WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, December 24, 2021

ನಿಮ್ಮ ಮನೆಯಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿದ್ದಾರಾ? ಹಾಗಾದ್ರೆ, ಮಿಸ್‌ ಮಾಡ್ದೇ ಈ ಸ್ಟೋರಿ ಓದಿ..!

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಅಂಚೆ ಇಲಾಖೆಯು ವಿವಿಧ ರೀತಿಯ ಯೋಜನೆ(Post office scheme‌)ಗಳನ್ನ ನಡೆಸುತ್ತಿದೆ. ಅದ್ರಲ್ಲಿ ನಿಮ್ಮ ಅಗತ್ಯತೆಗಳು ಮತ್ತು ಹಣಕಾಸಿನ ಗುರಿಗಳಿಗೆ ಸೂಕ್ತವಾದ ಯೋಜನೆಯನ್ನ ಆರಿಸಿ. ನಂತ್ರ ನೀವು ಯೋಜನೆಗೆ ಸೇರುವುದರಿಂದ ಪ್ರಯೋಜನ ಪಡೆಯುತ್ತೀರಿ.

ಹಾಗಾಗಿ ಯೋಜನೆಯ ಆಯ್ಕೆಯಲ್ಲಿ ನೀವು ಎಚ್ಚರಿಕೆ ವಹಿಸಬೇಕು. ಎರಡು ಬಾರಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಅಂದ್ಹಾಗೆ, ಅಂಚೆ ಕಛೇರಿಯ ಸಣ್ಣ ಉಳಿತಾಯ ಯೋಜನೆಗಳಲ್ಲಿ ಮಾಸಿಕ ಆದಾಯ ಯೋಜನೆ(Monthly Income Plan) ಕೂಡ ಒಂದು. ಇದ್ರಲ್ಲಿ ಸೇರುವುದರಿಂದ ಪ್ರತಿ ತಿಂಗಳು(Every month) ಕೈಗೆ ಹಣ ಬರುತ್ತೆ. ಮನೆಯಲ್ಲಿ ಹತ್ತು ವರ್ಷಕ್ಕಿಂತ ಮೇಲ್ಪಟ್ಟ(Over ten years of age) ಮಕ್ಕಳಿರುವವರು ಈ ಯೋಜನೆಯಡಿ ಹೂಡಿಕೆ ಮಾಡಬೋದು.

ಈ ಯೋಜನೆಯಡಿ ನಿಮ್ಮ ಮಗುವಿನ ಹೆಸರಿನಲ್ಲಿ ಖಾತೆ ತೆರೆದ್ರೆ, ಪ್ರತಿ ತಿಂಗಳು ಹಣ ಬರುತ್ತದೆ. ಅವರ ಬೋಧನಾ ಶುಲ್ಕ ಸೇರಿದಂತೆ ಇತರ ವೆಚ್ಚಗಳನ್ನ ಸರಿದೂಗಿಸಲು ಇವು ಸಾಕಾಗ್ಬೋದು. ಹಾಗಾದ್ರೆ, ನಾವು ಈಗ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯನ್ನ ತಿಳಿದುಕೊಳ್ಳೋಣಾ ಬನ್ನಿ.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಗೆ ಸೇರುವವರು ಒಂದು ವಿಷಯವನ್ನ ಗಮನದಲ್ಲಿಟ್ಟುಕೊಳ್ಳಬೇಕು. ನೀವು ಈ ಯೋಜನೆಗೆ ಸೇರಿದ್ರೆ, ನೀವು ಒಮ್ಮೆಗೆ ನಿರ್ದಿಷ್ಟ ಮೊತ್ತವನ್ನ ಹೂಡಿಕೆ ಮಾಡಬೇಕಾಗುತ್ತದೆ. ನಂತ್ರ ಪ್ರತಿ ತಿಂಗಳು ಹಣ ಬರುತ್ತದೆ. ಇದ್ರಲ್ಲಿ ಏಕ ಖಾತೆ ಮತ್ತು ಜಂಟಿ ಖಾತೆ ಎಂಬ ಎರಡು ವಿಧದ ಆಯ್ಕೆಗಳಿವೆ. ನೀವು ಇಷ್ಟಪಡುವ ಆಯ್ಕೆಯನ್ನ ಆಯ್ಕೆ ಮಾಡಬಹುದು.

ನೀವು ಒಂದೇ ಖಾತೆಯನ್ನ ಆಯ್ಕೆ ಮಾಡಿದ್ರೆ, ನೀವು 4.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಅದೇ ಜಂಟಿ ಖಾತೆಯಲ್ಲಿ 9 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ನೀವು ಯಾವ ಆಯ್ಕೆಯನ್ನ ಆರಿಸಿದ್ದೀರಿ ಎಂಬುದರ ಮೇಲೆ ಠೇವಣಿ ಮಾಡಬೇಕಾಗುತ್ತದೆ. ಕನಿಷ್ಠ ರೂ.1000 ಠೇವಣಿ ಇಡಬಹುದು. ಹತ್ತು ವರ್ಷ ಮೇಲ್ಪಟ್ಟವರು ಈ ಯೋಜನೆಗೆ ಸೇರಬಹುದು. ಇದರರ್ಥ ನೀವು ನಿಮ್ಮ ಮಗುವಿನ ಹೆಸರಿನಲ್ಲಿ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಖಾತೆಯನ್ನ ತೆರೆಯಬಹುದು.

ಈ ಯೋಜನೆಯು ಪ್ರಸ್ತುತ 6.6 ಶೇಕಡಾ ಬಡ್ಡಿಯನ್ನ ಪಡೆಯುತ್ತದೆ. ಕೇಂದ್ರ ಸರ್ಕಾರವು ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿದರವನ್ನ ಪರಿಶೀಲಿಸುತ್ತದೆ. ಅಂದ್ರೆ, ಬಡ್ಡಿದರಗಳು ಹೆಚ್ಚಾಗಬಹುದು. ಇಲ್ಲದಿದ್ದರೆ ಕಡಿಮೆಯಾಗಬಹುದು. ಕೆಲವು ಸಂದರ್ಭಗಳಲ್ಲಿ ಇದು ನಿರಂತರವಾಗಿ ಹಾಗೆಯೇ ಮುಂದುವರೆಯಬಹುದು. ಈ ಯೋಜನೆಯ ಮುಕ್ತಾಯ ಅವಧಿಯು ಐದು ವರ್ಷಗಳು. ಇನ್ನು ವಿಳಾಸದ ಪುರಾವೆ, ಗುರುತಿನ ಪುರಾವೆ, ಎರಡು ಫೋಟೋಗಳನ್ನ ತೆಗೆದುಕೊಂಡು ಯೋಜನೆಗೆ ಸೇರಿಕೊಳ್ಳಬೋದು.

ಉದಾಹರಣೆಗೆ, ನೀವು ನಿಮ್ಮ ಮಗುವಿನ ಹೆಸರಿನಲ್ಲಿ 2 ಲಕ್ಷ ರೂಪಾಯಿಗಳನ್ನ ಠೇವಣಿ ಮಾಡಿ ಮತ್ತು ಮಾಸಿಕ ಆದಾಯ ಯೋಜನೆಯಡಿ ಖಾತೆಯನ್ನ ತೆರೆದ್ರೆ, ನೀವು ಪ್ರತಿ ತಿಂಗಳು 1100 ರೂ. ವರ್ಷಕ್ಕೆ 13,200. ಐದು ವರ್ಷದ ಅವಧಿಯ ಪ್ರಕಾರ 66 ಸಾವಿರ ರೂ. ಪಡೆಯಬೋದು. ಇನ್ನು ನೀವು ಅದೇ ಜಂಟಿ ಖಾತೆಯನ್ನ ತೆರೆದು 3.5 ಲಕ್ಷ ರೂ.ಗಳನ್ನ ಠೇವಣಿ ಮಾಡಿದ್ರೆ, ನಿಮಗೆ ತಿಂಗಳಿಗೆ 1925 ರೂ. ಬರುತ್ತೆ. 4.5 ಲಕ್ಷ ಠೇವಣಿ ಇಟ್ಟರೆ ತಿಂಗಳಿಗೆ 2,500 ರೂ. ಬರುತ್ತೆ. ಇನ್ನು ಮುಕ್ತಾಯದ ನಂತರ ನಿಮ್ಮ ಹಣವು ನಿಮಗೆ ಬರುತ್ತದೆ. ಇನ್ನು ಯೋಜನೆಗೆ ಸೇರುವ ವ್ಯಕ್ತಿ ಮೃತಪಟ್ಟರೆ, ಆ ಹಣವನ್ನ ನಾಮಿನಿಗೆ ನೀಡಲಾಗುತ್ತದೆ.

(ಮಾಹಿತಿ ಕೃಪೆ Kannada News Now)


 

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ