WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, October 10, 2025

ಮಾಹಿತಿ ಹಕ್ಕು ಅಧಿನಿಯಮ - 2005 ಜಾರಿಗೆ ಬಂದು 20 ವರ್ಷಗಳೇ ಆದವು. ವ್ಯವಸ್ಥೆಗಳು ಬದಲಾದವಾ...?


ಮಾಹಿತಿ ಹಕ್ಕು ಅಧಿನಿಯಮ - 2005 ಜಾರಿಗೆ ಬಂದು 20 ವರ್ಷಗಳೇ ಆದವು. ವ್ಯವಸ್ಥೆಗಳು ಬದಲಾದವಾ...? ಭ್ರಷ್ಟಾಚಾರ ನಿರ್ಮೂಲನೆಯಾಯಿತಾ...? ಕೊನೇಪಕ್ಷ ಪಕ್ಷ ಲಂಚ ನಿಂತು ಹೋಯಿತಾ...? ಅಕ್ರಮ, ಅನಾಚಾರ, ಅಧರ್ಮ ಕೊನೆಗೊಂಡವಾ..? ಉಹ್ಞುಂ, ಯಾವುದೂ ಒಂದು ಪರ್ಸೆಂಟ್ ಕೂಡ ಕಡಿಮೆಯಾಗಲಿಲ್ಲ. ಯಾಕೆ ಹೀಗೆ...? ಲೋಪ ಆಗಿದ್ದೆಲ್ಲಿ...? ಮಾಹಿತಿ ಹಕ್ಕು ಅಧಿನಿಯಮವೇ ಸತ್ವಹೀನವಾದುದಾ...? ಇಲ್ಲ. ಅದು ಸದೃಢವಾಗಿಯೇ ಇದೆ. ಹಾಗಾದರೆ, ಸೋತದ್ದೆಲ್ಲಿ...? ಮತ್ತು ಏಕೆ...? Well, ನಾವು ಆಲೋಚಿಸಬೇಕು ಮತ್ತು ಚರ್ಚಿಸಬೇಕು. ಅದಕ್ಕಾಗಿಯೇ ಈ ಕಾರ್ಯಾಗಾರ.

ದಿ: 12-10-2005 ರಂದು ಮಾಹಿತಿ ಹಕ್ಕು ಅಧಿನಿಯಮ ಜಾರಿಗೆ ಬಂತು. Drive Against Bribe With RTI ಎಂಬ ಪ್ರಯತ್ನಗಳು ಸಾಗಿದವು. ಅನೇಕರು ಅನೇಕ ರೀತಿಗಳಲ್ಲಿ ಈ ಕಾನೂನನ್ನು ಬಳಸಿಕೊಂಡರು. ಆದರೆ, ಸಂಘಟಿತ ಪ್ರಯತ್ನ ದೊಡ್ಡ ಮಟ್ಟದಲ್ಲಿ ಆಗುತ್ತಿರುವ ಹಾಗೆ ಕಾಣುತ್ತಿಲ್ಲ. ಹಿಂದೆ ನಾನು, ರಮೇಶ ಕುಣಿಗಲ್ ಸೇರಿದಂತೆ ಒಂದಷ್ಟು ಸಮಾನ ಮನಸ್ಕರು ಸೇರಿ ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರ ವೇದಿಕೆ ಎಂಬುದೊಂದು ರಚಿಸಿ, ಅದಕ್ಕೆ ರಮೇಶ ರಾಜ್ಯಾಧ್ಯಕ್ಷರಾದರು, ನಾನು ರಾಜ್ಯ ಉಪಾಧ್ಯಕ್ಷನಾದೆ. ಕಲ್ಯಾಣ ಕರ್ನಾಟಕ ಉಸ್ತುವಾರಿಯೂ ಆದೆ. ಅದಕ್ಕೂ ಮುಂಚೆ 2011 ರಿಂದ ನಾನೇ ಭ್ರಷ್ಟಾಚಾರ ಮುಕ್ತ ಕರ್ನಾಟಕ ಅಂಥ ಒಂದು ಸಂಘಟನೆ ಮಾಡಿ, ರಾಜ್ಯಾಧ್ಯಕ್ಷನೂ ಆದೆ‌. ಆದರೆ, ಎಲ್ಲೂ ಘಟಕಗಳು ತಲೆ ಎತ್ತಲಿಲ್ಲ. ಒಟ್ಟಾರೆ ವ್ಯವಸ್ಥೆಯ ಸುಧಾರಣೆಗಳಾಗಬೇಕೆಂದು ಭ್ರಷ್ಟಾಚಾರ ಮುಕ್ತ ಕರ್ನಾಟಕ -ಹೀಗೊಂದು ಕನಸು ಎಂಬ ಕೃತಿಯನ್ನು ರಚಿಸಿ, ನ್ಯಾ. ಸಂತೊಕಷ ಹೆಗ್ಡೆ ಅವರಿಂದ ಬಿಡುಗಡೆಗೊಳಿಸಿದೆ. ಅದರಿಂದಲೂ ಏನಾದರೂ ಉಪಕಾರವಾಯಿತೆಂದು ಅನ್ನಿಸಲಿಲ್ಲ. ಇದರ ಮಧ್ಯೆಯೇ ಎದ್ದು ನಿಂತದ್ದು ಕರ್ನಾಟಕ ರಾಷ್ಟ್ರ ಸಮಿತಿ ( KRS ) ಪಕ್ಷ. Yes, ಇದೊಂದು ರಾಜಕೀಯ ಪಕ್ಷ. 

ಒಟ್ಟಾರೆ ಸುಧಾರಣೆಗಳು ಸಾಧ್ಯವಾಗಬೇಕು ಎಂದರೆ ಒಂದು ಸರ್ಕಾರವೇ ಒಳ್ಳೆಯವರ ಕೈಗೆ ಸಿಗಬೇಕು. ಅವರು ಶಾಸನ ಗಳನ್ನು ರೂಪಿಸುತ್ತಾ ಹೋಗಬೇಕು. ಯಾವುದೇ ಕಾನೂನುಗಳು ಜಾರಿಗೆ ಬಂದಿದ್ದು ಕೂಡ ವ್ಯವಸ್ಥೆಯ ಸುಧಾರಣೆಗಳಿಗಾಗಿ. ಆದರೆ, ಸುಧಾರಣೆಗಳಾಗುತ್ತಲೇ ಇಲ್ಲ. ಕಳ್ಳರ ಕೈಗೆ ಅಧಿಕಾರ ಕೊಟ್ಟು ಒಳ್ಳೊಳ್ಳೆ ಕೆಲಸಗಳನ್ನು ಮಾಡುತ್ತಾರೆಂದು ನಿರೀಕ್ಷಿಸುವುದು ಮೂರ್ಖತನ ವಾಗುತ್ತದೆ. ಹಾಗಾಗಿ, ಏನೇ ಆಗಲಿ, ಒಳ್ಳೆಯದನ್ನೇ ಮಾಡಿ, ಮಾಡುತ್ತಲೇ ಇರಿ ಎನ್ನುವವರ ಕೈಗೆ ಅಧಿಕಾರ ಕೊಡಬೇಕು. ಅದೆಂದರೆ, KRS ಪಕ್ಷ. 

ಈ ನಿಟ್ಟಿನಲ್ಲಿ KRS ಪಕ್ಷ ರಾಜ್ಯ SC ST ಘಟಕ ಒಂದಷ್ಟು ಮೈಕೊಡವಿ ಎದ್ದು ನಿಂತಿದ್ದು, ಪಕ್ಷ ಸದೃಢಗೊಳ್ಳಲು ಇರುವ ಅವಕಾಶಗಳನ್ನೆಲ್ಲಾ ಬಳಸಿಕೊಳ್ಳಬೇಕು ಮತ್ತು ಬಳಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ನಿಶ್ಚಿಯಿಸಿದೆ. ಅದರ ಭಾಗವೇ RTI. RTI ಅನ್ನು ಬಳಸುವುದು ತುಂಬಾ common ಎಂಬಂಥ ಹಂತಕ್ಕೆ ತಂದು ನಿಲ್ಲಿಸಿದಾಗ, ಬಳಸುವವರ ಸಂಖ್ಯೆ ಹೆಚ್ಚಾದಂತೆಲ್ಲಾ, ಸುಧಾರಣೆಗಳು ಸಾಧ್ಯವಾಗುತ್ತಾ ಹೋಗುತ್ತವೆ. ಅದರ ಮೊದಲ ಹಂತವೆಂದರೆ, ತಾವು ಭ್ರಷ್ಟಾಚಾರದಿಂದ ಬಚಾವಾಗುತ್ತಾ ಹೋಗುತ್ತಾರೆ. ಇದು ಮೊದಲ ಬೆಳವಣಿಗೆ. ನಾನು ಲಂಚ ಕೊಡಲಿಲ್ಲ; ಭ್ರಷ್ಟಾಚಾರಕ್ಕೆ ಒಳಗಾಗಲಿಲ್ಲ; ನನ್ನ ಕೆಲಸಗಳನ್ನು ಸಲೀಸಾಗಿ ಮಾಡಿಸಿಕೊಂಡು ಬಂದರೆ, ಈ ಸದ್ಯದ ದೊಡ್ಡ ಗೆಲುವು ಅದೇ ಆಗುತ್ತದೆ. ಹಾಗೆಂದೇ, KRS ಪಕ್ಷ ರಾಜ್ಯ SC ST ಘಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಬಂದು ಮಾಹಿತಿ ಹಕ್ಕು ತರಬೇತಿ ನೀಡಲು ಮುಂದಾಗಿದೆ. ಅದರ ಮೊದಲ ಪ್ರಯತ್ನವೇ ನಾಡಿದ್ದು ಹೊಸಪೇಟೆಯಲ್ಲಿ ಈ ಕಾರ್ಯಾಗಾರ‌. 

ಹೊಸಪೇಟೆಯಲ್ಲಿ ಮಾಡುತ್ತಿರುವುದು ಸರಿ‌. ಹೊಸಪೇಟೆಯ ಯಾವ ಸ್ಥಳದಲ್ಲಿ...? ಎಂಬುದು ಇನ್ನೂ ನಿಕ್ಕಿಯಾಗಿಲ್ಲ. ಯಾಕೆಂದರೆ, ಯಾವುದೇ Hall ನಲ್ಲಿ ಕಾರ್ಯಾಗಾರ ಮಾಡಬೇಕೆಂದರೂ ಹಣ ಕೊಡಬೇಕು. ನಮ್ಮ ಘಟಕದಲ್ಲಿ ಹಣವಿಲ್ಲ. ಹಾಗಾಗಿ, ಸ್ಥಳ ಅಖೈರುಗೊಳಿಸಿಲ್ಲ. ದಾನಿಗಳು ಮುಂದೆ ಬಂದು, ಹಾಲ್ ಬುಕ್ ಮಾಡಿ ಕೊಟ್ಟರೆ ಉಪಕಾರವಾದೀತು. 

ದೇಣಿಗೆ ನೀಡುವವರು KRS ಪಕ್ಷದ QR Code ಗೆ ನೇರವಾಗಿ ದೇಣಿಗೆ ನೀಡಿ, ನನ್ನ ನಂಬರ್'ಗೆ ವಾಟ್ಸಪ್ ಮಾಡಿದರೆ ಉಪಕಾರವಾದೀತು. ದಯವಿಟ್ಟು ದೇಣಿಗೆ ನೀಡಿ. ಮತ್ತು ಮುಖ್ಯವಾಗಿ, ಮಾಹಿತಿ ಹಕ್ಕು ಕಾರ್ಯಾಗಾರದಲ್ಲಿ ದಯವಿಟ್ಟು ಪಾಲ್ಗೊಳ್ಳಿ... 🙏

ದಿ: 12-10-2025.
ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ‌.

ಪ.ಯ. ಗಣೇಶ,
ರಾಜ್ಯಾಧ್ಯಕ್ಷ,
KRS ಪಕ್ಷ ರಾಜ್ಯ SC ST ಘಟಕ
9481 711 600.


 

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ