WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Thursday, April 23, 2020

ಶುಭ್ರ ಆಕಾಶ; ಬಾಹ್ಯಾಕಾಶ ನಿಲ್ದಾಣ ಬರಿಗಣ್ಣಿಗೆ ಗೋಚರ

ಶಿರಸಿ: ನಾಸಾ ನಿಯಂತ್ರಿತ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಇಂಟರ್‌ನ್ಯಾಷನಲ್‌ ಸ್ಪೇಸ್ ಸ್ಟೇಷನ್- ಐಎಸ್‌ಎಸ್) ಜಗತ್ತಿನಾದ್ಯಂತ ಬರಿಗಣ್ಣಿಗೆ ಗೋಚರಿಸುತ್ತಿದೆ. ಬಾಹ್ಯಾಕಾಶ ವಿಜ್ಞಾನದ ಆಸಕ್ತರಿಂದ ಮಾಹಿತಿ ಪಡೆದು, ನಿಲ್ದಾಣವನ್ನು ನೋಡಿದ ಹಲವರು ಬೆರಗುಗೊಂಡಿದ್ದಾರೆ.
ಕೋವಿಡ್ 19 ಕಾರಣಕ್ಕೆ ಜಗತ್ತಿನ ಬಹಳಷ್ಟು ದೇಶಗಳಲ್ಲಿ ಉದ್ದಿಮೆ ಆಧಾರಿತ ಚಟುವಟಿಕೆ, ವಾಹನ ಸಂಚಾರ ಕಡಿಮೆಯಿರುವ ಕಾರಣ ಮಾಲಿನ್ಯ ಕಡಿಮೆಯಾಗಿದೆ. ಜತೆಗೆ, ಆಕಾಶವೂ ಶುಭ್ರವಾಗಿರುವುದರಿಂದ ಐಎಸ್‌ಎಸ್‌ ನೋಡುವ ಸದವಕಾಶ ಒದಗಿಬಂದಿದೆ.
ಏ.12ರ ಸಂಜೆ 7.15ಕ್ಕೆ, ಏ.17 ಸಂಜೆ 5.15ಕ್ಕೆ ಹಾಗೂ ಏ.21ರ ಬೆಳಗಿನ ಜಾವ 5.36ಕ್ಕೆ ಆಗಸದಲ್ಲಿ ಐಎಸ್‌ಎಸ್‌ನ ಚಲನವನ್ನು ಕಂಡಿರುವ ಜೀವವೈವಿಧ್ಯ ವಿಜ್ಞಾನಿ ಗದುಗಿನ ಮಂಜುನಾಥ ನಾಯಕ ಅವರು ಈ ವಿಷಯವನ್ನು 'ಪ್ರಜಾವಾಣಿ' ಜೊತೆ ಹಂಚಿಕೊಂಡಿದ್ದಾರೆ.
http://issdetector.com ಈ ಆಯಪ್ ಮೂಲಕ ಈ ಬಾಹ್ಯಾಕಾಶ ನಿಲ್ದಾಣವು ಯಾವ ಪಥದಲ್ಲಿ ಚಲಿಸುತ್ತದೆ, ಭೂಮಿಗೆ ಯಾವಾಗ ಸಮೀಪ ಬರುತ್ತದೆ ಎಂಬುದರ ಮಾಹಿತಿ ಪಡೆಯಬಹುದು.
ಇದರಲ್ಲಿ ಪ್ರಕಟಿಸಿದ ವೇಳಾಪಟ್ಟಿ ಹಾಗೂ ಸ್ನೇಹಿತ ಸುನೀಲ್‌ಕುಮಾರ್ ಮರಳಕುಂಟೆ ಮತ್ತು ಇಸ್ರೊ ತಂತ್ರಜ್ಞ ಕಾಂತರಾಜು ಅವರು ನೀಡಿರುವ ಮಾಹಿತಿ ಬೆನ್ನತ್ತಿದಾಗ, ಗದಗದಲ್ಲಿ ಸಹ ಐಎಸ್‌ಎಸ್ ನೋಡಲು ಸಾಧ್ಯವಾಯಿತು. ಅನೇಕ ವಿದ್ಯಾರ್ಥಿಗಳಿಗೂ ಈ ಮಾಹಿತಿ ಒದಗಿಸಿದೆ. ಶುಕ್ರ ಗ್ರಹದ ಹಾಗೆ ಇದು ಹೊಳೆಯುತ್ತದೆ. ವಿವಿಧ ದೇಶಗಳಲ್ಲಿ ಇದು ಗೋಚರಿಸುವ ಸಮಯ ಬೇರೆಯಾಗುತ್ತದೆ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ, ನಿಗದಿತ ಸಮಯದಲ್ಲಿ 2ರಿಂದ 4 ನಿಮಿಷ ವ್ಯತ್ಯಾಸವಾಗಬಹುದು' ಎಂದು ಅವರು ತಿಳಿಸಿದರು.
ಏನಿದು ಐಎಸ್‌ಎಸ್‌?:
1998ರಲ್ಲಿ ಉಡಾವಣೆ ಮಾಡಿದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು 2000ದಲ್ಲಿ ಕಾರ್ಯ ಪ್ರಾರಂಭಿಸಿದೆ. ಇದು ಮಾನವ ನಿರ್ಮಿತ ಅತಿದೊಡ್ಡ ಬಾಹ್ಯಾಕಾಶ ಪ್ರಯೋಗಾಲಯ. ಇದು ಭೂಮಿಯ ಹೊರ ಮೇಲ್ಮೈನಿಂದ ಸುಮಾರು 250 ಮೈಲು ಎತ್ತರದಲ್ಲಿ ಪ್ರತಿ ಗಂಟೆಗೆ 17,500 ಮೈಲು ವೇಗದಲ್ಲಿ ತನ್ನ ಪಥದಲ್ಲಿ ಚಲಿಸುತ್ತಿರುತ್ತದೆ. ಇದರಲ್ಲಿ ಜೀವ ವಿಜ್ಞಾನ, ಭೌತ ವಿಜ್ಞಾನ, ಖಗೋಳ ವಿಜ್ಞಾನಗಳ ವಿಜ್ಞಾನಿಗಳು, ಹವಾಮಾನ ಪರಿಣಿತರು ಸೇರಿ ಆರರಿಂದ ಒಂಬತ್ತು ಜನರು ಕಾರ್ಯನಿರ್ವಹಿಸುತ್ತಾರೆ ಎಂದು ಅವರು ವಿವರಿಸಿದರು.
****
ಭೌಗೋಳಿಕ ಪ್ರದೇಶ ಮತ್ತು ಆಕಾಶದ ಹವಾಮಾನದ ಸ್ಥಿತಿಗೆ ಅನುಗುಣವಾಗಿ ಐಎಸ್‌ಎಸ್‌ ಗೋಚರಿಸುತ್ತದೆ. ಮೋಡವಿದ್ದರೆ ಕಾಣಿಸುವುದಿಲ್ಲ
-ಮಂಜುನಾಥ ನಾಯಕ ಜೀವವೈವಿಧ್ಯ ವಿಜ್ಞಾನಿ

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ