ಬೆಂಗಳೂರು (ಏ.20): ರಾಜ್ಯದಲ್ಲಿ ಸೋಮವಾರ 146 ಮಂದಿ ಕೋವಿಡ್‌ನಿಂದ ಮರಣವನ್ನಪ್ಪಿದ್ದು ಪ್ರತಿ ಹತ್ತು ನಿಮಿಷಕ್ಕೆ ಒಬ್ಬರು ಪ್ರಾಣ ಕಳೆದುಕೊಂಡಂತೆ ಆಗಿದೆ. ಬೆಂಗಳೂರು ನಗರದಲ್ಲೇ 97 ಮಂದಿ ಅಸುನೀಗಿದ್ದು 14 ನಿಮಿಷಕ್ಕೆ ಒಬ್ಬರು ಮರಣವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಸೆಪ್ಟೆಂಬರ್ 18ಕ್ಕೆ 179 ಮಂದಿ ಪ್ರಾಣ ಕಳೆದುಕೊಂಡಿದ್ದರು. 213 ದಿನಗಳ ಬಳಿಕ 146 ಮಂದಿ ಮೃತರಾಗಿದ್ದಾರೆ. ಅಕ್ಟೋಬರ್ 10 (102) ಕೊನೆಯ ಬಾರಿ ಶತಕ ಮೀರಿದ ಸಾವು ದಾಖಲಾಗಿತ್ತು. 190 ದಿನದ ಬಳಿಕ ಮೂರಂಕಿಯಲ್ಲಿ ಸಾವು ವರದಿಯಾಗಿದೆ.
ಬೆಂಗಳೂರಲ್ಲಿ ಲಾಕ್ಡೌನ್ ಭೀತಿ : ಮತ್ತೆ ಕಾರ್ಮಿಕರ ಗುಳೆ .
ಏ.17 ಮತ್ತು ಏ. 18ಕ್ಕೆ ಹೋಲಿಸಿದರೆ ಸುಮಾರು 20 ಸಾವಿರ ಪರೀಕ್ಷೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಸೋಂಕಿತರ ಪ್ರಮಾಣದಲ್ಲಿ ತುಸು ಇಳಿಕೆ ದಾಖಲಾಗಿದೆ.
ಮೊದಲ ಅಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ 1.20 ಲಕ್ಷದಷ್ಟುಸಕ್ರಿಯ ಪ್ರಕರಣಗಳಿದ್ದವು. ಪ್ರಸ್ತುತ ಸಕ್ರಿಯ ಪ್ರಕರಣಗಳಲ್ಲಿ ಶೇ. 4.1ರಷ್ಟುಮಂದಿ ಕೋವಿಡ್‌ನ ಗುಣಲಕ್ಷಣ ಹೊಂದಿದ್ದಾರೆ.
(ಮಾಹಿತಿ ಕೃಪೆ Suvarna News)

No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ