ಕೊಣನೂರು: ಕುರಿ ಮೇಯಿಸಿಕೊಂಡು ಊರೂರು ತಿರುಗುತ್ತಾ ಜೀವನ ನಡೆಸುತ್ತಿರುವ ಕುರಿಗಾಹಿಗಳಿಗೆ ಕೊರೊನಾ ದಿಗ್ಬಂಧನವು ಸಂಕಷ್ಟ ತಂದೊಡ್ಡಿದೆ.
4 ಮಹಿಳೆಯರು, 6 ಮಕ್ಕಳು ಸೇರಿದಂತೆ 16 ಜನರಿರುವ ಚಿತ್ರದುರ್ಗ ಜಿಲ್ಲೆಯ ಮೂರು ಕುಟುಂಬಗಳು ಬಿದರೂರಿನ ಸಮೀಪ ವಾಸ್ತವ್ಯ ಹೂಡಿದ್ದು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಅವರು 1 ಸಾವಿರ ಕುರಿಗಳನ್ನು ಸಾಕಿದ್ದು ಅವುಗಳಿಗೂ ಮೇವಿನ ಕೊರತೆ ಕಾಡುತ್ತಿದೆ.
ರೈತರ ಜಮೀನಿನಲ್ಲಿ ಕುರಿಗಳನ್ನು ಬಿಟ್ಟು ಅದರಿಂದ ಬರುವ ಆದಾಯದಲ್ಲಿ ನಿತ್ಯವೂ ದಿನಸಿ ಖರೀದಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಈಗ ಕೊರೊನಾ ಭೀತಿಯಲ್ಲಿ ಗ್ರಾಮದಲ್ಲಿ ಯಾವ ರೈತರೂ ಜಮೀನಿಗೆ ಕುರಿಗಳನ್ನು ಬಿಡಿಸುತ್ತಿಲ್ಲ. ಅತ್ತ ಊರಿಗೆ ಹೋಗಲೂ ಸಾಧ್ಯವಾಗದೆ, ಇಲ್ಲಿ ಅಗತ್ಯ ದಿನಸಿಯೂ ಸಿಗದ ಕಾರಣ ಉಪವಾಸ ಅನಿವಾರ್ಯವಾಗಿದೆ.
'ಕೊರೊನಾ ಸೋಂಕಿನ ಭೀತಿಯಿಂದ ಯಾರೂ ಜಮೀನಿನಲ್ಲಿ ಕುರಿಗಳನ್ನು ತಡೆಸುತ್ತಿಲ್ಲ. ಅಲ್ಲದೇ, ಬೀಡುಬಿಟ್ಟಿರುವ ಸ್ಥಳದ ಸಮೀಪದಲ್ಲಿರುವ ಕೊಳವೆ ಬಾವಿ, ಮತ್ತಿತರೆಡೆ ನಮಗೆ ಅಡುಗೆಗೂ ನೀರನ್ನು ಕೊಡಲೂ ಸ್ಥಳೀಯರು ನಿರಾಕರಿಸುತ್ತಿದ್ದಾರೆ. ನಮ್ಮ ಕಷ್ಟವನ್ನು ಅರ್ಥಮಾಡಿಕೊಂಡು ನಮಗೆ ಪಾಸ್ ನೀಡಿದರೆ ನಮ್ಮ ಊರು ಸೇರಿಬಿಡುತ್ತೇವೆ' ಎಂದು ಅಂಗಲಾಚುತ್ತಾರೆ ಕುರಿಗಳ ಮಾಲೀಕ ಪಾಂಡಪ್ಪ.
ಕುರಿಗಾಹಿಗಳಿರುವಲ್ಲಿಗೆ ಅಧಿಕಾರಿಗಳನ್ನು ಕಳುಹಿಸಿ ಅವರ ಸಮಸ್ಯೆಯನ್ನು ಪರಿಶೀಲಿಸಲಾಗುವುದು. ಅಗತ್ಯಬಿದ್ದಲ್ಲಿ ಊರಿಗೆ ಹೋಗಲು ಪಾಸ್ ಕೊಡುವ ವ್ಯವಸ್ಥೆ ಮಾಡಲಾಗುವುದು
ವೈ.ಎಂ.ರೇಣುಕುಮಾರ್, ತಹಶೀಲ್ದಾರ್
ವೈ.ಎಂ.ರೇಣುಕುಮಾರ್, ತಹಶೀಲ್ದಾರ್
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ