ಬೆಂಗಳೂರು: ಗೃಹಜ್ಯೋತಿ ಯೋಜನೆ ಅಡಿ 200 ಯೂನಿಟ್ ವಿದ್ಯುತ್ ಉಚಿತ, ಯುವನಿಧಿ ಯೋಜನೆ ಅಡಿ ಪದವೀಧರರಿಗೆ 3000 ಸಾವಿರ, ಡಿಪ್ಲೊಮೊ ಪದವೀಧರರಿಗೆ 1500 ನಿರುದ್ಯೋಗ ಭತ್ಯೆ, ಅನ್ನಭಾಗ್ಯ ಅಡಿ 10 ಕೆಜಿ ಅಕ್ಕಿ ಉಚಿತ, ಗೃಹ ಲಕ್ಷಿ ಯೋಜನೆ ಅಡಿ ಪ್ರತಿ ಮನೆಯ ಯಜಮಾನಿಗೆ 2000 ಸಾವಿರ ರೂಪಾಯಿ ಭತ್ಯೆ ನೀಡಲಾಗುತ್ತದೆ ಎಂಬ ಭರವಸೆಗಳು ಇಂದು ಕಾಂಗ್ರೆಸ್ ಪಕ್ಷಕ್ಕೆ ಗದ್ದುಗೆ ತಂದು ಕೊಟ್ಟಿದೆ ಎಂದು ಹಲವು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ 2019ರಿಂದ ಅಧಿಕಾರ ವಹಿಸಿಕೊಂಡ ಬಳಿಕ ಎಎಪಿ ಸರ್ಕಾರ ರಾಜ್ಯದ ಜನರಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಿತ್ತು. ಮೊದಲಿಗೆ ರಾಜ್ಯದ ಎಲ್ಲಾ ಫಲಾನುಭವಿಗಳಿಗೂ 200 ಯೂನಿಟ್ ಉಚಿತ ವಿದ್ಯುತ್ ನೀಡಿತ್ತು.
ಇನ್ನು, ಕರ್ನಾಟಕ್ಕೆ ಹೊಲಿಕೆ ಮಾಡಿಕೊಳ್ಳುವುದಾದರೆ ದೆಹಲಿ ಚಿಕ್ಕ ರಾಜ್ಯವಾಗಿದ್ದು, ಜನ ಸಂಖ್ಯೆಯೂ ಕಡಿಮೆ ಇದೆ. ಆದರೆ ನಮ್ಮ ರಾಜ್ಯದಲ್ಲಿ ಯಾವುದೇ ಷರತ್ತು ಇಲ್ಲದೇ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಕೊಡುವುದು ಕಷ್ಟ ಸಾಧ್ಯವಾಗಲಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಏನೆಲ್ಲಾ ಷರತ್ತುಗಳನ್ನು ಮುಂದಿಡಲಿದೆ ಅಂತ ನಿರೀಕ್ಷೆಯ ಕಣ್ಗಗಳಲ್ಲಿ ಜನರು ಕಾಯುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ನೂತನ ಸಂಪುಟ ರಚನೆ ಬೆನ್ನಲ್ಲೇ ಎಲ್ಲಾ ಕಡೆಯೂ ಕಾಂಗ್ರೆಸ್ ಗ್ಯಾರಂಟಿಗಳದ್ದೆ ಮಾತಾಗಿದ್ದು, ಅದರಲ್ಲೂ ಹಳ್ಳಿಗಳಲ್ಲಿ ಉಚಿತ ಕರೆಂಟ್ ಕೊಡ್ತೀವಿ ಅಂತ ಸರ್ಕಾರ, ನಮ್ಮ ಶಾಸಕರು ಹೇಳಿದ್ದಾರೆ. ಆದ್ದರಿಂದ ನಾವು ಕರೆಂಟ್ ಬಿಲ್ ಕಟ್ಟೋದಿಲ್ಲ ಎಂದು ವಿದ್ಯುತ್ ಇಲಾಖೆಯ ಸಿಬ್ಬಂದಿಯೊಂದಿಗೆ ವಾದ ಮಾಡುತ್ತಿರುವ ಹಲವು ಘಟನೆಗಳು ವರದಿಯಾಗಿದೆ.
ಇದರ ನಡುವೆಯೇ ಕೆಲವರು ಹೇಗೂ ಕರೆಂಟ್ ಫ್ರೀ ಸಿಗುತ್ತೆ ಅಂತ ಯೋಚನೆ ಮಾಡಿರುವ ಜನರು, ವಿದ್ಯುತ್ ಉಪಕರಣಗಳನ್ನು ಖರೀದಿ ಮಾಡಲು ಶುರು ಮಾಡಿದ್ದಾರಂತೆ. ವಿದ್ಯುತ್ ಉಪಕರಗಣಗಳ ಬೇಡಿಕೆಯೂ ಶಾಪ್ಗಳಲ್ಲಿ ಹೆಚ್ಚಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 200 ಯೂನಿಟ್ ವಿದ್ಯುತ್ ಬಳಸಿಕೊಳ್ಳಲು ಜನರ ಪ್ಲ್ಯಾನ್ ಮಾಡಿ ಕರೆಂಟ್ ಸ್ಟೌ, ಎಸಿ, ಫ್ಯಾನ್ ಸೇರಿದಂತೆ ಎಲೆಕ್ಟ್ರಿಕ್ ಉತ್ಪನ್ನಗಳನ್ನು ಖರೀದಿ ಮಾಡ್ತಿದ್ದಾರಂತೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ