ಕುರಿಗಾಯಿಗೂ ಕೊರೋನಾ ಶಂಕೆ : ಮೇಕೆಗಳಿಗೆ ಕ್ವಾರಂಟೈನ್.?
ತುಮಕೂರು : ಈಗಾಗಲೇ ಹಸು, ಧನಗಳಿಗೆ ಕೊರೋನಾ ಸೋಂಕಿನ ಪ್ರಕರಣಗಳು
ಅಲ್ಲಲ್ಲಿ ವರದಿಯಾಗಿವೆ. ಇದರ ಬೆನ್ನಲ್ಲೆ ಕುರಿಗಾಯಿಯೊಬ್ಬರಿಗೆ ಕೊರೋನಾ ಶಂಕೆ
ವ್ಯಕ್ತವಾಗಿದ್ದು, ಈತ ಕಾಯುತ್ತಿದ್ದಂತ ಮೇಕೆಗಳಿಗೂ ಕೊರೋನಾ ಸೋಂಕು ತಗುಲಿದ್ಯಾ ಎಂಬ
ಶಂಕೆ ಕೂಡ ವ್ಯಕ್ತವಾಗಿದೆ. ಹೀಗಾಗಿ ಮೇಕೆಗಳನ್ನು ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ
ಒಳಪಡಿಸುವಂತ ನಿರ್ಧಾರಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ ಎನ್ನಲಾಗುತ್ತಿದೆ. ಅಲ್ಲದೇ
ಕುರಿಗಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆತನಿಗೂ ಕೊರೋನಾ ಸೋಂಕು ಪತ್ತೆ
ಪರೀಕ್ಷೆಗೆ ಒಳಪಡಿಸಲಾಗಿದೆ.
ತುಮಕೂರು
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದಲ್ಲಿನ ಕುರಿಗಾಯಿ
ವ್ಯಕ್ತಿಯೊಬ್ಬ ಜ್ವರದಿಂದ ಬಳಲುತ್ತಿದ್ದರು. ಇದೇ ಕಾರಣದಿಂದಾಗಿ ಆಸ್ಪತ್ರೆಗೂ ದಾಖಲಾಗಿ
ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂತಹ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.
ಅಲ್ಲದೇ ಈತ ಕಾಯುತ್ತಿದ್ದಂತ ಮೇಕೆಗಳಿಗೂ ಕೊರೋನಾ ಸೋಂಕು ತಗುಲಿರುವ ಶಂಕೆ
ವ್ಯಕ್ತವಾಗಿದ್ದು, ಮೇಕೆಗಳನ್ನು ಕ್ವಾರಂಟೈನ್ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.
ಇನ್ನೂ
ಜ್ವರದಿಂದ ಬಳಲುತ್ತಿದ್ದಂತ ಕುರಿಗಾಯಿ ವ್ಯಕ್ತಿಯ ಸ್ನೇಹಿತನ 5 ಮೇಕೆಗಳು ಇತ್ತೀಚೆಗೆ
ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದವು ಎಂದು ತಿಳಿದು ಬಂದಿದೆ. ಈ ಎಲ್ಲಾ ಕಾರಣದಿಂದಾಗಿ
ಕೊರೋನಾ ಸೋಂಕಿನ ಭೀತಿ ಎದುರಾಗಿದೆ. ಮುಂಜಾಗ್ರತಾ ಕ್ರಮವಾಗಿ ಜ್ವರದಿಂದ ಬಳಲುತ್ತಿದ್ದಂತ
ಕುರಿಗಾಯಿಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡುತ್ತಿದ್ದರೇ,
ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಮೇಕೆಗಳನ್ನು ಕೊರೋನಾ ಸೋಂಕಿನ ಶಂಕೆಯಿಂದ ಕ್ವಾರಂಟೈನ್
ಮಾಡಲಾಗುತ್ತಿದೆ. ಕೊರೋನಾ ಸೋಂಕು ಪತ್ತೆ ಪರೀಕ್ಷೆಗೂ ಒಳಪಡಿಸಲಾಗುತ್ತಿದೆ ಎಂದು
ಹೇಳಲಾಗುತ್ತಿದೆ.
(ಮಾಹಿತಿ ಕೃಪೆ Kannada News Now )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ