ಬೆಳಗಾವಿ : ನಿರುದ್ಯೋಗಿ ಯುವಕ ಯುವತಿಯರಿಗೆ ಬೆಳಗಾವಿಯ ಉದ್ಯಮ್ ಬಾಗ್‍ನಲ್ಲಿ ಇರುವ ಗೋಗಟೆ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಎಂಜಿನಿಯರಿಂಗ್, ಡಿಪ್ಲೊಮಾ ಮತ್ತು ಐಟಿಐ ಪದವೀಧರರಿಗೆ ಡಿ.23ರ ಇಂದು ಉದ್ಯೋಗ ಮೇಳ ನಡೆಯಲಿದೆ . ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಎಂಜಿನಿಯರಿಂಗ್, ಡಿಪ್ಲೊಮಾ ಮತ್ತು ಐಟಿಐ ಪದವೀಧರರಿಗೆ ಡಿ.23ರಂದು ಉದ್ಯೋಗ ಮೇಳ ನಡೆಯಲಿದ್ದು, ಉದ್ಯೋಗ ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.
5,600 ಯುವಕರು ನೋಂದಣಿ ಮಾಡಿಕೊಂಡಿದ್ದಾರೆ. 78 ಕಂಪನಿ ಈ ಉದ್ಯೋಗ ಮೇಳದಲ್ಲಿ ಭಾಗಿಯಾಗಲಿವೆ ಎಂದು ಐಟಿ-ಬಿಟಿ ಖಾತೆ ಸಚಿವ ಡಾ.ಅಶ್ವತ್ಥ್ ನಾರಾಯಣ ಮಾಹಿತಿ ನೀಡಿದ್ದಾರೆ,. ಟಿಸಿಎಸ್, ವಿಪ್ರೋ, ಎಚ್ ಸಿಎಲ್, ಬೈಜಸ್ ಮತ್ತು ಟೊಯೋಟಾ ಸೇರಿದಂತೆ ಪ್ರಮುಖ ಕಂಪನಿಗಳು ಬೆಳಗಾವಿ ಜಿಲ್ಲೆಯ ಕಾಲೇಜಿನಲ್ಲಿ ಉದ್ಯೋಗ ಮೇಳದಲ್ಲಿ ಭಾಗಿಯಾಗಲಿದೆ. ಈ ಉದ್ಯೋಗ ಮೇಳವು ಡಿಸೆಂಬರ್ 23 ರಂದು ಕಾಲೇಜಿನಲ್ಲಿ ನಡೆಯಲಿದೆ. ಬಿಇ, ಬಿಟೆಕ್, ಎಂ ಟೆಕ್, ಡಿಪ್ಲೊಮಾ ಮತ್ತು ಐಟಿಐ ಪೂರ್ಣಗೊಳಿಸಿದ ಅಭ್ಯರ್ಥಿಗಳು ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.ಅವರು ಆಧಾರ್ ಕಾರ್ಡ್, ಶೈಕ್ಷಣಿಕ ಪ್ರಮಾಣಪತ್ರ, ಮಾರ್ಕ್ಸ್ ಕಾರ್ಡ್ (ಮೂಲ ಮತ್ತು ಫೋಟೋಕಾಪಿ ಎರಡೂ), ಎರಡು ಪಾಸ್ ಪೋರ್ಟ್ ಗಾತ್ರದ ಛಾಯಾಚಿತ್ರಗಳು ಜೊತೆಗೆ ಕನಿಷ್ಠ ಐದು ರೆಸ್ಯೂಮ್ ಗಳನ್ನು ಹೊಂದಿರಬೇಕು. ಯಾವುದೇ ಪ್ರವೇಶ ಶುಲ್ಕಇರುವುದಿಲ್ಲ. ಎಚ್ ಪಿ, ನಾರಾಯಣ ಗ್ರೂಪ್, ಯುಟಿಎಲ್, ಓಲಾ, ಟಾಟಾ ಕಮ್ಯುನಿಕೇಷನ್ಸ್, ಟಾಟಾ ಬಿಸಿನೆಸ್ ಹಬ್ ಲಿಮಿಟೆಡ್, ಜಾಸ್ಮಿನ್ ಇನ್ಫೋಟೆಕ್, ಮೇಳದಲ್ಲಿ ಭಾಗವಹಿಸಲಿದ್ದು, . ಡಿಸೆಂಬರ್ 23 ರಂದು ಆಯ್ಕೆಯಾದವರಿಗೆ, ಎರಡನೇ ಸುತ್ತಿನ ಸಂದರ್ಶನಗಳನ್ನು ಡಿಸೆಂಬರ್ 24 ರಂದು ನಡೆಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
(ಮಾಹಿತಿ ಕೃಪೆ kannadanewsnow)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ