ಬೆಂಗಳೂರು, ಏ.25 (ಹಿ.ಸ) : ಕೊರೊನಾ ವೈರಸ್ ನಿಂದ ಬಳಲುತ್ತಿರುವ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ನೀಡುವ ಪ್ರಾಯೋಗಿಕ ಚಿಕಿತ್ಸೆಗೆ ರಾಜ್ಯ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಇಂದು ಚಾಲನೆ ನೀಡಿದ್ದಾರೆ.
ಬಿಎಂಸಿ ವಿಕ್ಟೋರಿಯಾ ಆಸ್ಪತ್ರೆ ಕೊರೊನಾ ವಿರುದ್ದ ಮೊದಲ ದಿಟ್ಟ ಹೆಜ್ಜೆಯೊಂದನ್ನು ಇಟ್ಟಿದೆ. ಮನುಕುಲಕ್ಕೆ ಕಂಟಕವಾಗಿ ಪರಿಣಮಿಸಿರುವ ವೈರಸನ್ನು ಮಣಿಸಲು ನಿಶ್ಚಯಿಸಿದ್ದೇವೆ. ಇದರಂತೆ ಸೋಂಕಿಗೊಳಗಾಗಿ ಆರೋಗ್ಯ ಸ್ಥಿತಿ ಗಂಭೀರವಾಗಿರುವ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಪ್ರಯೋಗವನ್ನು ಆರಂಭಿಸಲಾಗುತ್ತಿದೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಬಿಎಂಸಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ವೈದ್ಯರು ಹಾಗೂ ಡಾ.ಯುಎಸ್ ವಿಶಾಲ್ ರಾವ್ ನೇತೃತ್ವದ ತಂಡ ಉತ್ತಮ ಯಶಸ್ಸುಗಳಿಸಲಿ ಎಂದು ನಾನು ಶುಭ ಹಾರೈಸುತ್ತೇನೆ. ಕೊರೊನಾ ವಿರುದ್ಧದ ಹೋರಾಟಕ್ಕೆ ಈ ಪ್ರಯೋಗ ಪ್ರೇರಣೆಯಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ 474 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದರಲ್ಲಿ ಈಗಾಗಲೇ 152 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಕೊರೊನಾ ವೈರಸ್ ಗೆ ಈವರೆಗೂ 18 ಮಂದಿ ಬಲಿಯಾಗಿದ್ದಾರೆ.
ಹಿಂದುಸ್ತಾನ ಸಮಾಚಾರ/ಎಂ.ಎಸ್ /ಯ.ಮ
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ