
ನವದೆಹಲಿ, ಸೆಪ್ಟೆಂಬರ್ 29: ಜಾಗತಿಕವಾಗಿ ಮಹಾಮಾರಿ ಕೊರೊನಾವೈರಸ್ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರ ಸಂಖ್ಯೆಯು ವಿಶ್ವದಾದ್ಯಂತ 1 ಮಿಲಿಯನ್‌ಗಿಂತಲೂ (10 ಲಕ್ಷ) ಹೆಚ್ಚಾಗಿದೆ.
ರಾಯಿಟರ್ಸ್ ಲೆಕ್ಕಾಚಾರದ ಪ್ರಕಾರ ಜಾಗತಿಕವಾಗಿ ಕೋವಿಡ್ ಸಾಂಕ್ರಾಮಿಕಕ್ಕೆ 10 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದು, ಹಲವಾರು ದೇಶಗಳಲ್ಲಿ ಸೋಂಕುಗಳು ಮತ್ತೆ ಹೆಚ್ಚಾಗುವುದರಿಂದ ಸಾವು-ನೋವುಗಳು ಹೆಚ್ಚಾಗುವ ಸಾಧ್ಯತೆ ಇದೆ. ಕೊರೊನವೈರಸ್-ಸಂಬಂಧಿತ ಕಾಯಿಲೆಗಳ ಸಾವು ಕೇವಲ ಮೂರು ತಿಂಗಳಲ್ಲಿ ಅರ್ಧ ಮಿಲಿಯನ್‌ನಿಂದ ದ್ವಿಗುಣಗೊಂಡಿದೆ. ಇದು ಅಮೆರಿಕಾ, ಬ್ರೆಜಿಲ್ ಮತ್ತು ಭಾರತದಲ್ಲಿ ಸಂಭವಿಸಿದ ಸಾವುಗಳು ಹೆಚ್ಚಾದ ಪರಿಣಾಮ ಒಟ್ಟು ಪ್ರಮಾಣದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.
(ಮಾಹಿತಿ ಕೃಪೆOneindia)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ