ಅಂಧರು ಸವಾಲಿನ ಜೀವನ ಬದುಕುತ್ತಾರೆ. ದೃಷ್ಟಿ ಇಲ್ಲದೆ ಹೋದ್ರೆ ಜೀವನ ನಡೆಸುವುದು ಕಠಿಣ. ಪ್ರಪಂಚದಾದ್ಯಂತ ಸಂಶೋಧಕರು ಇದಕ್ಕೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ನಡೆಸಿದ್ದಾರೆ. ಆದ್ರೆ ಯಾವುದೂ ಯಶಸ್ವಿಯಾಗಿ ಮಾರುಕಟ್ಟೆಗೆ ಬಂದಿಲ್ಲ.
ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ಮೊನಾಶ್ ವಿಶ್ವವಿದ್ಯಾಲಯದ ಸಂಶೋಧಕರು ಭರವಸೆಯ ಸುದ್ದಿಯೊಂದನ್ನು ನೀಡಿದ್ದಾರೆ. ಮೆದುಳಿನ ಕಸಿ ಸಹಾಯದಿಂದ ದೃಷ್ಟಿಯನ್ನು ಮರಳಿ ತರಲು ಬಯೋನಿಕ್ ಲೈಟ್ ಸಹಾಯಕಾರಿ ಎಂಬ ಭರವಸೆ ನೀಡಿದ್ದಾರೆ. ಇದು ವಿಶ್ವದ ಮೊದಲ ಬಯೋನಿಕ್ ಕಣ್ಣು ಎಂದು ತಂಡ ಹೇಳಿಕೊಂಡಿದೆ.
ಗೆನ್ನಾರಿಸ್ ಬಯೋನಿಕ್ ದೃಷ್ಟಿ ವ್ಯವಸ್ಥೆ ಬಗ್ಗೆ ಸುಮಾರು ಒಂದು ದಶಕದಿಂದ ಸಂಶೋಧನೆ ನಡೆಯುತ್ತಿದೆ. ಹಾನಿಗೊಳಗಾದ ಆಪ್ಟಿಕ್ ನರಗಳನ್ನು ಬೈಪಾಸ್ ಮಾಡುವ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಇದು ರೆಟಿನಾದಿಂದ ಮೆದುಳಿನ ದೃಷ್ಟಿ ಕೇಂದ್ರಕ್ಕೆ ಸಂಕೇತಗಳನ್ನು ರವಾನಿಸುತ್ತದೆ.
ಇದರ ಸಿಸ್ಟಮ್ ಸರಳವಾಗಿದೆ. ಕ್ಯಾಮೆರಾ ಮತ್ತು ವೈರ್‌ಲೆಸ್ ಟ್ರಾನ್ಸ್ ಮಿಟರ್ ಅಳವಡಿಸಿರುವ ಕಸ್ಟಮ್ ವಿನ್ಯಾಸದ ಹೆಡ್ ಗಿಯರನ್ನು ಬಳಕೆದಾರರು ಧರಿಸಬೇಕಾಗುತ್ತದೆ. ಕುರಿಗಳ ಮೇಲೆ ಈಗಾಗಲೇ ಪ್ರಯೋಗ ಯಶಸ್ವಿಯಾಗಿದೆ. ಇದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ತಯಾರಿಯಲ್ಲಿರುವ ಸಂಶೋಧಕರು ಮಾನವ ಕ್ಲಿನಿಕಲ್ ಪ್ರಯೋಗಕ್ಕೆ ಮುಂದಾಗಿದ್ದಾರೆ.
(ಮಾಹಿತಿ ಕೃಪೆ ಕನ್ನಡ ದುನಿಯಾ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ