ಹುಬ್ಬಳ್ಳಿ: ಲಾಕ್‌ಡೌನ್ ಅವಧಿಯಲ್ಲಿ ಜನರಿಗೆ ಅನುಕೂಲವಾಗುವಂತೆ ತುರ್ತು ಪರಿಸ್ಥಿತಿ ಅಗತ್ಯವಿರುವವರಿಗೆ ಜಿಲ್ಲಾಡಳಿತ ಪಾಸ್‌ಗಳನ್ನು ನೀಡುತ್ತಿದೆ. ಆದರೆ, ತಂದೆಯ ಅಂತ್ಯಸಂಸ್ಕಾರದ ಕಥೆ ಕಟ್ಟಿ ರಾಜಕೀಯ ಪುಡಾರಿಯೊಬ್ಬ ಪಾಸ್ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ
ಬೆಂಗಳೂರಿನಲ್ಲಿ ಸಾವಿಗೀಡಾಗಿರುವ ತಂದೆಯ ಅಂತ್ಯಸಂಸ್ಕಾರಕ್ಕೆ ತೆರಳುತ್ತಿರುವುದಾಗಿ ಸುಳ್ಳು ಹೇಳಿ ಹುಬ್ಬಳ್ಳಿಯ ಸ್ಥಳೀಯ ರಾಜಕೀಯ ಮುಖಂಡ ಸೋಮಲಿಂಗ ಯಾಲಿಗರ್ ಜಿಲ್ಲಾಡಳಿತದಿಂದ ಪಾಸ್ ಪಡೆದು ದುರ್ಬಳಕೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿ ಹುಬ್ಬಳ್ಳಿ ನಗರದಾದ್ಯಂತ ಹಬ್ಬಿದೆ.
ಲಾಕ್ ಡೌನ್ ಅವಧಿ ಮುಗಿಯುವವರೆಗೂ ಜಿಲ್ಲೆಗೆ ವಾಪಾಸ್ ಬರಬಾರದು ಎಂದು ಷರತ್ತಿನೊಂದಿಗೆ ಜಿಲ್ಲಾಡಳಿತ ಪಾಸ್ ನೀಡಿದೆ. ಎಲ್ಲಾ ಷರತ್ತುಗಳನ್ನು ಆತ ಒಪ್ಪಿಕೊಂಡಿದ್ದಾನೆ. ಆದರೆ, ಪಾಲಿಸಿಲ್ಲ
ಸೋಮಲಿಂಗ ಯಾಲಿಗರ್ ಅವರ ಸ್ನೇಹಿತರೊಬ್ಬರು ಬೆಂಗಳೂರಿಗೆ ಹೋಗಬೇಕಿತ್ತು. ತನ್ನ ಸ್ನೇಹಿತನನ್ನು ಡ್ರಾಪ್ ಮಾಡಲು ಕನ್ನಡ ಪರ ಸಂಘಟನೆಯೊಂದರ ಅಧ್ಯಕ್ಷನಾಗಿರುವ ಸೋಮಲಿಂಗ ಯಾಲಿಗರ್ ಪಾಸ್ ಪಡೆದುಕೊಂಡಿದ್ದಾನೆ. ತನ್ನ ಸ್ನೇಹಿತನನ್ನು ಡ್ರಾಪ್ ಮಾಡಿದ ನಂತರ ಆದೇಶವನ್ನು ಉಲ್ಲಂಘಿಸಿದ್ದು, ಹುಬ್ಬಳ್ಳಿಗೆ ಬಂದಿದ್ದಾನೆ. ರಾಷ್ಟ್ರೀಯ ಹೆದ್ದಾರಿ-4ರಲ್ಲಿ ದಾವಣಗೆರೆ ಬಳಿ ಪೊಲೀಸರು ಆತನ ಕಾರನ್ನು ತಡೆದಿದ್ದಾರೆ. ಆದರೆ, ಅಂತ್ಯಸಂಸ್ಕಾರದ ಕಥೆ ಕಟ್ಟಿ ಹುಬ್ಬಳ್ಳಿಗೆ ವಾಪಾಸ್ ಆಗಿದ್ದಾನೆ.
ಪಾಸ್ ದುರ್ಬಳಕೆ ಮಾಡಿಕೊಂಡಿರುವ ಸುದ್ದಿ ನಗರದಾದ್ಯಂತ ಹಬ್ಬಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದಾಗ್ಯೂ, ಈವರೆಗೂ ಪ್ರಕರಣ ದಾಖಲಾಗಿಲ್ಲ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ