WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Sunday, April 18, 2021

ನಾಳೆ ಬೆಂಗಳೂರಿಗೆ ಪ್ರತ್ಯೇಕ ಕಠಿಣ ನಿಯಮ ಜಾರಿ: ಆರ್ ಅಶೋಕ್

 

ಬೆಂಗಳೂರು : ಮೊದಲ ಲಾಕ್ ಡೌನ್ ನಿಂದಲೇ ಈಗಾಗಲೆ ತುಂಬಾ ಸಮಸ್ಯೆ ಆಗಿದೆ, ಲಾಕ್ ಡೌನ್ ಹೊರತು ಪಡಿಸಿ ಬಿಗಿ ಕ್ರಮ ಜಾರಿ ಮಾಡಲಾಗುತ್ತದೆ. ಬೆಂಗಳೂರಿಗೆ ಲಾಕ್ ಡೌನ್ ಅವಶ್ಯಕತೆ ಇಲ್ಲ, ಸರ್ಕಾರದ ‌ಮುಂದೆಯೂ ಲಾಕ್ ಡೌನ್ ಪ್ರಸ್ತಾವ ಇಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.

ನಾಳೆ ಬೆಂಗಳೂರಿಗೆ ಪ್ರತ್ಯೇಕ ಕಠಿಣ ನಿಯಮ ಜಾರಿ ಮಾಡ್ತೇವೆ. ಕೊವೀಡ್ ತಜ್ಞರು ಟಫ್ ರೂಲ್ಸ್ ಮಾಡಿ ಎಂದಿದ್ದಾರೆ, ಆದರೆ ಜನ ಸಾಮಾನ್ಯರ ಬದುಕು ನೋಡಬೇಕು, ಆ ದೃಷ್ಟಿಯಿಂದ ಟಫ್ ರೂಲ್ಸ್ ಇಂಪ್ಲಿಮೆಂಟ್ ಮಾಡೋ ಬಗ್ಗೆ ನಾಳೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ನಾನು ರಾಜ್ಯ ವಿಪತ್ತು ನಿರ್ವಹಣೆಯ ಉಪಾಧ್ಯಕ್ಷ, ಇದರ ಅಧ್ಯಕ್ಷರು ಸಿಎಂ ಯಡಿಯೂರಪ್ಪ ಆಗಿದ್ದಾರೆ, ಸಿಎಂ ಆಸ್ಪತ್ರೆಯಲ್ಲಿ ಇರುವ ಕಾರಣ, ನಾನು ಉಪಾಧ್ಯಕ್ಷನಾಗಿ ಸಭೆ ಮಾಡ್ತಿದ್ದೇನೆ.

ಯಾಕೆಂದರೆ ಕೊವೀಡ್ ನಿರ್ವಹಣೆಗೆ ಹಣ ಬಿಡುಗಡೆ ಮಾಡಬೇಕು ಅಂದರೆ ನಾನೇ ಬಿಡುಗಡೆ ಮಾಡಬೇಕು ಎಂದರು.

ಹಣ ಬಿಡುಗಡೆ ಲೆಕ್ಕದ ಬಗ್ಗೆ ಕೇಂದ್ರ ಸರ್ಕಾರಕ್ಕೆ ನಾನೇ ವರದಿ ಕೊಡಬೇಕು,ಅದಕ್ಕಾಗಿ ನನ್ನ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ ಅಷ್ಟೇ. ಸಿಎಂ ಆದೇಶದ ಮೇರೆಗೆ ನಾನು ಸಭೆ ಮಾಡ್ತಿದ್ದೇನೆ. ಇದರಲ್ಲೇನು ಯಾವುದೇ ರಾಜಕೀಯ ಇಲ್ಲ, ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ ಲಾಕ್ ಡೌನ್ ಬೇಡ ಅಂತಾ. ನಾಳೆ ಏನೇ ತೀರ್ಮಾನ ಆದ್ರೂ ಸಿಎಂ ಗಮನಕ್ಕೆ ತರ್ತೇನೆ ಎಂದು ಅಶೋಕ್ ಹೇಳಿದ್ದಾರೆ.

(ಮಾಹಿತಿ ಕೃಪೆ ಉದಯವಾಣಿ)

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ