರನ್ನ ಮುಟ್ಟಲು ಕೂಡ ವೈದ್ಯರು ಹಿಂದೆ ಸರಿಯುತ್ತಿದ್ದಾರೆ ಎಂದು ಸೋಂಕಿತೆ ಕಣ್ಣಿರು ಹಾಕುತ್ತ ನೋವು ಹೇಳಿಕೊಂಡಿದ್ದಾರೆ. ಇಲ್ಲಿ ಚಿಕಿತ್ಸೆ ಕೊಡದಿದ್ರೆ ಡಿಸ್ಚಾರ್ಜ್ ಮಾಡಿ, ನಾವು ಬೇರೆ ಕಡೆ ಹೋಗುತ್ತೇವೆ ಅಂತ ಬೇಡಿಕೊಂಡ್ರು, ಡಿಸ್ಚಾರ್ಜ್ ಮಾಡುತ್ತಿಲ್ಲ. ಈ ಮೊದಲೇ ಬೆಡ್ ಬುಕ್ ಮಾಡಿ ಆಸ್ಪತ್ರೆಗೆ ಬರಬೇಕು ಎಂದು ಸಿಬ್ಬಂದಿ ಬೈಯುತ್ತಿದ್ದಾರೆ ಎಂದು ಆಸ್ಪತ್ರೆ ಹೊರಗೆ ನಿಂತು ಕುಟುಂಬಸ್ಥರು ಗೋಳಾಡುತ್ತಿದ್ದಾರೆ.

ಅವ್ಯವಸ್ಥೆ ವಿರುದ್ಧ ಕುಟುಂಬಸ್ಥರ ಆಕ್ರೋಶ
ಸ್ಮಶಾನಕ್ಕೆ ಹೋಗಿ ಪರಿಸ್ಥಿತಿ ನೋಡೋದಲ್ಲ. ಇಲ್ಲಿ ಬಂದು ನೋಡಿ ಪರಿಸ್ಥಿತಿ ಹೇಗಿದೆ ಎಂದು. ಮೊದಲೇ ಬೆಡ್ ಬುಕ್ ಮಾಡಬೇಕು ಅಂತಾರೆ. ಗರ್ಭಿಣಿ ಅಂತಾನೂ ನೋಡಲ್ಲ, ಆಕೆ ನೋವಿನಿಂದ ನರಳುತ್ತಿದ್ರು ಚಿಕಿತ್ಸೆ ಕೊಡ್ತಿಲ್ಲ. ಪ್ರಾಣ ಹೋದ್ರೆ ಯಾರು ಹೊಣೆ ಆಗ್ತಾರೆ. ಒಂದಲ್ಲ, ಎರಡೂ ಜೀವಗಳ ಪ್ರಶ್ನೆ ಇದು. ಸರ್ಕಾರ ಇಂತಿಷ್ಟು ಹೆಣಗಳ ಲೆಕ್ಕ ಕೊಡ್ತೀವಿ ಅಂತ ಕಮಿಟ್ ಆಗಿರಬೇಕು. ಅದಕ್ಕೆ ಸಾಮಾನ್ಯರಿಗೆ ಏನೇ ಆದ್ರೂ, ಸಾವು, ನೋವಾದ್ರು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಕುಟುಂಸ್ಥರು ಬೇಸರ ವ್ಯಕ್ತ ಪಡಿಸಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಆಕ್ಸಿಜನ್ ಅಭಾವ ಶುರುವಾಗಿದೆ. ಒಂದು ಗಂಟೆಗೆ 1,500 ರೂ. ಚಾರ್ಜ್ ಮಾಡುತ್ತಿದ್ದಾರೆ. 120 ಗಂಟೆ ಆಕ್ಸಿಜನ್ ಬಳಕೆ‌ ಮಾಡಿದ್ರೆ ಖಾಸಗಿ ಆಸ್ಪತ್ರೆಯಲ್ಲಿ1,80,000 ರೂ. ಬಿಲ್ ಆಗುತ್ತೆ.

ಇದನ್ನೂ ಓದಿ: ನಾವು ಮನೆ ಬಿಟ್ಟು ಕೆಲಸ ಮಾಡ್ತಾ ಇದೀವಿ, ನಾವು ಸತ್ರೂ ಯಾರೂ ಕೇಳೋರೆ ಇಲ್ಲ! ಚಿತಾಗಾರದ ಸಿಬ್ಬಂದಿ ಹೋರಾಟದ ಎಚ್ಚರಿಕೆ

The post ಗರ್ಭಿಣಿ ಮಹಿಳೆಯರಿಗೆ ಸಿಗ್ತಿಲ್ಲ ಕೊರೊನಾ ಚಿಕಿತ್ಸೆ.. ಇದು ಎರಡು ಜೀವಗಳ ಪ್ರಶ್ನೆ ಸಾರ್ ಎಂದು ಕುಟುಂಬಸ್ಥರ ಕಣ್ಣೀರು appeared first on TV9 Kannada.

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ