ಬಸವಾಪಟ್ಟಣ: ಸಮೀಪದ ಕಾರಿಗನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಸಹಾಯಕಿಯಾಗಿ 37 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸರಸಮ್ಮ ಪ್ರಾಮಾಣಿಕ ಸೇವೆಯಿಂದ ಗ್ರಾಮಸ್ಥರ ಮನ ಗೆದ್ದಿದ್ದಾರೆ.
ಒಂದು ತಿಂಗಳ ಹಿಂದೆಯೇ ಬೆಂಗಳೂರಿನಲ್ಲಿರುವ ತಮ್ಮ 34 ವರ್ಷದ ಮಗನಿಗೆ ಕೋವಿಡ್- 19 ಪಾಸಿಟಿವ್ ಬಂದ ಬಗ್ಗೆ ತಿಳಿದಿದ್ದರೂ, ಧೈರ್ಯ ಕಳೆದುಕೊಂಡಿಲ್ಲ. ಕಾರಿಗನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಇಲ್ಲಿಯೇ ಉಳಿದು ಮಾದರಿಯಾಗಿದ್ದಾರೆ.
'ನಾನು ನಿರಂತರವಾಗಿ ಸಾರ್ವಜನಿಕರ ಆರೋಗ್ಯ ಸೇವೆಯಲ್ಲಿರುವ ದಾದಿ. ಮಗನ ಮೇಲಿನ ಮಮತೆಯಿಂದ ಆತನನ್ನು ನೋಡಲು ಹೋಗಿ ಕೊರೊನಾ ವೈರಸ್ ನನಗೂ ತಗುಲಿದರೆ, ಅದು ನಿವಾರಣೆಯಾಗುವವರೆಗೆ ನಮ್ಮ ಆಸ್ಪತ್ರೆ ಹಾಗೂ ಇಲ್ಲಿಯ ಜನತೆಯನ್ನು ಬಿಟ್ಟು ದೂರ ಇರಬೇಕಾಗುತ್ತದೆ
ಸರಸಮ್ಮನವರ ಪ್ರಾಮಾಣಿಕ ಸೇವೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್ ಮುಖಂಡ ಜಿ.ಟಿ.ಮಹಾರುದ್ರಪ್ಪ
ಶ್ಲಾಘಿಸಿದ್ದಾರೆ.
ಶ್ಲಾಘಿಸಿದ್ದಾರೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ