ನವದೆಹಲಿ : ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಭಾರತವು ಹತ್ತು ಹಲವು ಬದಲಾವಣೆಗಳನ್ನು ಜಾರಿಗೆ ತಂದಿದೆ. ಹೀಗಾಗಿ ಭಾರತದಲ್ಲಿ ಹೂಡಿಕೆ ಮಾಡಲು ಚೀನಾಗೆ ಕಡಿವಾಣ ಬಿದ್ದಿದೆ.
ಚೀನಾದಲ್ಲಿಯೇ ಮೊದಲು ಕಾಣಿಸಿಕೊಂಡಿದ್ದ ಕೊರೊನಾದ ಹಿನ್ನೆಲೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ನಿಯಮಗಳನ್ನು ಬದಲಾವಣೆ ಮಾಡಿದೆ. ಇದರಿಂದಾಗಿ ಭಾರತದ ಜೊತೆಗೆ ಭೂಗಡಿ ಹೊಂದಿರುವ ರಾಷ್ಟ್ರಗಳು ಇಲ್ಲಿ ಹೂಡಿಕೆ ಮಾಡುವುದಕ್ಕೂ ಮುನ್ನ ಭಾರತ ಸರ್ಕಾರ ಅನುಮತಿ ಪಡೆಯಬೇಕಾಗುತ್ತದೆ. ಕಳೆದ ತಿಂಗಳು ಚೀನಾ ಹೆಚ್ ಡಿಎಫ್ ಸಿ ಬ್ಯಾಂಕ್ ನ ಷೇರುಗಳನ್ನು ಖರೀದಿಸಿದ ಬೆನ್ನಲ್ಲಿಯೇ ಕೇಂದ್ರ ಸರ್ಕಾರ ವಿದೇಶಿ ನೇರ ಬಂಡವಾಳ ಹೂಡಿಕೆಯ ನಿಯಮಗಳಲ್ಲಿ ಬದಲಾವಣೆ ತಂದಿದೆ.
ಈ ನಿರ್ಧಾರದಿಂದ ಮುಂದಿನ ದಿನಗಳಲ್ಲಿ ಭಾರತ - ಚೀನಾ ನಡುವಿನ ವ್ಯಾಪಾರ ಸಂಬಂಧಗಳಲ್ಲಿ ಗಮನಾರ್ಹ ಬದಲಾವಣೆಗಳಾಗಲಿದೆ ಎನ್ನಲಾಗುತ್ತಿದೆ.
ಭಾರತದಲ್ಲಿ ಸುಮಾರು 26 ಬಿಲಿಯನ್ ಡಾಲರ್ ಮೊತ್ತದ ಹೂಡಿಕೆಯನ್ನು ಚೀನಾ ಮಾಡಿದೆ. ಇತ್ತೀಚಿನ ದಿನಗಳಲ್ಲಿ 30 ಭಾರತೀಯ ಸ್ಟಾರ್ಟ್ ಅಪ್ ಗಳಲ್ಲಿ ಚೀನಾ 4 ಬಿಲಿಯನ್ ಡಾಲರ್ ಹಣ ತೊಡಗಿಸಿತ್ತು. ಟಿಕ್ ಟಾಕ್, ಹೆಲೋ ಸೇರಿದಂತೆ ಭಾರತೀಯ ಗ್ರಾಹಕರಿರುವ ಅನೇಕ ಆಪ್ ಗಳ ಮೂಲಕ ಚೀನಾ ಮಿಲಿಯನ್ ಗಟ್ಟಲೆ ಹಣ ಸಂಪಾದನೆ ಮಾಡುತ್ತಿದೆ. ಆದರೆ, ಪ್ರಧಾನಿ ಮೋದಿ ಅವರು ಇದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕುವರೇ ಕಾಯ್ದು ನೋಡಬೇಕಿದೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ