WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, April 17, 2020

ಒಂದೇ ದಿನ 36 ಕೊರೊನಾ ಪ್ರಕರಣ: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 315ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪ್ರಕರಣ ಪತ್ತೆಯಾದ ಬಳಿಕ ನಿಧಾನ ಗತಿಯಲ್ಲಿ ಏರಿಕೆ ಕಾಣುತ್ತಿದ್ದ ಸೋಂಕಿತರ ಸಂಖ್ಯೆ ನಾಲ್ಕು ದಿನಗಳಿಂದೀಚೆಗೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಗುರುವಾರ ಒಂದೇ ದಿನ 36 ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದು ಆತಂಕಕ್ಕೂ ಕಾರಣವಾಗಿದೆ.
ಮೊದಲ ಪ್ರಕರಣ ಪತ್ತೆಯಾಗಿ ಒಂದೂವರೆ ತಿಂಗಳು ಕಳೆಯುವಷ್ಟರಲ್ಲೇ ಸೋಂಕಿತರ ಸಂಖ್ಯೆ 315ಕ್ಕೆ ತಲುಪಿದೆ. ಎರಡು ದಿನಗಳ ಹಿಂದೆ ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ ಏರುಗತಿಯಲ್ಲಿತ್ತು. ಗುರುವಾರ ಈ ಹೆಚ್ಚಳದ ಪ್ರಮಾಣ ಬೆಳಗಾವಿ, ವಿಜಯಪುರದತ್ತ ತಿರುಗಿದೆ.
ಈವರೆಗೆ ರಾಜ್ಯದಲ್ಲಿ ಒಂದು ದಿನ ವರದಿಯಾದ ಗರಿಷ್ಠ ಪ್ರಕರಣಗಳ ಸಂಖ್ಯೆ 19. ಆದರೆ, ಇದರ ಒಂದು ಪಟ್ಟಿನಷ್ಟು ಪ್ರಕರಣಗಳು ಒಂದೇ ದಿನ ವರದಿಯಾಗಿದೆ. ಸೋಂಕು ಸಮುದಾಯಕ್ಕೆ ಹರಡಿತೆ ಎಂಬ ಶಂಕೆಯೂ ಅಧಿಕಾರಿಗಳ ವಲಯದಲ್ಲಿ ಮೂಡಲಾರಂಭಿಸಿದೆ.
ಮೃತರ ಸಂಖ್ಯೆ 13
ಬೆಂಗಳೂರಿನಲ್ಲಿ 66 ವರ್ಷದ ವೃದ್ಧ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಇದರಿಂದಾಗಿ ಈವರೆಗೆ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿದೆ. 195ನೇ ರೋಗಿಯಾಗಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಮಣಿಪುರಕ್ಕೆ ಪ್ರಯಾಣ ಮಾಡಿದ್ದ ಇತಿಹಾಸ ಹೊಂದಿದ್ದಾರೆ. ಏ.10ರಿಂದ ತೀವ್ರನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿತ್ತು. ಇವರ ಸಾವಿನಿಂದ ಬೆಂಗಳೂರಿನಲ್ಲಿ ಮರಣ ಹೊಂದಿದವರ ಸಂಖ್ಯೆ 3ಕ್ಕೆ ತಲುಪಿದೆ.
ಹೊಸ ಪ್ರಕರಣ ಎಲ್ಲಿ
ಹೊಸದಾಗಿ ಬೆಳಗಾವಿಯಲ್ಲಿ 17, ವಿಜಯಪುರದಲ್ಲಿ 7, ಬೆಂಗಳೂರಿನಲ್ಲಿ 5, ಮೈಸೂರಿನಲ್ಲಿ 3, ಕಲಬುರ್ಗಿಯಲ್ಲಿ 3 ಹಾಗೂ ಗದಗದಲ್ಲಿ 1 ಪ್ರಕರಣ ವರದಿಯಾಗಿದೆ.
'ಮಹಾರಾಷ್ಟ್ರದ ಕೋವಿಡ್‌-19 ರೋಗಿಯೊಂದಿಗೆ ನೇರ ಸಂಪರ್ಕ ಹೊಂದಿದ್ದ ವಿಜಯಪುರದ ಎರಡು ಕುಟುಂಬಗಳ 17 ಮಂದಿ ಈವರೆಗೆ ಸೋಂಕಿತರಾಗಿದ್ದಾರೆ. ಇವರೊಂದಿಗೆ ನೇರ ಸಂಪರ್ಕ ಹೊಂದಿದ್ದ 270 ವ್ಯಕ್ತಿಗಳ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಅವರು ವಾಸವಿದ್ದ ಜಾಗವನ್ನು ಸೀಲ್ ಮಾಡಲಾಗಿದೆ. ಅವರ ಮನೆಗಳಿಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ಒದಗಿಸಲು ವ್ಯವಸ್ಥೆ ಮಾಡಿದ್ದೇವೆ ' ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಪರೀಕ್ಷೆ ಹೆಚ್ಚಳ
'ರಾಜ್ಯದಲ್ಲಿ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಏ.13 ರಂದು 766 ಮಂದಿ, ಏ.14ಕ್ಕೆ 1,090 ಮಂದಿ, ಏ.15ಕ್ಕೆ 1,376 ಮಂದಿ ಹಾಗೂ ಏ.16ಕ್ಕೆ 1,240 ಮಂದಿಯ ರಕ್ತ ಹಾಗೂ ಗಂಟಲಿನ ದ್ರವವನ್ನು ಪರೀಕ್ಷೆ ಮಾಡಲಾಗಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ವರದಿಯಾದ ಪ್ರಕರಣಗಳಲ್ಲಿ 9 ಮಂದಿ ಕೇರಳ ಹಾಗೂ 5 ಮಂದಿ ಆಂಧ್ರ ಪ್ರದೇಶದವರು' ಎಂದು ಸಚಿವರು ಮಾಹಿತಿ ನೀಡಿದರು.
94 ಮಂದಿಗೆ ದೆಹಲಿ ನಂಟು
ದೆಹಲಿಯ ನಿಜಾಮುದ್ದೀನ್ ಪ್ರದೇಶಕ್ಕೆ ಭೇಟಿ ನೀಡಿದವರಲ್ಲಿ ಈಗಾಗಲೇ 46 ಮಂದಿಗೆ ಸೋಂಕು ದೃಢಪಟ್ಟಿದೆ. ಇವರೊಂದಿಗೆ ನೇರ ಸಂಪರ್ಕ ಹೊಂದಿದ್ದ 48 ಮಂದಿಗೂ ಸೋಂಕು ಹರಡಿದೆ. ಅದೇ ರೀತಿ, ಮೈಸೂರಿನಲ್ಲಿ ವರದಿಯಾದ 61 ಪ್ರಕರಣಲ್ಲಿ 49 ಮಂದಿ ನಂಜನಗೂಡಿನ ಫಾರ್ಮಾ ಕಂಪನಿಯ ಸಿಬ್ಬಂದಿ ಹಾಗೂ ಅವರೊಂದಿಗೆ ನೇರ ಸಂಪರ್ಕ ಹೊಂದಿರುವವರಾಗಿದ್ದಾರೆ.
6.5 ಲಕ್ಷ ಪರೀಕ್ಷಾ ಕಿಟ್‌ ಚೀನಾದಿಂದ ಆಮದು
ಕೊರೊನಾ ಸೋಂಕು ಪರೀಕ್ಷೆಯ 6.5 ಲಕ್ಷ ಕಿಟ್‌ಗಳು ಚೀನಾದಿಂದ ಭಾರತಕ್ಕೆ ಗುರುವಾರ ಬಂದಿವೆ. ಇದರಲ್ಲಿ ಐದು ಲಕ್ಷ ರ‍್ಯಾಪಿಡ್‌ ಆಯಂಟಿಬಾಡಿ ಪರೀಕ್ಷಾ ಕಿಟ್‌ಗಳು ಮತ್ತು ಒಂದೂವರೆ ಲಕ್ಷ ಆರ್‌ಎನ್‌ಎ ಕಿಟ್‌ಗಳು. ಕಳೆದ ವಾರದಲ್ಲಿ ಸೋಂಕು ಪರೀಕ್ಷೆ ಪ್ರಮಾಣವು ಗಣನೀಯವಾಗಿ ಏರಿಕೆಯಾಗಿತ್ತು. ಬುಧವಾರ 30,043 ಪರೀಕ್ಷೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಪರೀಕ್ಷೆಯ ಸಂಖ್ಯೆಯು ಇನ್ನಷ್ಟು ಹೆಚ್ಚಲಿದೆ.
ಆಯಂಟಿಬಾಡಿ ಕಿಟ್‌ಗಳನ್ನು ಹಾಟ್‌ಸ್ಪಾಟ್‌ಗಳಲ್ಲಿನ ಜನರ ಪರೀಕ್ಷೆಗೆ ಬಳಸಲಾಗುವುದು. ಆರಂಭಿಕ ಸೋಂಕು ಪತ್ತೆಗೆ ಇವುಗಳನ್ನು ಬಳಸಲಾಗುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ ವಿಜ್ಞಾನಿ ರಾಮನ್‌ ಗಂಗಾಖೇಡ್ಕರ್‌ ಹೇಳಿದ್ದಾರೆ. ಹಾಟ್‌ಸ್ಪಾಟ್‌ಗಳಲ್ಲಿ ಸೋಂಕು ಪ್ರಸರಣ ಯಾವ ರೀತಿಯಲ್ಲಿದೆ ಎಂಬುದನ್ನು ಗುರುತಿಸಲು ಆಯಂಟಿಬಾಡಿ ಪರೀಕ್ಷೆ ನೆರವಾಗುತ್ತದೆ.
ಕೋವಿಡ್‌ನಿಂದ ತತ್ತರಿಸಿದ್ದ ಕಾಸರಗೋಡು ಜಿಲ್ಲೆಯಲ್ಲಿ ಬಾಧಿತರಾಗಿದ್ದ 24 ಮಂದಿ ಗುಣಮುಖರಾಗಿದ್ದಾರೆ. ಕೇರಳದಲ್ಲಿ ಒಟ್ಟು 27 ಮಂದಿ ಗುರುವಾರ ರೋಗಮುಕ್ತರಾಗಿ ಮನೆಗೆ ಮರಳಿದ್ದಾರೆ. ಈಗ ರಾಜ್ಯದಲ್ಲಿ ಸೋಂಕು ಇರುವ ವ್ಯಕ್ತಿಗಳ ಸಂಖ್ಯೆ 147ಕ್ಕೆ ಇಳಿದಿದೆ. ಇವರ ಪೈಕಿ 61 ಮಂದಿ ಕಾಸರಗೋಡು ಜಿಲ್ಲೆಯವರು. ನೆರೆಯ ಕಣ್ಣೂರು ಜಿಲ್ಲೆಯಲ್ಲಿ 45 ಮಂದಿ ಸೋಂಕಿತರಿದ್ದಾರೆ. ಕೇರಳದಲ್ಲಿ ಒಟ್ಟು 394 ಮಂದಿಗೆ ಸೋಂಕು ತಗಲಿತ್ತು. 245 ಮಂದಿ ಗುಣಮುಖರಾಗಿದ್ದಾರೆ.
ಸರಕು ಹೊತ್ತು ಅಲ್ಲಲ್ಲಿ ನಿಂತಿದ್ದ ಲಾರಿಗಳು, ಎಲ್ಲ ರೀತಿಯ ಸರಕುಗಳ ಸಾಗಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ಕೊಟ್ಟ ಬಳಿಕ ಸಂಚಾರ ಆರಂಭಿಸಿವೆ ಎಂದು ಅಖಿಲ ಭಾರತ ಸಾರಿಗೆ ಕಾಂಗ್ರೆಸ್‌ (ಎಐಎಂಟಿಸಿ) ಹೇಳಿದೆ. ಆದರೆ, ಸರಕುಗಳನ್ನು ಲಾರಿಗೆ ಹೇರುವ ಮತ್ತು ಲಾರಿಯಿಂದ ಇಳಿಸುವ ನೌಕರರ ಕೊರತೆ ಎದುರಾಗಿದೆ. ಲಾಕ್‌ಡೌನ್‌ನಿಂದಾಗಿ ತಮ್ಮ ಊರುಗಳಿಗೆ ಹೋಗಿರುವ ಚಾಲಕರು ಮತ್ತು ಇತರ ಸಿಬ್ಬಂದಿಯನ್ನು ಕರೆತರುವುದು ಕೂಡ ಕಷ್ಟವಾಗಿದೆ. ಹಾಗಾಗಿ, ಸರಕು ಸಾಗಾಟ ಹಳಿಗೆ ಬರಲು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಐಎಂಟಿಸಿ ಹೇಳಿದೆ.
ಅಮೆರಿಕದಲ್ಲಿ ಸಾವಿನ ಸಂಖ್ಯೆ 31 ಸಾವಿರಕ್ಕೆ ಗುರುವಾರ ಏರಿದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ಜನರು ಕೊರೊನಾಕ್ಕೆ ಬಲಿಯಾದ ದೇಶ ಅಮೆರಿಕ. ಇಟಲಿಯಲ್ಲಿ ಈವರೆಗೆ 22,170, ಸ್ಪೇನ್‌ನಲ್ಲಿ 19,130 ಮತ್ತು ಫ್ರಾನ್ಸ್‌ನಲ್ಲಿ 17,188 ಜನರು ಮೃತಪಟ್ಟಿದ್ದಾರೆ.
ಚೀನಾ ಮತ್ತು ಇತರ ರಾಷ್ಟ್ರಗಳಲ್ಲಿ ನವೆಂಬರ್‌ನಲ್ಲಿ ಎರಡನೇ ಬಾರಿ ಕೊರೊನಾ ವೈರಸ್‌ ಹಬ್ಬುವ ಸಾಧ್ಯತೆ ಇದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡಿದ್ದಾರೆ

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ