ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಷನಲ್ ಟ್ರೈನಿಂಗ್, 2021 ನೇ ಸಾಲಿನ ಎನ್‌ಸಿವಿಟಿ ಐಟಿಐ ಫಲಿತಾಂಶ ಬಿಡುಗಡೆ ಮಾಡಲಾಗಿದೆ. 1, 2, 3, 4ನೇ ಸೆಮಿಸ್ಟರ್ ಪರೀಕ್ಷೆಗಳ ರಿಸಲ್ಟ್ ಅನ್ನು ಪ್ರಕಟಿಸಲಾಗಿದೆ. ಎನ್‌ಸಿವಿಟಿ ಐಟಿಐ
ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಷನಲ್ ಟ್ರೈನಿಂಗ್, 2021 ನೇ ಸಾಲಿನ ಎನ್‌ಸಿವಿಟಿ ಐಟಿಐ ಫಲಿತಾಂಶ ಬಿಡುಗಡೆ ಮಾಡಲಾಗಿದೆ. 1, 2, 3, 4ನೇ ಸೆಮಿಸ್ಟರ್ ಪರೀಕ್ಷೆಗಳ ರಿಸಲ್ಟ್ ಅನ್ನು ಪ್ರಕಟಿಸಲಾಗಿದೆ. ಎನ್‌ಸಿವಿಟಿ ಐಟಿಐ ಮೊದಲನೇ ವರ್ಷ ಮತ್ತು ಎರಡನೇ ವರ್ಷದ ಸೆಮಿಸ್ಟರ್ ಪರೀಕ್ಷೆಗಳಿಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಫೀಶಿಯಲ್ ವೆಬ್‌ಸೈಟ್ ncvtmis.gov.in ಗೆ ಭೇಟಿ ನೀಡಿ ಚೆಕ್ ಮಾಡಬಹುದು.
ಎನ್‌ಸಿವಿಟಿ ಐಟಿಐ ಫಲಿತಾಂಶ 2021 ರಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ತೋರಿಸಲಾಗುತ್ತದೆ. ಪ್ರಾವಿಷನಲ್ ಅಂಕಪಟ್ಟಿಯನ್ನು ಎನ್‌ಸಿವಿಟಿ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಡೌನ್‌ಲೋಡ್‌ಗೆ ಡೈರೆಕ್ಟ್ ಲಿಂಕ್ ಅನ್ನು ಈ ಕೆಳಗೆ ನೀಡಲಾಗಿದೆ.
ಎನ್‌ಸಿವಿಟಿ ಬೋರ್ಡ್ ಒರಿಜಿನಲ್ ಅಂಕಪಟ್ಟಿಯನ್ನು ಶೀಘ್ರದಲ್ಲೇ ವಿದ್ಯಾರ್ಥಿಗಳಿಗೆ ವಿತರಿಸಲಿದೆ. ಪ್ರಾವಿಷನಲ್ ಅಂಕಪಟ್ಟಿ ಹಾಗೂ ಫಲಿತಾಂಶಕ್ಕಾಗಿ ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿರಿ.
ಎನ್‌ಸಿವಿಟಿ ಐಟಿಐ ಫಲಿತಾಂಶ 2021: ಡೌನ್‌ಲೋಡ್ ಹೇಗೆ?
- ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಷನಲ್ ಟ್ರೈನಿಂಗ್ ವೆಬ್‌ಸೈಟ್ ncvtmis.gov.in ಗೆ ಭೇಟಿ ನೀಡಿ.
- ಅಥವಾ ಡೈರೆಕ್ಟ್ ಲಿಂಕ್ NCVT ITI Result 2021 ಕ್ಲಿಕ್ ಮಾಡಿ.
- ಓಪನ್ ಆದ ಪೇಜ್‌ನಲ್ಲಿ 'MIS ITI Result' ಸೆಕ್ಷನ್ ಆಯ್ಕೆ ಮಾಡಿ.
- ಎನ್‌ಸಿವಿಟಿ ಟ್ಯಾಬ್ ಸೆಲೆಕ್ಟ್ ಮಾಡಿ, ರೋಲ್ ನಂಬರ್ ಎಂಟರ್ ಮಾಡಿ ಸಬ್‌ಮಿಟ್ ಮಾಡಿ.
- ಫಲಿತಾಂಶ ಚೆಕ್ ಮಾಡಿ, ಡೌನ್‌ಲೋಡ್ ಮಾಡಿಕೊಳ್ಳಿ.
- ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್ ತೆಗೆದುಕೊಳ್ಳಿ.
ವಿದ್ಯಾರ್ಥಿಗಳು ರಾಜ್ಯವಾರು ಫಲಿತಾಂಶವನ್ನು ಚೆಕ್ ಮಾಡಬಹುದು. ಪ್ರತಿ ವರ್ಷವು ಹೆಚ್ಚಿನ ಸಂಖ್ಯೆಯಲ್ಲೇ ವಿದ್ಯಾರ್ಥಿಗಳು ಟೆಕ್ನಿಕಲ್ ಮತ್ತು ನಾನ್-ಟೆಕ್ನಿಕಲ್ ಟ್ರೈನಿ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯುತ್ತಾರೆ. ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ವಿದ್ಯಾರ್ಥಿಗಳು ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಷನಲ್ ಟ್ರೈನಿಂಗ್ ವೆಬ್ ncvtmis.gov.in ಗೆ ಭೇಟಿ ನೀಡಬಹುದು.
(ಮಾಹಿತಿ ಕೃಪೆ Vijaya Karnataka Web Updated: 31 May 2021, 08:24:00 PM )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ