
ಎಸ್ ಬಿಐಗೆ 44 ಕೋಟಿಗೂ ಹೆಚ್ಚು ಮಂದಿ ಖಾತೆದಾರರಿದ್ದಾರೆ. ಈ ವ್ಯವಸ್ಥೆಯು ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಚೆಕ್ ಬುಕ್ ಪಡೆದಿರುವ ಎಸ್ ಬಿಐನ ಎಲ್ಲ ಖಾತೆದಾರರಿಗೆ ಇದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದು, ಈ ಶುಲ್ಕ ಮನ್ನಾ ಎಲ್ಲ ಖಾತೆಗಳಿಗೂ ಅನ್ವಯ ಆಗಲಿದೆ ಎಂದು ತಿಳಿಸಲಾಗಿದೆ. ಈ ವರ್ಷದ ಮಾರ್ಚ್ ನಲ್ಲಿ ಎಸ್ ಬಿಐ ಘೋಷಣೆ ಮಾಡಿ, ಸರಾಸರಿ ತಿಂಗಳ ಮೊತ್ತ (ಆವರೇಜ್ ಮಂತ್ಲಿ ಬ್ಯಾಲೆನ್ಸ್ ಅಥವಾ ಎಎಂಬಿ) ನಿರ್ವಹಿಸದವರಿಗೆ ಶುಲ್ಕ ಮನ್ನಾ ಮಾಡುವುದಾಗಿ ತಿಳಿಸಿತ್ತು. ಈ ಹಿಂದೆ ಎಸ್ ಬಿಐನಲ್ಲಿ ಮೆಟ್ರೋ ನಗರಗಳಲ್ಲಿ 3 ಸಾವಿರ, ಅರೆ ಪಟ್ಟಣ ಪ್ರದೇಶಗಳಲ್ಲಿ 2 ಸಾವಿರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 1 ಸಾವಿರ ರುಪಾಯಿ ಕನಿಷ್ಠ ಮೊತ್ತವನ್ನು ಎಎಂಬಿ ಆಗಿ ನಿರ್ವಹಿಸಬೇಕಿತ್ತು.
ಯಾರು ಈ ಮೊತ್ತವನ್ನು ನಿರ್ವಹಿಸುವುದಿಲ್ಲವೋ ಅಂಥವರಿಗೆ 5ರಿಂದ 15 ರುಪಾಯಿ, ಜತೆಗೆ ತೆರಿಗೆಯನ್ನು ಶುಲ್ಕವಾಗಿ ವಿಧಿಸಲಾಗುತ್ತಿತ್ತು. ಸದ್ಯಕ್ಕೆ ಎಸ್ ಬಿಐನಿಂದ ಉಳಿತಾಯ ಖಾತೆದಾರರಿಗೆ ವಾರ್ಷಿಕ ಬಡ್ಡಿ ದರ 2.7% ನೀಡಲಾಗುತ್ತಿದೆ.
(ಮಾಹಿತಿ ಕೃಪೆGood Returns)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ