Saturday, December 27, 2025
ಗಂಗಾವತಿಯ ವಾಸ್ತು ತಜ್ಞರಾಗಿರುವ ಮಂಜುನಾಥ ಕುರುಗೋಡು ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ
Friday, October 10, 2025
ದಿನಾಂಕ:- 10/10/2025 ಪೇಪರ್ ಚಿತ್ರ ನ್ಯೂಸ್
ಈ ದಿನದ ನ್ಯೂಸ್ ಪೇಪರ್ ಇಂದ ಈ ಇಮೇಜ್ ಅನ್ನು ಕಟ್ ಮಾಡಿ ಹಾಕಲಾಗಿರುತ್ತದೆ...
ನಿಮಗೂ ಈ ರೀತಿ ಪೇಪರ್ ಕಟಿಂಗ್ ಇಷ್ಟವಾದಲ್ಲಿಕಮೆಂಟ್ ಮಾಡಿ ತಿಳಿಸಿಪ್ರತಿದಿನವೂಪಾಪ್ಯುಲರ್ ನ್ಯೂಸ್ ಹಾಕಲಾಗುವುದು
ಮಾಹಿತಿ ಹಕ್ಕು ಅಧಿನಿಯಮ - 2005 ಜಾರಿಗೆ ಬಂದು 20 ವರ್ಷಗಳೇ ಆದವು. ವ್ಯವಸ್ಥೆಗಳು ಬದಲಾದವಾ...?
Wednesday, October 8, 2025
ದಿನಾಂಕ:- 08/10/2025 ಪೇಪರ್ ಚಿತ್ರ ನ್ಯೂಸ್
ನಿಮಗೂ ಈ ರೀತಿ ಪೇಪರ್ ಕಟಿಂಗ್ ಇಷ್ಟವಾದಲ್ಲಿಕಮೆಂಟ್ ಮಾಡಿ ತಿಳಿಸಿಪ್ರತಿದಿನವೂಪಾಪ್ಯುಲರ್ ನ್ಯೂಸ್ ಹಾಕಲಾಗುವುದು
Saturday, March 8, 2025
ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು
ಗರ್ಭವೆಂಬ ಸ್ವರ್ಗದೊಳು
ನವಮಾಸ ಹೊತ್ತುಕೊಂಡು
ಧರೆಯ ನಿಸರ್ಗಕ್ಕೆ ನನ್ನ ತಂದಾಕೆ.
ತಾರೆಗಳ ಊರಿನೊಳು
ನಲಿವ ಚಂದಿರನ ತೋರಿಸಿ
ಒಡಲಿಗೆ ಕೈತುತ್ತನು, ತಿನಿಸಿದಾಕೆ.
ಕಲ್ಲು ದೇವರಿಗಿಂತ
ಕಲ್ಲು ಸಕ್ಕರೆಯಂತ ಸಿಹಿ
ಗುಣದ ಮೃದು ಮನಸ್ಸುಳ್ಳಾಕೆ
ಕೆಟ್ಟ ದೃಷ್ಟಿಯ ಕಣ್ಣು
ಕಂದನಿಗೆ ಕಾಡದಿರಲೆಂದು
ಸೆರಗಿನ ಮರೆ ಅಮೃತ ಕೊಟ್ಟಾಕೆ
ಅತ್ತಾಗ ರಮಿಸಲು ನಡು
ಇರುಳು ನಿದ್ರೆಯ ತೊರೆದು
ಮಲ ಮೂತ್ರವನ್ನ ತೊಳೆದಾಕೆ
ಮನೆಯನ್ನು, ಶಾಲೆ ಮಾಡಿ
ಕಂದಗೆ ಮೊದಲ ಗುರುವಾಗಿ
ಈ. ಜಗದಿ ನಗುನಗುತ ಮೆರೆದಾಕೆ
ಎಷ್ಷೇ ಹುಟ್ಟು ತಾಳಿದರು
ಈ.ನಿನ್ನ ಮಮತೆ ಋಣವು
ತೀರಿಸಲಾಗದು ನಮ್ಮ ಜನುಮಕೆ.!
ಎಲ್ಲರಿಗೂ ವಿಶ್ವ ಮಹಿಳಾ
ದಿನಾಚರಣೆಯ ಶುಭಾಶಯಗಳು
Thursday, March 6, 2025
ನಲ್ಲಾಪುರ ಗ್ರಾಮದ ಸಮಸ್ಯೆ ಕುರಿತು ಜನರ ಮಾತು
Monday, February 24, 2025
ಚಲನಚಿತ್ರೋತ್ಸವಕ್ಕೆ ತಿರಸ್ಕೃತಗೊಂಡ ಪಪ್ಪಿ ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ
ಲೈಟ್ ಬಾಯ್ ಆಗಿದ್ದ ಆಯುಷ್ ಮಲ್ಲಿ ಸಿನಿಮಾ ಸಾಹಸ
ಉತ್ತರ ಕರ್ನಾಟಕದ ಜನಜೀವನ ಕುರಿತ ಪಪ್ಪಿ ಸಿನಿಮಾ ಟ್ರೇಲರ್ ಬಹಳ ಸದ್ದು ಮಾಡುತ್ತಿದೆ. ಈ ಸಿನಿಮಾದ ನಿರ್ದೇಶಕ ಆಯುಷ್ ಮಲ್ಲಿ ತನ್ನ ಬದುಕಿನ ಕಥೆ, ಸಿನಿಮಾ ಮಾಡಿದ ಸಾಹಸಗಳನ್ನಿಲ್ಲಿ ವಿವರಿಸಿದ್ದಾರೆ.
* ಪ್ರಿಯಾ ಕೆರ್ವಾಶೆ
* ನನ್ನ ಹುಟ್ಟೂರು ಉತ್ತರ ಕರ್ನಾಟಕದ ಸಿಂಧನೂರು. ಪಿಯುಸಿಯಲ್ಲಿ ಡುಮ್ಮಿ ಹೊಡೆದೆ. ಆಮೇಲೆ ಸಿನಿಮಾ ಮಾಡಬೇಕು ಅಂತ ಬೆಂಗಳೂರಿ ಗೇನೋ ಬಂದೆ. ಐಬಿಎಂನಲ್ಲಿ ಇಟ್ಟಿಗೆ ಶಿಫ್ಟ್ ಮಾಡುವ ಕೆಲಸಕ್ಕೆ ಸೇರಿಕೊಂಡೆ. ಮುಂದೆ ಸೀರಿಯಲ್ ಸೆಟ್‌ನಲ್ಲಿ ಲೈಟ್ ಬಾಯ್ ಕೆಲಸ ಸಿಕ್ಕಿತು. ಆಮೇಲೆ ಅಲ್ಲೇ ಪ್ರೊಡಕ್ಷನ್ ಬಾಯ್, ಅಸಿಸ್ಟೆಂಟ್ ಡೈರೆಕ್ಟರ್ ತನಕ ಕೆಲಸ ಸಿಕ್ಕಿತು.
* ಕಳೆದ ನಾಲೈದು ವರ್ಷಗಳಿಂದ ಸರಿಯಾದ ಅವಕಾಶ ಸಿಗದೆ ಊರು, ಬೆಂಗಳೂರಿನ ನಡುವೆ ಅಲೆದಾಡುತ್ತಿದ್ದೆ. ತುಂಬಿದ ಬಸ್ಸಿನಲ್ಲಿ ನಮ್ಮೂರ ಜನರ ಜೊತೆ ಓಡಾಟ. ಡಾಬಾದಲ್ಲಿ ಊಟಕ್ಕೆ ಅಂತ ಬಸ್ ನಿಲ್ಲಿಸಿದರೆ ಜನ ಅಲ್ಲಿ ಊಟ ಮಾಡಲು ದುಡ್ಡಿಲ್ಲದೆ, ದೂರದಲ್ಲಿ ಕೂತು ತಾವು ಮನೆಯಿಂದ ಕಟ್ಟಿಕೊಂಡು ಬಂದ ಒಣರೊಟ್ಟಿ, ಖಾರಪುಡಿ ತಿನ್ನುತ್ತಿದ್ದರು. ಕೆಲವರು ಬಸ್ಸಿಗೂ ಕಾಸಿಲ್ಲದೆ ಟ್ರಕ್‌ನಲ್ಲಿ ಓಡಾಡುತ್ತಿದ್ದರು. ಆದರೂ ಬೆಂಗಳೂರಿಗೆ ಬಂದಿಳಿದಾಗ ಅವರ ಮುಖದಲ್ಲೊಂದು ಹುಮ್ಮಸ್ಸು, ವಿಧಾನಸೌಧ ಕಂಡಾಗ ಆಗುವ ಖುಷಿ ಇವೆಲ್ಲ ನನ್ನನ್ನು ಬಹಳ ಕಾಡಿಸಿತ್ತು. ಇದನ್ನೆಲ್ಲ ಸಿನಿಮಾ ಮೂಲಕ ಹೇಳಬೇಕು ಅಂತ ತೀವ್ರವಾಗಿ ಅನಿಸುತ್ತಿತ್ತು.
* ಸಿನಿಮಾ ಮಾಡೇ ಬಿಡಾಣ ಅನಿಸಿತು. ಕೆಲಸಕ್ಕಿಳಿದೆ. ಕಥೆ ತಲೆಯಲ್ಲಿತ್ತು. ಕ್ಯಾಮರಾಮೆನ್
ಸುರೇಶ್ ಬಾಬು ಹಾಗೂ ಸಿಂಕ್ ಸೌಂಡ್ ಕೆಲಸ ಮಾಡುತ್ತಿದ್ದ ಸ್ನೇಹಿತನ ಸಮೇತ ಸಿನಿಮಾ ಕೆಲಸ ಶುರು ಮಾಡಿದೆ. ನನಗೆ ಸೀರಿಯಸ್ ಸಿನಿಮಾ ಜನ ನೋಡುತ್ತಾರೆ ಅನ್ನುವ ನಂಬಿಕೆ ಇಲ್ಲ. ಜೊತೆಗೆ ದೊಡ್ಡವರ ಮೂಲಕ ಕಥೆ ಹೇಳೋದಕ್ಕಿಂತ ಹುಡುಗರ ಮೂಲಕ ಹೇಳಿದರೆ ಪರಿಣಾಮಕಾರಿ ಅನಿಸಿತು. ಹಾಗೆ ರೀಲ್ಸ್ ಮಾಡುತ್ತಿದ್ದ ಕೊಪ್ಪಳದ ಹುಡುಗ ಜಗದೀಶ ಮತ್ತು ನನ್ನ ಸಂಬಂಧಿ ಆದಿ
Friday, February 21, 2025
ವಿಶ್ವ ಮಾತೃ ಬಾಷಾ ದಿನ ಶುಭಾಶಯಗಳು
ಈ ದಿನವನ್ನು ಯುನೆಸ್ಕೋ ( UNESCO ) 1999 ರಲ್ಲಿ ಘೋಷಿಸಿ, 2000 ರಿಂದ
ಅಧಿಕೃತವಾಗಿ ಆಚರಿಸಲಾಗುತ್ತಿದೆ.
ಉದ್ದೇಶ:- ಮಾತೃಭಾಷೆಗಳ ಸಂರಕ್ಷಣೆ ಮತ್ತು ಪ್ರಚಾರ.
ಭಾಷಾ ವೈವಿಧ್ಯತೆ ಮತ್ತು ಬಹುಭಾಷ ಸಂಸ್ಕೃತಿಯನ್ನು ಉತ್ತೇಜಿಸಲು.
ವಿಶ್ವದಾದ್ಯಂತ ಭಾಷೆಗಳ ಮೌಲ್ಯವನ್ನು ಒತ್ತಿ ಹೇಳಲು.
ಇತಿಹಾಸ:- ಈದಿನದ ಹಿಂದೆ 1952 ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಭಾಷಾ ಚಳುವಳಿ
(Language Movement ) ಕೀಳಾಗಿದೆ. ಪಾಕಿಸ್ತಾನ ಸರ್ಕಾರ ಬಾಂಗ್ಲಾ ಭಾಷೆಗೆ ವಿರೋಧ ವ್ಯಕ್ತಪಡಿಸಿದಾಗ, ವಿದ್ಯಾರ್ಥಿಗಳು ಆಪತ್ತಿನ ವಿರುದ್ದ ಹೋರಾಟ ನಡೆಸಿದರು. ಫೆಬ್ರವರಿ 21, 1952 ರಂದು ಕೆಲ ವಿದ್ಯಾರ್ಥಿಗಳು ಪೊಲೀಸರ ಗುಂಡಿಗೆ ಬಲಿಯಾದರು. ಅವರ ಬಲಿದಾನವನ್ನು ಗೌರವಿಸಲು, ಈ ದಿನವನ್ನು ಮಾತೃಭಾಷ ದಿನವಾಗಿ ಘೋಷಿಸಲಾಯಿತು.
Friday, January 31, 2025
ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ
ಜೆ. ಕಾರ್ತಿಕ್
ಪುಣ್ಯಸ್ಮರಣೆ ಕಾರ್ಯಕ್ರಮ
Tuesday, January 14, 2025
ಮಕರ ಸಂಕ್ರಾಂತಿ ಭಾರತೀಯ ಹಬ್ಬವಾಗಿದೆ
Friday, January 10, 2025
ನಲ್ಲಾಪುರ ಗ್ರಾಮದ ಚರಂಡಿಗಳ ಸ್ಥಿತಿ|| ಅನಾರೋಗ್ಯಕ್ಕೆ ತುತ್ತಾಗುವ ಜನರು...
ಸೀತಾರಾಮ ತಾಂಡ ಗ್ರಾಮ ಪಂಚಾಯಿತಿ. ವ್ಯಾಪ್ತಿಯಲ್ಲಿ ಬರುವ ನಲ್ಲಾಪುರ ಗ್ರಾಮ...
ಇಲ್ಲಿ ಚರಂಡಿಗಳು ಸ್ಥಿತಿ ಅಡಿಗಟ್ಟು ಹೋಗಿರುವುದು ಸಂಬಂಧಪಟ್ಟ ಅಧಿಕಾರಿಗಳು
ಕೂಡಲೇ ಗಮನಹರಿಸ ಬೇಕಾಗಿ ವಿನಂತಿಸಿಕೊಳ್ಳುತ್ತೇನೆ...
Friday, November 1, 2024
Thursday, October 31, 2024
ಸು ವಿಚಾರ I ಮಾಧುರಿ
ನಮ್ಮ ಆತ್ಮವಿಶ್ವಾಸ, ನಮ್ಮ ನಂಬಿಕೆಯನ್ನುಮಿಕ್ಕೆಲ್ಲವನ್ನು ಸಿಕ್ಕದ್ದಕ್ಕಿಂತ ಹೆಚ್ಚು ಪ್ರಮಾಣದಲ್ಲಿ
ಬೇರೆಯವರ ಸಲುವಾಗಿ ಬದಲು ಮಾಡಿಕೊಳ್ಳ
ಬಾರದು ಐದು ಬೆರಳು ಐದು ರೀತಿಯಲ್ಲಿ
ಇರುವಂತೆ ಜೀವನದಲ್ಲಿ ಬರುವ ಜನರೂ
ಬಗೆಬಗೆಯಾಗಿ ಇರುತ್ತಾರೆ. ನಮ್ಮ ವಿಶ್ವಾಸ
ಮತ್ತು ನಂಬಿಕೆ ಜನರು ನಮ್ಮ ಜೊತೆಗೆ ಹೇಗೆ
ಇದ್ದಾರೆ ಎಂಬುದರ ಮೇಲೆ
ನಿರ್ಧಾರವಾಗಿರುತ್ತದೆ. ಒಬ್ಬರು ನಮ್ಮೊಂದಿಗೆ
ಬಹಳ ಒಳ್ಳೆಯವರಾಗಿದ್ದಾರೆ ಎಂದರೆ ಎಲ್ಲರಿಗೂ
ಒಳ್ಳೆಯವರೇ ಎಂದಲ್ಲ. ಕೆಟ್ಟವರಾಗಿದ್ದಾರೆ
ಎಂದರೆ ಕೆಟ್ಟವರಲ್ಲ. ಸಮಯ ಪರಿಸ್ಥಿತಿ ಮತ್ತು
ಸಂದರ್ಭ ಮನುಷ್ಯನ ನಡವಳಿಕೆಯನ್ನು
ಬದಲಿಸಬಹುದು.
ನಮ್ಮ ಆತ್ಮವಿಶ್ವಾಸ ಮತ್ತು ನಂಬಿಕೆ
ಕಳೆದುಕೊಳ್ಳದೆ, ನಮಗೆ ಪ್ರೀತಿ ವಿಶ್ವಾಸ
ತೋರಿದವರಿಗೆ ಪ್ರೀತಿ, ಅವಮಾನ
ಮಾಡಿದವರಿಗೆ ನಿರ್ಲಕ್ಷ್ಯ, ನೋವು
ಕೊಟ್ಟವರನ್ನು ದೂರ ಇಡುವುದು, ಸಂಶಯ
ಪಡುವವರು ಮತ್ತು ಕೆಡಕುಬಯಸುವವರಿಂದ
ಅಂತರ ಕಾಯ್ದುಕೊಂಡರೆ ಜೀವನದಲ್ಲಿ
ನೆಮ್ಮದಿಯಾಗಿರಬಹುದು. ನಮಗೆ
ದೊರೆತದ್ದನ್ನು ಹಿಂದಿರುಗಿಸಿ ಕೊಡುವ ಅಭ್ಯಾಸ
ಇಟ್ಟುಕೊಳ್ಳಬೇಕು. ಮೋಸ ವಂಚನೆ ಬಿಟ್ಟು,





















