WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Sunday, April 18, 2021

ಆಗಾಗ್ಗೆ ಬಾಯಾಡಿಸುವ ಬಯಕೆಯೇ ? ಇಲ್ಲಿವೆ ನೋಡಿ, ಐದು ಆರೋಗ್ಯಕರ ಆಯ್ಕೆಗಳು


 ಬೆಂಗಳೂರು : ಕರೊನಾ ಹಿನ್ನೆಲೆಯಲ್ಲಿ ಮತ್ತೊಮ್ಮೆ ವರ್ಕ್​ ಫ್ರಂ ಹೋಂ ಮಾಡಲು ಅನೇಕ ಉದ್ಯೋಗಿಗಳು ತಯಾರಾಗುತ್ತಿದ್ದಾರೆ. ಮನೆಯಲ್ಲೇ ಇದ್ದು ಕೆಲಸ ಮಾಡುವುದಕ್ಕೆ ಎಷ್ಟೋ ಪ್ರಯೋಜನಗಳಿರಬಹುದು. ಆದರೆ, ಒಂದು ಸಮಸ್ಯೆ ಎಂದರೆ ಆಗಾಗ್ಗೆ ಅಡುಗೆಮನೆಗೆ ಹೋಗಿ ರೆಡಿ ಸ್ನ್ಯಾಕ್ಸ್​, ಕುರುಕಲುತಿಂಡಿ, ಚಾಕೊಲೇಟು ಇತ್ಯಾದಿಯನ್ನು ತೆಗೆದು ಬಾಯಾಡಿಸುವ ಅವಕಾಶ ಸಿಗುತ್ತದೆ. ಇದರಿಂದ ತೂಕ ಹೆಚ್ಚುವ ಆತಂಕದೊಂದಿಗೆ ಆರೋಗ್ಯ ಹಾಳಾಗುವ ಅಪಾಯ ಬೇರೆ.

ಈ ದೃಷ್ಟಿಯಿಂದ ಬಾಯಾಡಿಸಲು ಸುಲಭವಾದ ಆರೋಗ್ಯದಾಯಕವಾದ ಕೆಲವು ಪದಾರ್ಥಗಳ ಪಟ್ಟಿ ಇಲ್ಲಿದೆ ನೋಡಿ -

1. ಹುರಿಗಾಳು - ಆಲೂಗೆಡ್ಡೆ ಚಿಪ್ಸ್​​ನ ಪ್ಯಾಕೆಟ್ ಹಿಡಿಯುವ ಬದಲು ಹುರಿದ ಕಡಲೆಕಾಳುಗಳನ್ನು ತಂದಿಟ್ಟುಕೊಳ್ಳಿ. ಅಷ್ಟೇ ಅಲ್ಲ, ವಿವಿಧ ಕಾಳುಗಳ ಮಿಶ್ರಣ ಮತ್ತು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಲಭ್ಯವಿರುವ ಬ್ರಾಡ್​ಬೀನ್ಸ್, ಫ್ಲಾಕ್ಸ್​ ಸೀಡ್ಸ್, ಸೂರ್ಯಕಾಂತಿ ಬೀಜ ಮುಂತಾದವು ಆರೋಗ್ಯವರ್ಧಕ ಆಯ್ಕೆ. ಕಡಿಮೆ ಕ್ಯಾಲರಿ ನೀಡುವ ಇವುಗಳು ನಾರಿನಾಂಶ ಮತ್ತು ಪ್ರೋಟೀನ್​ ಅಂಶಗಳನ್ನು ಕೂಡ ಯಥೇಚ್ಛವಾಗಿ ಒದಗಿಸುತ್ತವೆ.

2. ಡ್ರೈ ಫ್ರೂಟ್ಸ್ : ಒಣದ್ರಾಕ್ಷಿ, ಗೋಡಂಬಿ, ಬಾದಾಮಿ, ವಾಲ್​ನಟ್​, ಅಂಜೂರ, ಕರ್ಜೂರ ಮುಂತಾದವು ಆ ಪುಟ್ಟ ಹಸಿವನ್ನು ನೀಗಿಸುವಲ್ಲಿ ತುಂಬಾ ಉಪಯುಕ್ತವಾದವು. ಜೊತೆಗೆ, ಮೆಟಬಾಲಿಸಂಅನ್ನು ಉತ್ತಮಗೊಳಿಸಿ ನಮ್ಮ ದೇಹದ ಆರೋಗ್ಯವನ್ನೂ ಹೆಚ್ಚಿಸುತ್ತವೆ.

3. ಪಾಪ್​​ಕಾರ್ನ್ : ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನುವುದಕ್ಕಿಂತ ಒಂದಿಷ್ಟು ಪಾಪ್​ಕಾರ್ನ್ ತಿನ್ನುವುದು ಆರೋಗ್ಯಕರ. ಇಡೀ ಧಾನ್ಯದಿಂದ ತಯಾರಾಗುವ ಒಂದು ಕಪ್​ ಪಾಪ್​​ಕಾರ್ನ್, ಡಯಟರಿ ಫೈಬರ್​ ಮತ್ತು ಪ್ರೋಟೀನ್ ಹೆಚ್ಚಿರುವ ತಿಂಡಿ. ಆದರೆ ಚೀಸ್ ಅಥವಾ ಬಟರ್ ಮಿಶ್ರಿತ ಪಾಪ್​ಕಾರ್ನ್​ಗಳಿಂದ ದೂರವಿರಿ.

4. ತರಕಾರಿಗಳು : ಕ್ಯಾರೆಟ್, ಹುರಳಿಕಾಯಿ, ಸೌತೆಕಾಯಿ, ಮೂಲಂಗಿ ಮುಂತಾದ ತರಕಾರಿಗಳನ್ನು ಚೆನ್ನಾಗಿ ಸ್ವಚ್ಛ ಮಾಡಿ ಕತ್ತರಿಸಿಟ್ಟುಕೊಂಡರೆ, ಹಸಿಯಾಗಿಯೇ ಸೇವಿಸಬಹುದು. ಜೀರೋ ಕ್ಯಾಲರಿ ಆಹಾರವಾದ ಇವುಗಳನ್ನು ಬೇಕೆನಿಸುವಷ್ಟು ಪ್ರಮಾಣದಲ್ಲಿ ತಿನ್ನಬಹುದು ! 

5. ಗ್ರಾನೊಲಾ ಬಾರ್ : ಚಾಕೊಲೇಟ್ ಮತ್ತು ಇತರ ಸಿಹಿತಿಂಡಿಗಳನ್ನು ತಿನ್ನುವ ಬದಲು ಗ್ರಾನೊಲಾ ಬಾರ್​ಗಳನ್ನು ಟ್ರೈ ಮಾಡಿ. ಓಟ್ಸ್ ಮತ್ತು ಡ್ರೈ ಫ್ರೂಟ್ಸ್​ನಿಂದ ಕಡಿಮೆ ಸಕ್ಕರೆಯೊಂದಿಗೆ ಮಾಡಿರುವ ಬಾರ್​ಗಳನ್ನು ಆಯ್ಕೆ ಮಾಡಿ ಖರೀದಿಸಿ ಅಥವಾ ಮನೆಯಲ್ಲೇ ತಯಾರಿಸಿಟ್ಟುಕೊಳ್ಳಿ.

ಆರೋಗ್ಯಕರವಾದ ಈ ತಿನಿಸುಗಳನ್ನು ನೀವೂ ತಿನ್ನಿ. ಮನೆಯಲ್ಲೇ ಇದ್ದು ಸದಾ ಏನಾದರೂ ಕೊಡಮ್ಮ ಎಂದು ದುಂಬಾಲು ಬೀಳುವ ಪುಟಾಣಿಗಳಿಗೂ ಕೊಡಿ. (ಏಜೆನ್ಸೀಸ್)

(ಮಾಹಿತಿ ಕೃಪೆ ವಿಜಯವಾಣಿ)



No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ