WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Sunday, April 19, 2020

ನಾಳೆಯಿಂದ ರಾಜ್ಯದಲ್ಲಿ ಏನಿರುತ್ತೆ ಏನಿರಲ್ಲ..? ಇಲ್ಲಿದೆ ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಬೆಂಗಳೂರು : ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆ ಸಂಬಂಧ ಸರ್ಕಾರದಲ್ಲೇ ಕೆಲ ಗೊಂದಲ ಏರ್ಪಟ್ಟಿತ್ತು. ಅದರಂತೆ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಲು ನಿರ್ಧರಿಸಿತ್ತು. ಬಳಿಕ ಸಾರ್ವಜನಿಕರು ಹಾಗೂ ವೈದ್ಯರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆ ಸರ್ಕಾರ ಸಡಿಲಿಕೆಯಿಂದ ಹಿಂದೆ ಸರಿಯಿತು.
ಐಟಿ, ಬಿಟಿ ಸಂಸ್ಥೆಗಳಲ್ಲಿ 33% ಸಿಬ್ಬಂದಿ ಕಾರ್ಯನಿರ್ವಹಿಸುವ ಅನುಮತಿಯನ್ನು ವಾಪಸ್​ ಪಡೆದು, ಐಟಿ ಬಿಟಿಯಲ್ಲಿನ ಅಗತ್ಯ ಸೇವೆಗಳನ್ನು ಮಾತ್ರ ಮುಂದುವರೆಸಲು ಸೂಚಿಸಿತು.
ಯಾವ ಸೇವೆ ಇರುವುದಿಲ್ಲ?
1) ಪಾಸ್ ರಹಿತ ವಾಹನ ಓಡಾಟಕ್ಕೆ ನಿಷೇಧ
2) ದ್ವಿಚಕ್ರ ವಾಹನ ಓಡಾಟಕ್ಕೆ ಅನುಮತಿ ಇಲ್ಲ
3) ಮದ್ಯ ಮಾರಾಟ ಮೇ 3ರವರೆಗೆ ನಿಷೇಧ
4) ಐಟಿ,ಬಿಟಿ ಸಂಸ್ಥೆಗಳ ಕಾರ್ಯನಿರ್ವಹಣೆ
5)ಬಸ್, ಮೆಟ್ರೋ, ಆಟೋ, ಕ್ಯಾಬ್ ಸೇವೆ ನಿಷೇಧ
6) ಚಿತ್ರಮಂದಿರ, ಮಾಲ್​ಗಳು, ಸಮಾರಂಭ ನಿಷೇಧ
7) ಧಾರ್ಮಿಕ ಕೇಂದ್ರ, ಸಾಮೂಹಿಕ ಪ್ರಾರ್ಥನೆ ತೆರೆಯುವುದಿಲ್ಲ
8) ಅಗತ್ಯ ಸೇವೆ ಬಿಟ್ಟು ಇತರೆ ಅಂಗಡಿಗಳು ಕ್ಲೋಸ್
9) ಕಂಟೈನ್​​ನ್ಮೆಂಟ್ ಪ್ರದೇಶಗಳಲ್ಲಿ ಫುಲ್ ಸೀಲ್ ​ಡೌನ್
10) ಅಂತರ್​ ಜಿಲ್ಲೆ, ರಾಜ್ಯ ಸಂಚಾರಕ್ಕೆ ನಿಷೇಧ
# ಏನೆಲ್ಲಾ ಇರಲಿದೆ..?
1) ಅಗತ್ಯ ಸೇವೆಗಳ ಪೂರೈಕೆಯಲ್ಲಿ ವ್ಯತ್ಯಯ ಇಲ್ಲ.
2) ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ 33% ಸಿಬ್ಬಂದಿ ಕಾರ್ಯನಿರ್ವಹಿಸಲು ಅವಕಾಶ.
3) ಆಯ್ದ ಕೈಗಾರಿಕೆಗಳು 33% ಸಿಬ್ಬಂದಿಯೊಂದಿಗೆ ಕಾರ್ಯ ಮಾಡಲು ಅವಕಾಶ.
4) ಕಟ್ಟಡ ಕಾಮಗಾರಿ, ರಸ್ತೆ ಕಾಮಗಾರಿಗೆ ಅನುಮತಿ.
5) ಕಾರ್ಯನಿರ್ವಹಣೆ ವೇಳೆ ಮಾಸ್ಕ್ ಕಡ್ಡಾಯ.
6) ಎಲ್ಲಾ ಕೃಷಿ ಚಟುವಟಿಕೆಗಳು ನಿರಾಳ.
7) ಕೃಷಿ ಮಾರುಕಟ್ಟೆಗಳು, ಸಗಟು ಮಾರುಕಟ್ಟೆ ಆರಂಭ.
8) ಬ್ಯಾಂಕ್, ಎಟಿಎಂಗಳು ಆರಂಭ.
9) ಅಗತ್ಯ ಐಟಿ,ಬಿಟಿ ಕ್ಷೇತ್ರದ ಸೇವೆಗಳು ಲಭ್ಯ.
10) ಅಂತರ್​ ರಾಜ್ಯ, ಜಿಲ್ಲೆ ಗೂಡ್ಸ್ ಲಾರಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ