ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಫಲಾನುಭವಿಗಳಿಗೆ ನೆಮ್ಮದಿ ಸುದ್ದಿ ನೀಡಿದೆ. ಉಜ್ವಲಾ ಯೋಜನೆಯ ಫಲಾನುಭವಿಗಳಿಗಾಗಿ ಮೋದಿ ಸರ್ಕಾರ ಮೂರು ತಿಂಗಳ ಉಚಿತ ಅನಿಲ ನೀಡುವುದಾಗಿ ಘೋಷಿಸಿದೆ.
ಈ ಯೋಜನೆ ಏಪ್ರಿಲ್ 1 ರಿಂದ ಜೂನ್ 30 ರವರೆಗೆ ಜಾರಿಯಲ್ಲಿರುತ್ತದೆ. ಅಧಿಕೃತ ಹೇಳಿಕೆಯ ಪ್ರಕಾರ ಇಲ್ಲಿಯವರೆಗೆ ತೈಲ ಕಂಪನಿಗಳು ಉಜ್ವಲಾ ಯೋಜನೆಯ ಸುಮಾರು 7.15 ಕೋಟಿ ಫಲಾನುಭವಿಗಳ ಖಾತೆಗೆ 5,606 ಕೋಟಿ ರೂಪಾಯಿ ಹಾಕಲಾಗಿದೆ.
ಇದರ ಅಡಿಯಲ್ಲಿ ಕಂಪನಿಗಳು ಪ್ಯಾಕೇಜ್ ಪ್ರಕಾರ 14.2 ಕೆಜಿ ಅಥವಾ ಐದು ಕೆಜಿ ಸಿಲಿಂಡರ್ ಮೌಲ್ಯಕ್ಕೆ ಸಮಾನವಾದ ಮುಂಗಡವನ್ನು ಫಲಾನುಭವಿಯ ಖಾತೆಯಲ್ಲಿ ಜಮಾ ಮಾಡುತ್ತವೆ. ಈ ಮೊತ್ತದೊಂದಿಗೆ ಗ್ರಾಹಕರು ಸಿಲಿಂಡರ್ ಪಡೆಯಬಹುದು.
ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್‌ನಂತಹ ಕಂಪನಿಗಳು ಈಗಾಗಲೇ ವಿತರಣಾ ಬಾಯ್ ಗಳು ಸೇರಿದಂತೆ ಪೂರೈಕೆ ಸರಪಳಿಯ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಮ್ಮ ಉದ್ಯೋಗಿಗಳಿಗೆ ಐದು ಲಕ್ಷ ರೂಪಾಯಿ ವಿಮೆ ಘೋಷಣೆ ಮಾಡಿದೆ.
ಒಂದು ವೇಳೆ ಕೊರೊನಾ ಸೋಂಕಿನಿಂದ ಸಿಬ್ಬಂದಿ ಸಾವನ್ನಪ್ಪಿದ್ರೆ ಕುಟುಂಬಸ್ಥರಿಗೆ ವಿಮೆ ಹಣ ಸಿಗಲಿದೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ